

ತುಮಕೂರು: ಲೋಕಸಭಾ ಚುನಾವಣೆ 2024ರ ಬೆನ್ನಲ್ಲೇ ಇದೀಗ ತುಮಕೂರಿನಲ್ಲಿ ವಿ. ಸೋಮಣ್ಣಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಟಕೆಟ್ ಕೊಡದಂತೆ ನಾಲ್ಕು ತಾಲೂಕಿನ ಬಿಜೆಪಿ ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ತುರುವೇಕೆರೆ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಈ ವಿಚಾರವಾಗಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ನಲ್ಲಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು, ತುಮಕೂರಿಗೆ ವಿ. ಸೋಮಣ್ಣರ ಕೊಡುಗೆ ಏನೂ ಇಲ್ಲ. ಹಾಗಾಗಿ ಅವರಿಗೆ ಟಿಕೆಟ್ ಕೊಡಬಾರದು ಎಂದು ಸಭೆಯಲ್ಲಿ ಆಗ್ರಹಿಸಿದ್ದು, ಸೋಮಣ್ಣ ಬದಲಿಗೆ ಜೆ.ಸಿ.ಮಾಧುಸ್ವಾಮಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸಿದ್ದಾರೆ.
ಸ್ಥಳೀಯ ನಾಯಕ ಮಾಧುಸ್ವಾಮಿಗೆ ಟಿಕೆಟ್ ಕೊಡುವಂತೆ ಪಟ್ಟು ಹಿಡಿದ ಕಾರ್ಯಕರ್ತರು, ವಲಸೆ ಬರುವ ವಿ. ಸೋಮಣ್ಣಗೆ ಟಿಕೆಟ್ ಕೊಟ್ಟರೆ ಬಿಜೆಪಿ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಎಂದು ಆಗ್ರಹಿಸಿದ ಕಾರ್ಯಕರ್ತರು, ಕೆ.ಬಿ.ಕ್ರಾಸ್ ವೃತ್ತದಲ್ಲಿ ರಸ್ತೆ ತಡೆದು ವಿರೋಧಿಸಿದ್ದಾರೆ.
ರಸ್ತೆ ಮಧ್ಯೆ ಮಾಧುಸ್ವಾಮಿ ಅಭಿಮಾನಿಯಿಂದ ಹೈಡ್ರಾಮಾ!ಮಾಧುಸ್ವಾಮಿಗೆ ಟಕೆಟ್ ಕೊಡುವಂತೆ ಮನವಿ ಮಾಡಿ, ಪೆಟ್ರೋಲ್ ಸುರಿದುಕೊಳ್ಳಲು ಯತ್ನಿಸಿದ್ದಾನೆ. ತುಮಕೂರು ಜಿಲ್ಲೆಗೆ ಮಾಧುಸ್ವಾಮಿ ಅವರ ಕೊಡುಗೆ ಅಪಾರವಿದೆ. ಅವರು ಸಂಸದಿಯ ಪಟು ಎಂದೇ ಖ್ಯಾತಿ ಪಡೆದಿದ್ದಾರೆ ಎಂದರು. ಇನ್ನು ಬಿಜೆಪಿ ಹೈಕಮಂಡ್ಗೆ ಒತ್ತಾಯ ಮಾಡಿದ ಜೆ.ಸಿ ಮಾಧುಸ್ವಾಮಿ ಅಭಿಮಾನಿಗಳು ಹಾಗೂ ಬೆಂಬಿಗರು. ರಸ್ತೆ ತಡೆದು ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.