

ನವದೆಹಲಿ: ಉಬರ್, ಓಲಾ, ರ್ಯಾಪಿಡೋ ಮುಂತಾದ ಕ್ಯಾಬ್ ಅಗ್ರಿಗೇಟರ್ ಕಂಪನಿಗಳು ಜನದಟ್ಟಣೆ ಹೆಚ್ಚಾಗಿರುವ ಪೀಕ್ ಅವರ್ಗಳಲ್ಲಿ ಮೂಲ ದರದ ಎರಡು ಪಟ್ಟು ಶುಲ್ಕ ವಿಧಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಈ ಮೊದಲು ಒಂದೂವರೆ ಪಟ್ಟು ದರ ವಿಧಿಸಲು ಅನುಮತಿ ಇತ್ತು. ಆದರೆ ಪೀಕ್ ಅವರ್ ಅಲ್ಲದ ಸಮಯದಲ್ಲಿ ಶುಲ್ಕವು ಮೂಲ ದರದ ಕನಿಷ್ಠ ಶೇ. 50ರಷ್ಟಿರಬೇಕು. ಈ ವಿಷಯವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತನ್ನ ‘ಮೋಟಾರು ವಾಹನ ಅಗ್ರಿಗೇಟರ್ಸ್ ಮಾರ್ಗಸೂಚಿ 2025’ರಲ್ಲಿ ತಿಳಿಸಿದೆ. ಮೂಲ ದರವು ಕನಿಷ್ಠ 3 ಕಿಮೀಗೆ ಇರಬೇಕು, ಇದು ಡೆಡ್ವೆುೖಲೇಜ್ಅನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.
ಡೆಡ್ವೆುೖಲೇಜ್ ಎಂದರೆ ಪ್ರಯಾಣಿಕರಿಲ್ಲದೆ ಕ್ರಮಿಸಿದ, ಪ್ರಯಾಣಿಕರನ್ನು ತಲುಪಲು ಕ್ರಮಿಸಿದ ದೂರ ಮತ್ತು ಅದಕ್ಕೆ ಖರ್ಚಾದ ಇಂಧನವನ್ನು ಒಳಗೊಂಡಿರುತ್ತದೆ. ಈ ಮಾರ್ಗಸೂಚಿ ಅಳವಡಿಸಿಕೊಳ್ಳಲು ರಾಜ್ಯಗಳಿಗೆ 3 ತಿಂಗಳು ಕಾಲಾವಕಾಶ ನೀಡಲಾಗಿದೆ.
ಕ್ಯಾನ್ಸಲ್ ಶುಲ್ಕ: ಚಾಲಕ ಅಥವಾ ಪ್ರಯಾಣಿಕ ಸಕಾರಣವಿಲ್ಲದೆ ಟ್ರಿಪ್ ಕ್ಯಾನ್ಸಲ್ ಮಾಡಿದರೆ ಯಾರು ಕ್ಯಾನ್ಸಲ್ ಮಾಡಿರುತ್ತಾರೋ ಅವರ ಮೇಲೆ ಶುಲ್ಕದ ಶೇ. 10ರಷ್ಟು, ಗರಿಷ್ಠ 100 ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಕಾಲ್ಸೆಂಟರ್ ಸ್ಥಾಪನೆ: 24/7 ಕಾರ್ಯ ನಿರ್ವಹಿಸುವ ಕಾಲ್ಸೆಂಟರ್ ಸ್ಥಾಪಿಸಬೇಕು. ಇದರ ಫೋನ್ ನಂಬರ್, ಇ-ಮೇಲ್ ಅಡ್ರೆಸ್ಸನ್ನು ವೆಬ್ಸೈಟ್ ಮತ್ತು ಆಪ್ನಲ್ಲಿ ಪ್ರದರ್ಶಿಸಬೇಕು, ಇಂಗ್ಲಿಷ್ ಮತ್ತು ಆಯಾ ರಾಜ್ಯದ ಅಧಿಕೃತ ಭಾಷೆಯ ಸಂವಹನಕ್ಕೆ ಅವಕಾಶವಿರಬೇಕು. ಅಗ್ರಿಗೇಟರ್ಗಳಿಗೆ 5 ಲಕ್ಷ ರೂ. ಪರವಾನಗಿ ಶುಲ್ಕ ನಿಗದಿಪಡಿಸಲಾಗಿದ್ದು, 5 ವರ್ಷದವರೆಗೆ ಅದರ ವ್ಯಾಲಿಡಿಟಿ ಇರುತ್ತದೆ.
ಅಗ್ರಿಗೇಟರ್ಗಳು ಚಾಲಕರಿಗೆ ಕನಿಷ್ಠ 5 ಲಕ್ಷ ರೂ. ಆರೋಗ್ಯ ವಿಮೆ ಮತ್ತು 10 ಲಕ್ಷ ರೂ. ಟಮ್ರ್ ಇನ್ಶೂರೆನ್ಸ್ ಮಾಡಿಸುವುದು ಕಡ್ಡಾಯ. ದೂರು, ಕುಂದುಕೊರತೆ ನಿವಾರಿಸಲು ಒಬ್ಬ ಅಧಿಕಾರಿಯನ್ನು ನೇಮಿಸಬೇಕು. 8 ವರ್ಷಕ್ಕಿಂತ ಹಳೆಯ ವಾಹನಗಳನ್ನು ಸೇವೆಗೆ ತೆಗೆದುಕೊಳ್ಳಬಾರದು. ವಾಹನದಲ್ಲಿ ಸ್ಥಳ ಟ್ರ್ಯಾಕಿಂಗ್ ಸಾಧನ ಅಳವಡಿಸಿರಬೇಕು. ಅವು ಸದಾ ಸುಸ್ಥಿತಿಯಲ್ಲಿರಬೇಕು. ಆಪ್ನಲ್ಲಿ ಸೂಚಿಸಿದ ಮಾರ್ಗದಲ್ಲೇ ಚಾಲಕ ಹೋಗುತ್ತಿರುವುದನ್ನು ಅಗ್ರಿಗೇಟರ್ ಖಚಿತಪಡಿಸಿಕೊಳ್ಳಬೇಕು. ಮಾರ್ಗ ಬದಲಾದರೆ ಆಪ್ನಿಂದ ಕಂಟ್ರೋಲ್ ರೂಮ್ೆ ಸಂದೇಶ ಹೋಗಿ, ತಕ್ಷಣ ಚಾಲಕ- ಪ್ರಯಾಣಿಕನಿಗೆ ಕರೆ ಬರುತ್ತದೆ.