ಮಹಿಳಾ ಸಾಹಿತಿಗಳಲ್ಲಿ ಡಾ. ನಿರುಪಮಾ ನೈಜ ಗಟ್ಟಿಗಿತ್ತಿ

karnataka sanga nirupama sahitya sambhrama
ಕರ್ನಾಟಕ ಸಂಘದಲ್ಲಿ ಸಾಹಿತಿ ಡಾ. ಸಂಧ್ಯಾ ರೆಡ್ಡಿ ಮಾತನಾಡಿದರು. ಕೆ.ಎಂ.ವಿಜಯಲಕ್ಷ್ಮೀ, ವಿಜಯಾ ಶ್ರೀಧರ್, ಎಂ.ಎನ್.ಸುಂದರರಾಜ್, ಪ್ರೊ. ಎಂ.ಆಶಾಲತಾ, ಬಿ.ಆರ್.ರವೀಂದ್ರನಾಥ ಇದ್ದರು.
Published on

ಶಿವಮೊಗ್ಗ: ನಾಡು ಕಂಡ ಶ್ರೇಷ್ಠ ಮಹಿಳಾ ಸಾಹಿತಿಗಳಲ್ಲಿ ಡಾ. ನಿರುಪಮಾ ಅವರು ನೈಜ ಗಟ್ಟಿಗಿತ್ತಿ. ರಾಜಕೀಯವಾಗಿಯೂ ಅವರಿಗೆ ಒಳ್ಳೆಯ ಹಿಡಿತವಿತ್ತು. ಅವರ ವ್ಯಕ್ತಿತ್ವ, ಸಂಘಟನಾ ಸಾಹಿತ್ಯವನ್ನು ಕೇವಲ ಕಥೆ, ಕಾದಂಬರಿಗಳಿಂದ ಅಳೆಯಲು ಸಾಧ್ಯವಿಲ್ಲ ಎಂದು ಸಾಹಿತಿ ಡಾ. ಸಂಧ್ಯಾ ರೆಡ್ಡಿ ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ನಿರುಪಮಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನಿರುಪಮಾ ಅವರ ವ್ಯಕ್ತಿತ್ವ, ಸಾಹಿತ್ಯ ಮತ್ತು ಸಂಘಟನೆ ವಿಷಯ ಕುರಿತು ಮಾತನಾಡಿದ ಅವರು, ಡಾ. ನಿರುಪಮಾ ಅವರು ಕೇವಲ ಸಾಹಿತಿ, ಸಂಘಟಕಿ, ಪ್ರಕಾಶಕಿ ಆಗಿರಲಿಲ್ಲ. ಮಹಿಳಾ ಸಾಹಿತ್ಯದಲ್ಲಿ ಅವರು ವಿಶಿಷ್ಟ ಸ್ಥಾನದಲ್ಲಿದ್ದಾರೆ ಎಂದರು.
ವಾಸ್ತವಾವಾಗಿ ಮಹಿಳಾ ಸಾಹಿತ್ಯವನ್ನು ಕಡೆಗಣನೆ ಮಾಡಲಾಗುತ್ತಿದೆ. ಮಹಿಳಾ ಸಾಹಿತ್ಯ ಅಡುಗೆ ಮನೆಗೆ ಸೀಮಿತ ಎಂಬಂತೆ ಆಗಿತ್ತು. ಆದರೆ ಇಂದು ಮಹಿಳಾ ಸಾಹಿತ್ಯ ಸಮಾಜಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದ್ದಾರೆ. ನಿಜವಾಗಿಯೂ ಓದುವ ಅಭಿಲಾಷೆಯನ್ನು ಹೆಚ್ಚಿಸಿದ್ದು ಮಹಿಳಾ ಸಾಹಿತಿಗಳು. ಇಂತಹ ಮಹಿಳಾ ಸಾಹಿತ್ಯಕ್ಕೆ ನಿರುಪಮಾ ಅವರು ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಎಂದರು.
ನಿರುಪಮಾ ಅವರ ಮಕ್ಕಳ ಸಾಹಿತ್ಯ ಕುರಿತು ಸಾಹಿತಿ, ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ವಿಜಯಾ ಶ್ರೀಧರ್, ನಿರುಪಮಾ ಅವರ ಬರವಣಿಗೆಯ ದೃಷ್ಟಿ ಕುರಿತು ಸಾಹಿತಿ ಕೆ.ಎಂ.ವಿಜಯಲಕ್ಷ್ಮೀ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ. ಎಂ.ಆಶಾಲತಾ, ನಿರುಪಮಾ ಅವರ ಪುತ್ರ ಬಿ.ಆರ್.ರವೀಂದ್ರನಾಥ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net