ಡಿಕೆ ಸುರೇಶ್‌ ವಿರುದ್ಧ ಗೆಲುವಿನ ಸೀಕ್ರೆಟ್ ಬಿಚ್ಚಿಟ್ಟ ಡಾ.ಸಿ.ಎನ್‌. ಮಂಜುನಾಥ್‌!

vn
Published on

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ತೀವ್ರ ಗಮನ ಸೆಳೆದಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್‌. ಮಂಜುನಾಥ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೋದರ ಡಿಕೆ ಸುರೇಶ್‌ ವಿರುದ್ಧ ಬರೋಬ್ಬರಿ 2,29,947 ಮತಗಳಿಗೂ ಹೆಚ್ಚು ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಗೆಲುವು ಪ್ರಜ್ಞಾವಂತ ಹಾಗೂ ಮತದಾರರ ಗೆಲುವು. ಈ ಗೆಲುವು ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತೇನೆ. ಎಲ್ಲಾ ಶಕ್ತಿಗಿಂತ ಜನಶಕ್ತಿ ದೊಡ್ಡದು. ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳ ಬಗ್ಗೆ ಕೆಲಸ ಮಾಡುತ್ತೇವೆ ಎಂದರು.

ಪ್ರತಿಷ್ಟಿತ ಹಾಗೂ ಹೈವೋಲ್ಟೆಜ್ ಕ್ಷೇತ್ರವಾಗಿತ್ತು. ಜನ ಪ್ರೀತಿಯಿಂದ ಅಭಿಮಾನದಿಂದ ಮತ ಕೊಟ್ಟಿದ್ದಾರೆ. ಜನ ಕೊಟ್ಟ ಪ್ರೀತಿಗೆ ಧನ್ಯವಾದಗಳು. ಐವತ್ತು ಸಾವಿರ ಅಥವಾ 2 ಲಕ್ಷ ರೇಂಜ್​​ನಲ್ಲಿ ಗೆಲ್ಲುತ್ತೇವೆ ಅಂತಾ ಇತ್ತು. 2 ಲಕ್ಷ ರೇಂಜ್​ನಲ್ಲಿ ಗೆದ್ದಿದ್ದೇವೆ. ಇದಕ್ಕಾಗಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಮಾವ ಹಾಗೂ ಅತ್ತೆಯ ಆರ್ಶೀವಾದ ಪಡೆದವು. ನನ್ನ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಎಚ್​.ಡಿ ದೇವೇಗೌಡ ಅವರು, ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಮತ್ತು ಎಲ್ಲಾ ಸದಸ್ಯರ ಪಾತ್ರವಿದೆ. ದೆಹಲಿಗೆ ಬರುವ ಬಗ್ಗೆ ಹೈಕಮಾಂಡ್​ನಿಂದ 24 ಗಂಟೆಯಲ್ಲಿ ಕರೆ ಬರಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net