

ಬೆಂಗಳೂರು: ‘ನಾನು ಛಲವಾದಿ ನನ್ನ ಕೆಣಕಬೇಡಿ. ನನ್ನ ವಿರುದ್ಧ ಏನೇ ದೂರು ಕೊಡಿ ಹೆದರುವುದಿಲ್ಲ’ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್‌ಗೆ ಸವಾಲು ಹಾಕಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ನನ್ನ ವಿರುದ್ಧ ದೂರು ಕೊಡಲು ಬಹಳ ಕಷ್ಟ ಪಟ್ಟಿದ್ದಾರೆ. ಸುಮ್ಮನೆ ಕೂತು ಬೊಜ್ಜು ಬಂದಿತ್ತು. ನಾನು ಕೆಲಸ ಕೊಟ್ಟಮೇಲೆ ಎಕ್ಸೈಜ್ ಮಾಡುತ್ತಿದ್ದಾರೆ. ಎದ್ದಿರೋ ಮಾತು ಬಿದ್ದಿರಲಿ ಎಂದು ದೂರು ಕೊಟ್ಟಿದ್ದಾರೆ.
ನಿಮ್ಮ ತಪ್ಪು ಜನರ ಮುಂದೆ ಇಟ್ಟಿದ್ದೇನೆ.ಅದಕ್ಕೆ ಕಾಂಗ್ರೆಸ್ ಉತ್ತರ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು.
ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಿ ನಾನು ಹೆದರುವುದಿಲ್ಲ. ದೂರು ಕೊಟ್ಟವರು ನನ್ನ ಎಲ್ ಎಮ್ ಸಿ ಮಾಡಿದ್ದಾರಾ? ನನ್ನ ಪಕ್ಷ ನನಗೆ ಈ ಸ್ಥಾನ ಕೊಟ್ಟಿದೆ. ಕಾಂಗ್ರೆಸ್ ನವರು ಹೇಳಿದರು ಎಂದು ಹೆದರಿಕೊಂಡು ಹೋಗುವುದಿಲ್ಲ. ಆದರ್ಶ ಸಾಮಾಜಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ಗೆ ನಾನು ರಾಜೀನಾಮೆ ಕೊಟ್ಟು 10 ವರ್ಷವಾಗಿದೆ. ಈ ಟ್ರಸ್ಟ್‌ನವರು ಧಮ್ ಬಿರಿಯಾನಿ ಆದರೂ ಮಾಡಿಕೊಳ್ಳಲಿ, ಏನಾದರೂ ಮಾಡಿಕೊಳ್ಳಲಿ. ನಾನು ಅದರಲ್ಲಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.