ಸ್ವಂತಕ್ಕೆ ನಿವೇಶನ ಮಾಡಿಕೊಡುತ್ತೇವೆಂದರೆ ಹಣ ಕೊಡಬೇಡಿ; ಮಲ್ಲಣ್ಣ ಅಂಗಡಿ

oplus_0
oplus_0
Published on

ರಾಣೆಬೆನ್ನೂರ: ಇಲ್ಲಿಯ ನಗರಸಭೆ ವ್ಯಾಪ್ತಿಯ ಪಶ್ಚಿಮ ಬಡಾವಣೆಯ ಸಿ.ಟಿ.ಎಸ್​. ನಂಬರ್​ 3148ರ ನಿವಾಸಿಗಳು ತಮ್ಮ ನಿವೇಶನಗಳನ್ನು ಸ್ವಂತಕ್ಕೆ ಮಾಡಿಕೊಡುವ ಕುರಿತು ಯಾರಾದರೂ ಹಣ ಕೇಳಲು ಬಂದರೆ, ಅವರಿಗೆ ಕೊಡಬಾರದು ಎಂದು ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ತಿಳಿಸಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಿಮ್ಮ ನಿವೇಶನ ಸ್ವಂತಕ್ಕೆ ಮಾಡಿಕೊಡುತ್ತೇವೆ' ಎಂದು ಹೇಳಿ ಕೆಲವರು ಹಣ ವಸೂಲಿ ಮಾಡುತ್ತಿರುವ ಕುರಿತು ಪತ್ರಿಕೆಯಲ್ಲಿ ಸುದ್ದಿ ಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟ ಪಡಿಸಲಾಗುತ್ತಿದೆ.

ಈ ಹಿಂದೆ ಪಶ್ಚಿಮ ಬಡಾವಣೆಯ 197 ನಿವೇಶನಗಳನ್ನು ಸ್ವಂತಕ್ಕೆ ಮಾಡಿಕೊಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರದಿಂದ ಈವರೆಗೂ ಯಾವುದೆ ರೀತಿಯಲ್ಲಿ ಅನುಮೋದನೆ ದೊರೆತಿರಲಿಲ್ಲ. ಸದ್ಯ ಈ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ. ಒಂದು ವೇಳೆ ನಿವೇಶನಗಳನ್ನು ಸ್ವಂತಕ್ಕೆ ಮಾಡಿಕೊಡುವ ಕುರಿತು ಸರ್ಕಾರದಿಂದ ಆದೇಶ ಬಂದರೆ, ನಗರಸಭೆ ವತಿಯಿಂದ ಈ ಕುರಿತು ಪ್ರಕಟಣೆ ಹೊರಡಿಸಲಾಗುವುದು.

ಆಬಳಿಕ ಅಲ್ಲಿನ ಲಾನುಭವಿಗಳು ಸರ್ಕಾರ ಹೊರಡಿಸುವ ಸೂತ್ತೋಲೆಯಂತೆ ಎಸ್​ಆರ್​ ದರ ನೀಡಿ ನಿವೇಶನ ಸ್ವಂತಕ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೂ ನಗರಸಭೆ ಹೆಸರಿನಲ್ಲಿ ಡಿಡಿ ಕೊಡಬೇಕಾಗುತ್ತದೆ. ಇದನ್ನು ಹೊರತು ಪಡಿಸಿ ಯಾವುದೆ ವ್ಯಕ್ತಿಯ ಕೈಗೆ ಹಣ ನೀಡಿದರೆ ಅದು ನಗರಸಭೆಗೆ ಸಂಬಂಧ ಇರುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ ಮಾತನಾಡಿ, ನಗರದ ಬೆಳವಣಿಗೆಗಾಗಿ ಪಶ್ಚಿಮ ಬಡಾವಣೆಯನ್ನು ನಗರಸಭೆ ವತಿಯಿಂದ ಮಾಡಲಾಗಿದೆ. ಇಲ್ಲಿರುವ ಕುಟುಂಬದವರು ಯಾವುದೇ ರೀತಿ ಹಣದ ವ್ಯವಹಾರ ಇದ್ದರೆ ಅದನ್ನು ನಗರಸಭೆಗೆ ಬ್ಯಾಂಕ್​ ಮೂಲಕ ಮಾಡಬೇಕು.

ಪತ್ರಿಕೆಯಲ್ಲಿ ಆಡಳಿತ&ವಿರೋಧ ಪಕ್ಷದವರು ಶಾಮೀಲು ಆಗಿದ್ದಾರೆ ಎಂಬ ಮಾಹಿತಿ ಬಂದಿದೆ. ಆದರೆ, ನಮ್ಮ ಬಿಜೆಪಿ ಸದಸ್ಯರು ಯಾರೊಂದಿಗೆ ಶಾಮೀಲು ಆಗಿಲ್ಲ. ಆದ್ದರಿಂದ ಯಾರೂ ಹಣವನ್ನು ಬೇರೆ ವ್ಯಕ್ತಗಳ ಕೈಗೆ ಕೊಡಬಾರದು. ಕೊಟ್ಟರೆ ಅದಕ್ಕೆ ಅವರೇ ಹೊಣೆಯಾಗಿರುತ್ತಾರೆ. ಈ ಕುರಿತು ನಗರಸಭೆ ಆಯುಕ್ತರಿಗೆ ನಾವು ಕೂಡ ಪ್ರಕಟಣೆ ಹೊರಡಿಸಲು ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಕರಡೆಣ್ಣನವರ, ಸದಸ್ಯರಾದ ನಿಂಗರಾಜ ಕೋಡಿಹಳ್ಳಿ, ಪ್ರಕಾಶ ಪೂಜಾರ, ಹುಚ್ಚಪ್ಪ ಮೇಡ್ಲೇರಿ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ ಹಾಗೂ ಪಕ್ಷದ ಪ್ರಮುಖರಾದ ಸಿದ್ದು ಚಿಕ್ಕಬಿದರಿ, ಮುತ್ತಣ್ಣ ಪಾಟೀಲ, ಸುಭಾಸ ಸಿರಗೇರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net