ಸಮುದಾಯಕ್ಕೆ ಸೀಮಿತಗೊಳಿಸದಿರಿ

7Athanoigrameen3
Published on

ಅಥಣಿ ಗ್ರಾಮೀಣ: ಹಿಂದು ಧರ್ಮದ ಪ್ರಮುಖರಲ್ಲಿ ಮಹರ್ಷಿ ವಾಲ್ಮೀಕಿ ಒಬ್ಬರಾಗಿದ್ದಾರೆ ಎಂದು ಐಗಳಿ ಪಿಎಸ್‌ಐ ಚಂದ್ರಶೇಖರ ಸಾಗನೂರ ಹೇಳಿದರು.

ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಗ್ರಂಥಗಳ ಪ್ರಕಾರ ವಾಲ್ಮೀಕಿ ಮೂಲ ಹೆಸರು ರತ್ನಾಕರ. 24 ಸಾವಿರ ಪದ್ಯಗಳನ್ನೊಳಗೊಂಡ ಮಹಾಕಾವ್ಯ ರಾಮಾಯಣವನ್ನು ಸಮಾಜಕ್ಕೆ ನೀಡಿದ್ದಾರೆ. ಮಹರ್ಷಿ ವಾಲ್ಮೀಕಿ ಅವರನ್ನು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಜಯಂತಿ ಆಚರಿಸಬೇಕು. ಅವರ ತತ್ತ್ವ, ಆದರ್ಶ ಪಾಲಿಸಬೇಕು ಎಂದು ಸಲಹೆ ನೀಡಿದರು.

ಮುಖಂಡ ಹನುಮಂತ ಅರ್ದಾವುರ ಮಾತನಾಡಿ, ಸ್ತ್ರೀ-ಪುರುಷರ ಸಮಾನತೆ ಹಾಗೂ ಕಲ್ಯಾಣ ರಾಜ್ಯದ ಆಶಯ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವರು ರಾಮಾಯಣದಲ್ಲಿ ವಿವಿಧ ಪಾತ್ರಗಳ ಮೂಲಕ ಬದುಕಿನ ಪ್ರತಿ ಹಂತದಲ್ಲೂ ಅನುಸರಿಸಬೇಕಾದ ನೀತಿ ಬೋಧಿಸಿದ್ದು, ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಆದಿಕವಿ ವಾಲ್ಮೀಕಿ ಮಹರ್ಷಿ ಆಲೋಚನೆಗಳು ಸಮಾಜಕ್ಕೆ ಅವಶ್ಯವಾಗಿವೆ ಎಂದರು.

ಮುಖಂಡರಾದ ನಾಗಪ್ಪ ಬೇಡರ, ಸಿದ್ದಪ್ಪ ಪುಲಕಟ್ಟಿ, ತುಕಾರಾಮ ಮಾದಪ್ಪಗೋಳ, ಸಾಬು ಮಾಳಿ, ಆನಂದ ಮಾದಪ್ಪಗೋಳ, ಪಿಕೆಪಿಎಸ್ ಅಧ್ಯಕ್ಷ ಅನಿಲ ಚವ್ಹಾಣ, ಸಾಬು ಮಾಳಿ, ದಾನಪ್ಪ ಮಲಾಬಾದಿ, ಅಪ್ಪಾಸಾಹೇಬ ಸವದಿ, ಭೀಮಪ್ಪ ಆಸಂಗಿ, ಮಹಾದೇವ ಅವಟಿ, ಮಂಜುನಾಥ ಅಂಬಾಜಿ, ಮುತ್ತಪ್ಪ ಬೇಡರ, ಪರುಷರಾಮ ಚಮಕೇರಿ ಇತರರು ಇದ್ದರು. ಎಂ.ಆರ್.ಸವದಿ ಸ್ವಾಗತಿಸಿದರು. ಬಸವರಾಜ ನಾಯಿಕ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net