ಮೃತ ಯುವತಿಯನ್ನು 21 ವರ್ಷದ ಪಾಲಕ್ ರಜಕ್‘ ಎಂದು ಗುರುತಿಸಲಾಗಿದ್ದು, ಕೆಲವೇ ತಿಂಗಳುಗಳ ಹಿಂದೆ ವಿವಾಹವಾಗಿದ್ದರು. ಕುಟುಂಬದವರ ಪ್ರಕಾರ, ಮದುವೆ ಸಮಯದಲ್ಲಿ ಕಾರು, ಸುಮಾರು 10 ತೊಲ ಚಿನ್ನ ಸೇರಿದಂತೆ ದೊಡ್ಡ ಪ್ರಮಾಣದ ವರದಕ್ಷಿಣೆ ನೀಡಲಾಗಿತ್ತು. ಆದರೂ ಅತ್ತೆ ಮನೆಯವರು ನಿರಂತರವಾಗಿ ಹೆಚ್ಚುವರಿ ಹಣ ಮತ್ತು ವಸ್ತುಗಳ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.