ಪೈಲಟ್​ಗಳ ಮಾತುಕತೆಯಿಂದ ಅಂತಿಮ ನಿರ್ಧಾರಕ್ಕೆ ಬರಬೇಡಿ! ಇದೊಂದು ಸವಾಲಿನ ತನಿಖೆ: ರಾಮ್ ಮೋಹನ್ ನಾಯ್ಡು | Air India

ವಿಜಯವಾಣಿ (49)
Published on

Air India Crash: ಅಹಮದಾಬಾದ್​ ಏರ್​ ಇಂಡಿಯಾ ವಿಮಾನ ದುರಂತ ಸಂಭವಿಸಿ ಇಂದಿಗೆ ಒಂದು ತಿಂಗಳೇ ಕಳೆದಿದೆ. ಈ ಭೀಕರ ಅಪಘಾತ ಇನ್ನೂ ದೇಶದ ಜನತೆಯಿಂದ ಮಾಸಿಲ್ಲ. ಒಟ್ಟು 270 ಜನರನ್ನು ಬಲಿಪಡೆದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ದುರಂತದ ಹಿಂದಿರುವ ಅಸಲಿ ಕಾರಣವೇನು? ಬ್ಲಾಕ್​ ಬಾಕ್ಸ್​ ಡೇಟಾದಲ್ಲಿ ಏನಿತ್ತು? ಎಂಬ ಗೊಂದಲ, ಪ್ರಶ್ನೆಗಳಿಗೆ ಕಡೆಗೂ ಪ್ರಾಥಮಿಕ ತನಿಖಾ ವರದಿ ಉತ್ತರ ನೀಡಿದೆ. ಆದರೆ, ಹಿಂದಿದ್ದ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಾಥಮಿಕ ವರದಿಯಲ್ಲಿ, ವಿಮಾನ ಟೇಕಾಫ್ ಆದ ಬೆನ್ನಲ್ಲೇ ರನ್​ನಲ್ಲಿದ್ದ ಇಂಜಿನ್‌ಗಳ ಇಂಧನ ಸ್ವಿಚ್‌ಗಳು ಕೆಲವೇ ಸೆಕೆಂಡ್​ಗಳ ಅಂತರದಲ್ಲಿ ಕಟ್​ ಆಫ್​ ಆಗಿದೆ. ಈ ವಿಷಯ ಆರಂಭದಲ್ಲಿ ಪೈಲಟ್​ಗಳಿಬ್ಬರಿಗೂ ತಿಳಿದಿರಲಿಲ್ಲ. ಎರಡು ಇಂಜಿನ್​ಗೆ ಇಂಧನ ಫೂರೈಕೆ ಮಾಡಬೇಕಿದ್ದ ಸ್ವಿಚ್​ಗಳು ರನ್​ನಿಂದ ಕಟ್​ಆಫ್​ ಆಗಿದ್ದರ ಬಗ್ಗೆ ಪೈಲಟ್​ಗಳಿಗೆ ಗೊಂದಲ ಕಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕುರಿತು ಒಬ್ಬರನೊಬ್ಬರು ಪ್ರಶ್ನಿಸಿದ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತಕ್ಕೀಡಾಗಿದೆ.

ಸದ್ಯ ಈ ವಿಚಾರ ಜನರಲ್ಲಿ ಭಾರೀ ಗೊಂದಲ, ಅನುಮಾನ ಹುಟ್ಟುಹಾಕಿದ ಬೆನ್ನಲ್ಲೇ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಪ್ರತಿಕ್ರಿಯಿಸಿದ್ದು, ಜೂನ್ 12ರಂದು ಸಂಭವಿಸಿದ ಏರ್ ಇಂಡಿಯಾ ಅಪಘಾತದ ವರದಿ ಕೇವಲ ಪ್ರಾಥಮಿಕ ವರದಿಯಾಗಿದ್ದು, ಅಂತಿಮ ಸಂಶೋಧನೆಗಳು ಬಿಡುಗಡೆಯಾಗುವವರೆಗೆ ಸಾರ್ವಜನಿಕರು ಮತ್ತು ಮಾಧ್ಯಮಗಳು ಆತುರದ ತೀರ್ಮಾನಗಳನ್ನು ಕೈಗೊಳ್ಳುವುದು ನಿಲ್ಲಿಸಿ. ಇದರ ಅವಶ್ಯಕತೆಯಿಲ್ಲ ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net