ತೆಲುಗಿಗೆ ಬರ್ತಿದೆ ‘ಡೊರೊಥಿ’; ಸಿನಿಮಾ ಬಗ್ಗೆ ರಾಣಾ ದಗ್ಗುಬಾಟಿ ಹೇಳಿದ್ದೇನು ಗೊತ್ತಾ? | Rana Daggubati on Dorothy

ಕೀರ್ತಿ ಸುರೇಶ್ ನಟನೆಯ ‘ಡೊರೊಥಿ’ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆಗ್ತಿದ್ದು, ರಾಣಾ ದಗ್ಗುಬಾಟಿ ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಆಯ್ಕೆ ಮಾಡಿಕೊಂಡಿರುವ ವಿಭಿನ್ನ ಕಥೆಯ ಬಗ್ಗೆಯೂ ರಾಣಾ ಮಾತನಾಡಿದ್ದಾರೆ.
Dorothy Telugu Release
‘ಡೊರೊಥಿ’ ತೆಲುಗು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರಾಣಾ ದಗ್ಗುಬಾಟಿ
Published on: 

Dorothy Telugu Release: ತಮಿಳಿನಲ್ಲಿ ಸಕ್ಸಸ್ ಕಂಡಿರುವ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ‘ಡೊರೊಥಿ’ ಸಿನಿಮಾ ಇದೀಗ ತೆಲುಗು ಪ್ರೇಕ್ಷಕರ ಮುಂದೆ ಬರ್ತಿದೆ. ಕೀರ್ತಿ ಸುರೇಶ್, ಸನಂತ್ ಹಾಗೂ ರಿಷಿಕಾಂತ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವನ್ನು ರಾಣಾ ದಗ್ಗುಬಾಟಿ ಅವರ ಸ್ಪಿರಿಟ್ ಮೀಡಿಯಾ ತೆಲುಗಿನಲ್ಲಿ ರಿಲೀಸ್ ಮಾಡ್ತಿದೆ.

ಸೆಪ್ಟೆಂಬರ್ 30ರಂದು ಹೈದರಾಬಾದ್‌ನಲ್ಲಿ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ರಾಣಾ ದಗ್ಗುಬಾಟಿ ಚಿತ್ರತಂಡವನ್ನು ಹಾಡಿಹೊಗಳಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ಕಾರ್ತಿಕ್ ಸುಬ್ಬರಾಜ್ ತಮ್ಮನ್ನು ಸಂಪರ್ಕಿಸಿದ್ದರು. ಬಳಿಕ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಸಿನಿಮಾ ನೋಡಿದಾಗ, ಇಂಟರ್ವೆಲ್ ಹೊತ್ತಿಗೆ ಕಥೆ ಅನಿರೀಕ್ಷಿತ ತಿರುವು ಪಡೆದುಕೊಂಡಿತ್ತು ಎಂದು ರಾಣಾ ಹೇಳಿದ್ದಾರೆ.

ರಜಿನಿಕಾಂತ್ ಅವರಂತಹ ಸೂಪರ್‌ಸ್ಟಾರ್ ಜೊತೆ ಕೆಲಸ ಮಾಡಿರುವ ಕಾರ್ತಿಕ್ ಸುಬ್ಬರಾಜ್ ಇಂಥ ವಿಭಿನ್ನ ಕಥೆ ಆಯ್ಕೆ ಮಾಡಿದ್ದು ಅಚ್ಚರಿ ಮೂಡಿಸಿತು ಎಂದರು. ಸಾಮಾನ್ಯವಾಗಿ ಮುಕ್ತವಾಗಿ ಚರ್ಚೆಯಾಗದ ಹಲವು ವಿಚಾರಗಳನ್ನು ಸಿನಿಮಾ ಹೇಳುತ್ತದೆ. ಇದೇ ಕಾರಣಕ್ಕೆ ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಲು ಮುಂದಾದೆ ಎಂದು ರಾಣಾ ತಿಳಿಸಿದರು.

ರಿಷಿಕಾಂತ್ ಮತ್ತು ಸನಂತ್ ಅವರ ಅಭಿನಯಕ್ಕೂ ರಾಣಾ ಮೆಚ್ಚುಗೆ ವ್ಯಕ್ತಪಡಿಸಿದರು. ಇಬ್ಬರ ನಡುವಿನ ಸ್ನೇಹ ಹಾಗೂ ಅವರ ಪಯಣ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಕನೆಕ್ಟ್ ಮಾಡುತ್ತದೆ ಎಂದರು.

ಇನ್ನು ಕಾರ್ತಿಕ್ ಸುಬ್ಬರಾಜ್, ತಮಿಳುನಾಡು ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ತಿಳಿಸಿದರು. ‘ಪಿಜ್ಜಾ’ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಂದ ಸಿಕ್ಕ ಪ್ರೀತಿಯನ್ನು ನೆನಪಿಸಿಕೊಂಡ ಅವರು, ‘ಡೊರೊಥಿ’ಗೂ ಅದೇ ರೀತಿ ಪ್ರೀತಿ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಈ ತಿಂಗಳಲ್ಲಿ ಹೇಗಿರಲಿದೆ ಮಳೆ, ಚಳಿ? ಎಲ್​ನಿನೋ ಎಫೆಕ್ಟ್​ಗೆ ತತ್ತರಿಸಿರೋ ಜನಕ್ಕೆ ಹೀಗಿದೆ ಐಎಂಡಿ ಹೊಸ ವರದಿ | October Rains

ಜ್ಯೋತಿ ದೇಶಪಾಂಡೆ, ಗುನೀತ್ ಮೊಂಗಾ ಕಪೂರ್ ಹಾಗೂ ಅಚಿನ್ ಜೈನ್ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ತಮಿಳಿನಲ್ಲಿ ಯಶಸ್ವಿಯಾಗಿರುವ ‘ಡೊರೊಥಿ’ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಗಮನ ಸೆಳೆದಿದೆ. ಅಕ್ಟೋಬರ್ 2ರಂದು ತೆಲುಗು ರಾಜ್ಯಗಳಲ್ಲಿ ಸಿನಿಮಾ ತೆರೆಕಾಣಲಿದೆ(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net