ಕೆಎಂಎಫ್ ನಿಂದ ಶೀಘ್ರದಲ್ಲೇ ದೋಸೆಹಿಟ್ಟು ಮಾರಾಟ|Dosa flour sale coming soon from KMF

Bhima Naik
Published on

ಬೆಂಗಳೂರು:  ಶೀಘ್ರದಲ್ಲೇ ದೋಸೆಹಿಟ್ಟು ಮಾರಾಟ ಮಾಡಲು ಕ್ರಮಕೈಗೊಳ್ಳುವುದಾಗಿ(Dosa flour sale coming soon from KMF) ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಮ್ಮ ದೋಸೆ ಹಿಟ್ಟು ಉತ್ಪನ್ನ ದೊರೆಯಲಿದೆ. ನಮಗೆ ತಿರುಪತಿಯಲ್ಲಾದ ಅಡ್ಡಿಯಿಂದ ದೋಸೆಹಿಟ್ಟನ್ನು ಅನ್ಯ ರಾಜ್ಯದಲ್ಲಿ ಮಾರಾಟಕ್ಕೆ ಹಿಂದೇಟು ಹಾಕಿದ್ದೆವು. ಆದರೆ ಯಾವುದೇ ರೀತಿಯ ಲಾಬಿ, ಒತ್ತಡ ನಮ್ಮ ಮೇಲೆ ಇಲ್ಲ ಎಂದು ಹೇಳಿದರು.

ದೋಸೆಹಿಟ್ಟು ಮಾರಾಟದಲ್ಲಿ ನಮಗೆ ಆಹಾರ ಇಲಾಖೆಯಿಂದ ಕೆಲವು ಅಂಶಗಳ ಸೇರ್ಪಡೆಗೆ ಸೂಚನೆ ಇದೆ. ಅದರ ಬಗ್ಗೆ ನಾವು ಸಭೆ ಮಾಡಿ ಸೂಕ್ತ ತೀರ್ಮಾನ ಮಾಡುತ್ತೇವೆ. ಈ ವಿಚಾರದಲ್ಲಿ ಬಿಜೆಪಿ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಸಾಮಾಜಿಕ ಮಾಧ್ಯಮದಲ್ಲೂ ಕೂಡಾ ವಿನಾಕಾರಣ ರಾಜಕಾರಣ ಮಾಡಿ ಜನರಿಗೆ ತಪ್ಪು ಸಂದೇಶ ರವಾನೆಯಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹರಿಹಾಯ್ದರು.

ನಾವು ಯಾವುದೇ ಒತ್ತಡಕ್ಕೆ ಮಣಿದಿಲ್ಲ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಗೂ ಇದಕ್ಕೂ ಸಂಬಂಧ ಇಲ್ಲ. ಬಿಜೆಪಿಯವರು ಮೊದಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ ಮುಚ್ಚಿಸಲಿ. ತಮ್ಮಲ್ಲಿರುವ ಒಡಕು ಸರಿಪಡಿಸಿಕೊಳ್ಳಿ. ಬದಲಾಗಿ ಕೆಎಂಎಫ್ ಸಂಸ್ಥೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಕೆಎಂಎ್ನಲ್ಲಿ ಯಾವುದೇ ವಿವಾದ, ಅನುಮಾನದ ನಡೆ ಇಲ್ಲ ಎಂದು ಭೀಮಾ ನಾಯಕ್ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net