

Dowry: ಮದುವೆಯಾದ ಆರು ತಿಂಗಳೊಳಗೆ ಟೆಕ್ಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಬಾದ್ನಲ್ಲಿ ಭಾನುವಾರ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಮೃತೆ ಪತಿ ವಿರುದ್ಧ ವರದಕ್ಷಿಣ ಕಿರುಕುಳ ಆರೋಪ ಕೇಳಿಬಂದಿದೆ.
ಹೈದರಾಬಾದ್ ನಿವಾಸಿ 35 ವರ್ಷದ ಸಾಪ್ಟ್ವೇರ್ ಇಂಜಿನಿಯರ್ ದೇವಿಕಾ ಮೃತೆ. ದೇವಿಕಾ ಭಾನುವಾರ ತಡರಾತ್ರಿ ನೇಣಿಗೆ ಶರಣಾಗಿದ್ದಾರೆ. ಪತಿ ಸತೀಶ್ ವಿರುದ್ಧ ಮೃತೆಯ ಕುಟುಂಬಸ್ಥರು ವರದಕ್ಷಿಣ ಕಿರುಕುಳ ಆರೋಪಿಸಿದ್ದಾರೆ. ಇತನ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾನುವಾರ ತಡರಾತ್ರಿ ಒಬ್ಬರ ನಡುವೆ ಜಗಳವಾಗಿದೆ. ಬಳಿಕ ದೇವಿಕಾ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ.ಮುಂಜಾನೆ ಬೆಳಗ್ಗೆ ಎಷ್ಟೇ ಹೊತ್ತದರೂ ಬಾಗಿಲು ತೆರದಿಲ್ಲ. ಹೀಗಾಗಿ, ಡೋರ್ ಹೊಡೆದು ನೋಡಿದರೆ ನೇಣಿಗೆ ಶರಣಾಗಿದ್ದಾಳೆ ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ.
ವರದಿಗಳ ಪ್ರಕಾರ, ಹೈದರಾಬಾದ್ನಲ್ಲಿ ಒಂದೇ ಕಂಪನಿಯಲ್ಲಿ ಕೆಲಸ ಮಾತ್ತಿದ್ದರು. ಲವ್ ಮಾಡಿ ಕುಟುಂಬಸ್ಥರುನ್ನು ಒಪ್ಪಿಸಿ, ಆರು ತಿಂಗಳು ಹಿಂದೆ ಗೋವಾದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು.(ಏಜೆನ್ಸೀಸ್)