ಲಾಕ್​ಡೌನ್: ಕಾರ್ಮಿಕರ ಸಂಬಳಕ್ಕೆ ಕತ್ತರಿ ಹಾಕದಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಎಐಸಿಟಿಯುನಿಂದ ಹೈಕೋರ್ಟ್​ಗೆ ಅರ್ಜಿ

Dharwad HighCourt
Published on

ಬೆಂಗಳೂರು: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರ ಸಂಬಳಕ್ಕೆ ಕತ್ತರಿ ಹಾಕದಂತೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಈ ಕುರಿತು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (ಎಐಸಿಟಿಯು) ಹೈಕೋರ್ಟ್ ಗೆ ಬುಧವಾರ ಅರ್ಜಿ ಸಲ್ಲಿಸಿದೆ.

ಕೋವಿಡ್ ಕರ್ಫ್ಯೂ ವಿಧಿಸಿರುವ ಅವಧಿಯಲ್ಲಿ ಕಾರ್ಮಿಕರ ಸಂಬಳಕ್ಕೆ ಕತ್ತರಿ ಹಾಕದಂತೆ ಉದ್ದಿಮೆಗಳಿಗೆ ನಿರ್ದೇಶಿಸಬೇಕು. ಆಹಾರದ ಕಿಟ್​​ಗಳನ್ನು ಅವಶ್ಯ ಬಿದ್ದವರಿಗೆ ಪೂರೈಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

2020ರ ಕೋವಿಡ್ ಬಳಿಕ ಬಡವರ ಸಂಖ್ಯೆ 75 ದಶ ಲಕ್ಷದಷ್ಟು ಹೆಚ್ಚಾಗಿದೆ. ಬಡವರ, ಕಾರ್ಮಿಕರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಕೋವಿಡ್ ಎರಡನೇ ಅಲೆ ಬಳಿಕ ಇವರ ಬದುಕು ಮತ್ತಷ್ಟು ದುಸ್ತರವಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಇಂತಹ ವರ್ಗಗಳ ಹಿತರಕ್ಷಣೆಗೆ ಮುಂದಾಗಬೇಕಲ್ಲದೇ, ಇವರ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಇವರ ಜೀವಿಸುವ ಹಕ್ಕಿನ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಸರ್ಕಾರ ವಿಶೇಷ ಗಮನ ಹರಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net