ವೈದ್ಯಕೀಯ ಸೇವೆಗೆ ಮರಳಿದ ಡಾ.ಸಿ.ಎನ್.ಮಂಜುನಾಥ್

jds.dr.manju
Published on

ಬೆಂಗಳೂರು:
ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು ರಾಜಕೀಯದಿಂದ ರಿಲ್ಯಾಕ್ಸ್ ಮಾಡಿಕೊಂಡು ಮತ್ತೆ ವೈದ್ಯಕೀಯ ಸೇವೆಗೆ ಹೊರಳಿದ್ದಾರೆ.
ಅನಿವಾಸಿ ಭಾರತೀಯ ಕೃಷ್ಣ ಸ್ವರೂಪ್ ಅವರು ಪ್ರಾರಂಭಿಸಿರುವ ನಗರದ ಸೌತ್ ಎಂಡ್ ವೃತ್ತದಲ್ಲಿರುವ ಬೆಂಗಳೂರು ಆಸ್ಪತ್ರೆಯ ಹೃದ್ರೋಗ ಮುಖ್ಯಸ್ಥರಾಗಿ ಡಾ.ಮಂಜುನಾಥ್ ಕಾರ್ಯ ನಿರ್ವಹಿಸಲಿದ್ದಾರೆ.
ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಡಾ.ಮಂಜುನಾಥ್ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಮಾಡಿದ್ದರು. ಚುನಾವಣೆಯ ಲಿತಾಂಶ ಬರುವುದು ಇನ್ನೂ ಬಾಕಿ ಇರುವಾಗಲೇ ವೈದ್ಯಕೀಯ ಸೇವೆಗೆ ಮರಳಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net