ದೊರೆಸ್ವಾಮಿ ಗಾಂಧಿ ಅನುಯಾಯಿಯೇ ಅಲ್ಲ...ಅವರು ಕಾಂಗ್ರೆಸ್​ -ಜೆಡಿಎಸ್ ಮುಖವಾಣಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​

Basangouda Patil Yatnal
Basangouda Patil Yatnal
Published on

ವಿಜಯಪುರ: ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರರಲ್ಲ, ಅವರು ನಕಲಿ ಹೋರಾಟಗಾರ ಎಂದು ನಿನ್ನೆ ಟೀಕಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಈಗ ಮತ್ತೊಮ್ಮೆ ದೊರೆಸ್ವಾಮಿ ವಿರುದ್ಧ ಮಾತನಾಡಿದ್ದಾರೆ. ಅವರು ಗಾಂಧಿ ಅನುಯಾಯಿಯೇ ಅಲ್ಲ ಎಂದು ಹೇಳಿದ್ದಾರೆ.

ನಾನು ಈ ಹಿಂದೆ ಆಡಿದ ಮಾತುಗಳನ್ನು ಹಿಂಪಡೆಯುವುದಿಲ್ಲ. ಯಾವ ಗೊಡ್ಡು ಬೆದರಿಕೆಗೂ ಹೆದರುವುದಿಲ್ಲ. ದೊರೆಸ್ವಾಮಿ ಎಂಥವರು ಎಂಬುದನ್ನು ಅವರ ನಡವಳಿಕೆಯೇ ತೋರಿಸುತ್ತದೆ. ಅವರು ಕಾಂಗ್ರೆಸ್​-ಜೆಡಿಎಸ್​ ಮುಖವಾಣಿ ಎಂದು ಯತ್ನಾಳ್​ ಆರೋಪಿಸಿದ್ದಾರೆ.

ದೇಶದ್ರೋಹಿ ಘೋಷಣೆಗಳನ್ನು ಕೂಗಿದಾಗ ದೊರೆಸ್ವಾಮಿ ಎಲ್ಲಿದ್ದರು. ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ದೌರ್ಜನ್ಯವಾದರೆ ಭಾರತೀಯ ಪೌರತ್ವ ನೀಡಿ ಎಂದು ಗಾಂಧೀಜಿಯವರೇ ಹೇಳಿದ್ದರು. ಅವರ ವಿಚಾರವನ್ನು ಅನುಸರಿಸಿದ ದೊರೆಸ್ವಾಮಿ ಗಾಂಧಿ ಅನುಯಾಯಿ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ನನ್ನ ವಿರುದ್ಧ ಪ್ರತಿಭಟನೆ ಮಾಡುವುದನ್ನು ಬಿಟ್ಟು ದೇಶ ವಿರೋಧಿ ಘೋಷಣೆ ಕೂಗುವವರ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ ಮಾಡಲಿ. ಹುಬ್ಬಳ್ಳಿ, ಬೆಂಗಳೂರಿನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದಾಗ ಇವರೆಲ್ಲ ಏನು ಮಾಡುತ್ತಿದ್ದರು ಎಂದು ಹರಿಹಾಯ್ದಿದ್ದಾರೆ.

ಗಾಂಧಿ ಹೆಸರನ್ನು ಕಾಂಗ್ರೆಸ್​ ಬಂಡವಾಳ ಮಾಡಿಕೊಂಡಿದೆ. ಇಲ್ಲಿಯವರೆಗೆ ಈ ದೇಶದ ಜನರು ಅನಕ್ಷರಸ್ಥರಿದ್ದರು. ಗಾಂಧಿ ಎಂಬುದನ್ನು ಕೇಳಿ ಇದು ಗಾಂಧಿ ಪೀಳಿಗೆ ಎಂದೇ ಭಾವಿಸಿದ್ದರು. ಆದರೆ ಈಗ ಗಾಂಧಿ ಕುಟುಂಬದ ಬಗ್ಗೆ ಜನರಲ್ಲಿ ಅರಿವು ಇದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net