ಡಾ.ಬಿ.ಆರ್.ಅಂಬೇಡ್ಕರ್ ನೊಂದ ಸಮಾಜದವರಿಗೆ ನಂದಾದೀಪ

Simple celebration of Dr. Ambedkar Jayanti
ಡಾ.ಬಿ.ಆರ್​. ಅಂಬೇಡ್ಕರ್​
Published on

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು ನೊಂದ ಸಮಾಜದವರಿಗೆ ನಂದಾದೀಪವಾಗಿ ಬಂದರು. ಶೋಷಿತರಿಗೆ ಆಸರೆಯಾದರು ಎಂದು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ನಗರದ ಪುರಭವನದಲ್ಲಿ ಕರ್ನಾಟಕ ಭೀಮ್ ಸೇನೆಯಿಂದ ಸೋಮವಾರ ಆಯೋಜಿಸಿದ್ದ ವಿ.ಶ್ರೀನಿವಾಸ ಪ್ರಸಾದ್, ಆರ್. ಧ್ರುವನಾರಾಯಣ ಹಾಗೂ ಕೆ.ಶಿವರಾಮ್ ಅವರಿಗೆ ನುಡಿ ನಮನ, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಲ್ವಡಿ ಅವರು ಮೀಸಲಾತಿ ನೀಡಿ ಸಮತಾವಾದಿ ಆದರು. ಮೀಸಲಾತಿಯನ್ನು ಅಂಬೇಡ್ಕರ್ ಅವರು ಬಹಳ ಸ್ಪಷ್ಟವಾಗಿ ಸಂವಿಧಾನದ ಮೂಲಕವೇ ನೀಡಿದ್ದಾಗಿ ಅವರು ಸ್ಮರಿಸಿದರು.

ದೇಶದ ಅಖಂಡತೆಗಾಗಿ ಸಂವಿಧಾನವನ್ನು ನಾವೆಲ್ಲರೂ ರಕ್ಷಿಸಿಕೊಳ್ಳಬೇಕು. ಸಂವಿಧಾನ ಎಂದರೆ ದೇಶದ ಸಂಪತ್ತನ್ನು ಸರ್ವರಿಗೂ ಸಮಾನವಾಗಿ ಹಂಚುವ ಉದ್ದೇಶ ಹೊಂದಿದೆ. ಅಂಬೇಡ್ಕರ್ ಜ್ಞಾನದ ಸಂಕೇತ. ಆದ್ದರಿಂದಲೇ ಸ್ಫೂರ್ತಿಯಾಗಿದ್ದಾರೆ. ಗೌತಮ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರನ್ನು ನಾವೆಲ್ಲರೂ ನೆನೆಯುತ್ತಲೇ ಇರಬೇಕು. ಏಕೆಂದರೆ ಅವರೆಲ್ಲರೂ ನಮ್ಮ ವಿಮೋಚಕರಾಗಿದ್ದಾರೆ ಎಂದರು.

ಕರ್ನಾಟಕ ಭೀಮ್ ಸೇನೆ ಅಧ್ಯಕ್ಷ ಶಂಕರ್ ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಗವಿಯಪ್ಪ, ಜಿಲ್ಲಾ ಸಮಿತಿ ಅಧ್ಯಕ್ಷ ಎಸ್. ಸರ್ವೇಶ್, ಮಾಜಿ ಸೈನಿಕ ಸ್ವಾಮಿ ನಾಯಕ, ಮಾಜಿ ಮೇಯರ್ ಪುರುಷೋತ್ತಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net