ಸತೀಶ್ ಹೇಳಿದ್ದರಲ್ಲಿ ತಪ್ಪು ಹುಡುಕಬಾರದು!

KN Rajanna
Published on

ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಕೆಪಿಸಿಸಿಗೆ ಹೊಸ ಅಧ್ಯಕ್ಷರು ಎಂದು ತೀರ್ಮಾನವಾಗಿತ್ತು. ಲೋಕಸಭೆ ಚುನಾವಣೆ ಆಗಿ ಆರು ತಿಂಗಳು ಕಳೆದಿದೆ, ಅಧ್ಯಕ್ಷರ ಗೊಂದಲ ಹೈಕಮಾಂಡ್ ನಿವಾರಣೆ ಮಾಡಲಿ. ಹೈಕಮಾಂಡ್ ನಾಯಕರೇ ಗೊಂದಲ ಮಾಡಿದ್ದು. ಅವರೇ ನಿವಾರಣೆ ಮಾಡಬೇಕು ಎಂದು ಸಹಕಾರ ಸಚಿವರ ರಾಜಣ್ಣ ತಿಳಿಸಿದ್ದಾರೆ.

ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಪೂರ್ಣ ಪ್ರಮಾಣದ ಅಧ್ಯಕ್ಷರು ಆದರೆ ಇದೆಲ್ಲವೂ ಸರಿ ಆಗುತ್ತೆ. ಲೋಕಸಭೆ ಚುನಾವಣೆ ಆಗಿ 6 ತಿಂಗಳು ಆಗಿದೆ. ಡಿಕೆ ಶಿವಕುಮಾರ್ ಅವರೇ ಪೂರ್ಣ ಪ್ರಮಾಣ ಅಧ್ಯಕ್ಷರಾಗಿದ್ದರೆ ಅವರೇ ಎಂದು ಹೈಕಮಾಂಡ್ ಹೇಳಲಿ. ಡಿಕೆಶಿ ಮುಂದುವರೆಯುತ್ತಾರೆ ಎನ್ನುವುದಾದರೆ ಅದನ್ನಾದರೂ ಹೇಳಲಿ. ಚುನಾವಣೆ ವರೆಗೂ ಅವರೇ ಎಂದಾದರೂ ಹೇಳಲಿ. ಇಲ್ಲವೇ ಯಾರಿಗಾದರೂ ಅಧ್ಯಕ್ಷ ಸ್ಥಾನ ಕೊಡಲಿ ಎಂಬುದು ನಮ್ಮ ವಾದವೆಂದರು.

ಸತೀಶ್ ಜಾರಕಿಹೋಳಿ ನಮ್ಮ ಪಕ್ಷದ ಹಿರಿಯ ನಾಯಕರು, ಕಾರ್ಯಾಧ್ಯಕ್ಷರಾಗಿದ್ದವರು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದ ಪ್ರಭಾವಿ ನಾಯಕರು. ಪಕ್ಷದ ಸಂಘಟನೆ ವಿಚಾರದಲ್ಲಿ ಅವರು ಹೇಳಿರುವುದರಲ್ಲಿ ತಪ್ಪು ಹುಡುಕಬಾರದು. ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕು ಎಂದು ಹೇಳಿದರು.

10 ರಿಂದ12 ಸಚಿವರನ್ನು ಬದಲಾವಣೆ ಮಾಡುತ್ತಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ, ಸಿಎಂ ಆಯ್ಕೆ, ಸಚಿವರ ಬದಲಾವಣೆ ಹೈಕಮಾಂಡ್ ನಿರ್ಧಾರ ಮಾಡುವುದು. ಯಾರು ಇರಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡಲಿ. ಅ ಪಟ್ಟಿಯಲ್ಲಿ ನನ್ನ ಹೆಸರು ಇದ್ದರೂ ಪರವಾಗಿಲ್ಲ, ಸಂತೋಷವೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net