Google ​ನಲ್ಲಿ ಇಂತಹ ವಿಷಯಗಳು ಸರ್ಚ್​ ಮಾಡಬೇಡಿ!: ಉಲ್ಲಂಘಿಸಿದರೆ ಜೈಲೂಟ ಫಿಕ್ಸ್​

dk (91) (1)
Published on

Google:ಇಂದಿನ ಅತ್ಯಾಧುನಿ ಯುಗದಲ್ಲಿ ಇಂಟರ್​ನೆಟ್​ ನಮ್ಮ ಜೀವನ ಪ್ರಮುಖ ಭಾಗವಾಗಿದೆ. ನಮಗೆ ಯಾವುದೇ ಮಾಹಿತಿ ಬೇಕಾದರೆ ಮೊದಲು GOOGLE ಸರ್ಚ್​​ ಎಂಜಿನ್​ಗೆ ಹೋಗಿ, ಅದರ ಸಹಾಯ ಪಡೆಯುತ್ತೇವೆ. ಆದರೆ, ಗೂಗಲ್​​ನಲ್ಲಿ ಯಾವ ವಿಷಯದ ಬಗ್ಗೆ ಹುಡುಕಾಟ ನಡೆಸಿದರೆ ಜೈಲು ಸೇರಬೇಕಾಗುತ್ತಯೇ ಎಂದು ಗೊತ್ತಿದೆಯೇ?.

ಹೌದು, ಇತ್ತೀಚಿನ ದಿನಗಳಲ್ಲಿ ಗೂಗಲ್​​ನಲ್ಲಿ ಬೇಡವಾದ ವಿಷಯಗಳ ಬಗ್ಗೆ ಮಾಹಿತಿ ಹುಡುಕಾಟ ಮಾಡಬೇಕಾದರೆ ಎಚ್ಚರವಹಿಸುವುದು ಅಗತ್ಯ. ಅಂತಹ ವಿಷಯಗಳ ಬಗ್ಗೆ ಸರ್ಚ್​​ ಮಾಡಿದೆರೆ ನಿಮ್ಮ ಮನೆಗೆ ಪೊಲೀಸರು ಬರುವುದು ಗ್ಯಾರಂಟಿ ಎನ್ನುತ್ತಿದೆ ಗೂಗಲ್​. ಹೀಗಾಗಿ, ಗೂಗಲ್​ನಲ್ಲಿನ ಯಾವ ವಿಷಯಗಳ ಬಗ್ಗೆ ಹುಡುಕಾಟ ಮಾಡಬಾರದು ಎಂದು ತಿಳಿಯೋಣ ಬನ್ನಿ..

ಬಾಂಬ್​ ಮತ್ತು ಭಯೋತ್ಪಾದನೆ

ಬಾಂಬ್​ ತಯಾರಿಕೆಯ ವಿಧಾನಗಳು ಮತ್ತು ಭಯೋತ್ಪಾದನೆ ಸಂಬಂಧಿಸಿದ ಚಟುವಟಿಕೆಗಳ ಮಾಹಿತಿ ಮತ್ತು ಅದರ ವಿಷಯದ ಬಗ್ಗೆ ಗೂಗಲ್​ ಸರ್ಚ್​ ಮಾಡಿದರೆ, ಭದ್ರತಾ ಸಂಸ್ಥೆಗಳು ಕೂಡಲೇ ಅಲರ್ಟ್​ ಆಗುತ್ತೇವೆ. ಇಂತಹ ವಿಷಯಗಳು ಹುಡುಕಿದರೆ ದೇಶದ್ರೋಹದ ಪ್ರಕರಣದಡಿಯಲ್ಲಿ ದೂರು ದಾಖಲಾಗಿ ಜೈಲಿಗೆ ಹಾಕಬಹುದು.

ಮಕ್ಕಳ ಅಶ್ಲೀಲ ಚಿತ್ರ

ಗೂಗಲ್​ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ಅಕ್ಷೇಪಾರ್ಹ ವಿಡಿಯೋಗಳು ಹುಡುಕಿದರೆ ಕಾನೂನುಬದ್ಧ ಅಪರಾಧವಾಗಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇದರ ಮೇಲೆ ಕಟ್ಟುನಿಟ್ಟಿನ ನಿಷೇಧವಿದೆ. ನೀವು ಇಂತಹ ಯಾವುದೇ ವಿಷಯದ ವಿಡಿಯೋಗಳನ್ನು ಡೌನ್​ಲೋಡ್​ ಮಾಡಿದೆ ಮತ್ತು ಹಂಚಿಕೊಂಡರೆ ನಿಮ್ಮ ಮೇಲೆ ಪ್ರಕರಣ ದಾಖಲಾಗುವುದು.

ಹ್ಯಾಕಿಂಗ್​ ಮತ್ತು ಸೈಬರ್​ ಅಪರಾಧ

ಗೂಗಲ್​ನಲ್ಲಿ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹೇಗೆ ಹ್ಯಾಕ್​ ಮಾಡುವುದು ಅಥವಾ ಇತರರ ವೈಫೈ ಪಾಸವರ್ಡ್​ ಕದಿಯುವುದೇಗೆ ಎಂದು ಸರ್ಜ್​ ಮಾಡಿದರೆ ಜೈಲು ಗ್ಯಾರಂಟಿ.

ಮಾದಕ ದ್ರವ್ಯ ಮತ್ತು ಅಕ್ರಮ ಶಸ್ತ್ರಾಸ್ತ್ರ ಖರೀದಿ

ನಿಷೇಧಿತ ಔಷಧಿ ಸೇರಿದಂತೆ ಮಾದಕ ದ್ರವ್ಯ ಖರೀದಿಸುವ ಬಗ್ಗೆ ಮತ್ತು ಯಾವುದೇ ಅಕ್ರಮ ಶಸ್ತ್ರಾಸ್ತ್ರ ಖರೀದಿ ಬಗ್ಗೆ ಹುಡುಕಾಟ ನಡೆಸಿದರೆ, ಮಾದಕ ದ್ರವ್ಯ ನಿಯಂತ್ರಣ ಇಲಾಖೆ ಮತ್ತು ಪೊಲೀಸ್​ ಇಲಾಖೆ ಅಲರ್ಟ್​ ಆಗುತ್ತೆ.

ಬೇರೆಯವರ ವೈಯಕ್ತಿಕ ಮಾಹಿತಿ

ನೀವು ಯಾರೊಬ್ಬರ ಮೊಬೈಲ್ ಸಂಖ್ಯೆ, ಮನೆ ವಿಳಾಸ ಅಥವಾ ಬ್ಯಾಂಕ್ ವಿವರಗಳನ್ನು ಹೊರತೆಗೆಯಲು ಪ್ರಯತ್ನಿಸಿದುವುದು ಅಪರಾಧವಾಗಿದೆ. ನೀವು ಯಾರೊಬ್ಬರ ಗೌಪ್ಯತೆಯನ್ನು ಉಲ್ಲಂಘಿಸಿದರೆ, ನಿಮ್ಮನ್ನು ಐಟಿ ಕಾಯ್ದೆ 2000 ರ ಅಡಿಯಲ್ಲಿ ಜೈಲಿಗೆ ಹಾಕಬಹುದು.

ಗೂಗಲ್​ನಲ್ಲಿ ತಪ್ಪು ವಿಷಯಗಳನ್ನು ಹುಡುಕುದರಿಂದ ನಿಮ್ಮನ್ನು ಜೈಲಿಗೆ ಹಾಕಬಹುದು. ಆದ್ದರಿಂದ, ಗೂಗಲ್​ ಅನ್ನು ಬುದ್ಧಿವಂತಿಕೆಯಿಂದ ಬಳಸಿ ಮತ್ತು ಕಾನೂನು ಮಿತಿಯೊಳಗೆ ಇಂಟರ್ನೆಟ್ ಬಳಸಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net