Winters Tips: ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ನಿಮ್ಮ ಮುಖಕ್ಕೆ ಇವುಗಳನ್ನೂ ಹಚ್ಚಲೇ ಬೇಡಿ...

winter
ಸಾಂದರ್ಭಿಕ ಚಿತ್ರ
Published on

Winters Tips: ಚಳಿಗಾಲದಲ್ಲಿ ನಮ್ಮ ಚರ್ಮವು ತುಂಬಾ ಒಣಗುತ್ತದೆ. ಕಡಿಮೆ ತಾಪಮಾನ ಮತ್ತು ಶುಷ್ಕ ಗಾಳಿಯಿಂದಾಗಿ, ಚರ್ಮದ ಸಮಸ್ಯೆ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮುಖವನ್ನು ತೇವಗೊಳಿಸಲು, ಮನೆಮದ್ದುಗಳ ರೂಪದಲ್ಲಿ ಬಳಸುತ್ತಾರೆ. ಶೀತ ಋತುವಿನಲ್ಲಿ ಯಾವುದನ್ನಾದರೂ ಬಳಸುವ ಮೊದಲು, ಅದರ ಬಗ್ಗೆ  ಸರಿಯಾಗಿ ನಾವು ತಿಳಿದುಕೊಂಡರೆ ಒಳ್ಳೆಯದಾಗಿದೆ. ಈ ಋತುವಿನಲ್ಲಿ ಚರ್ಮಕ್ಕೆ ಪ್ರಯೋಜನಕಾರಿಯಾದ ಕೆಲವು ವಸ್ತುಗಳನ್ನು ಬಳಸುವುದು ಹಾನಿಕಾರಕವಾಗಿದೆ. ಹಾಗಾದರೆ ಚಳಿಗಾಲದಲ್ಲಿ ತ್ವಚೆಗೆ ಯಾವ ವಸ್ತುಗಳನ್ನು ಬಳಸಬಾರದು ಎಂದು ತಿಳಿಯೋಣ ಬನ್ನಿ...

ಚಳಿಗಾಲದಲ್ಲಿ ನಿಮ್ಮ ಚರ್ಮದ ಮೇಲೆ ಈ ವಸ್ತುಗಳನ್ನು ಬಳಸಬೇಡಿ:

  • ತೈಲ ಆಧಾರಿತ ಕ್ರೀಮ್‌ಗಳು: ಒಣ ತ್ವಚೆಗೆ ತೈಲ ಆಧಾರಿತ ಕ್ರೀಮ್‌ಗಳು ಪ್ರಯೋಜನಕಾರಿ ಆದರೆ ಎಣ್ಣೆಯುಕ್ತ ಮತ್ತು ಸಾಮಾನ್ಯ ಚರ್ಮದ ಟೋನ್ ಹೊಂದಿರುವ ಜನರು ಶೀತ ವಾತಾವರಣದಲ್ಲಿ ಅವುಗಳನ್ನು ಬಳಸಬಾರದು. ಅತಿಯಾದ ಎಣ್ಣೆಯುಕ್ತ ಉತ್ಪನ್ನಗಳು ಮೊಡವೆಗಳಿಗೆ ಕಾರಣವಾತ್ತವೆ.
  • ಮುಲ್ತಾನಿ ಮಿಟ್ಟಿ ಮತ್ತು ಶ್ರೀಗಂಧದ ಪುಡಿ : ಮುಲ್ತಾನಿ ಮಿಟ್ಟಿ ಮತ್ತು ಶ್ರೀಗಂಧದ ಪುಡಿಯನ್ನು ತ್ವಚೆಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ ಆದರೆ ಚಳಿಗಾಲದಲ್ಲಿ ಇವುಗಳ ಬಳಕೆಯು ಮುಖದ ಶುಷ್ಕತೆಯನ್ನು ಹೆಚ್ಚಿಸುತ್ತದೆ.
  •  ಪೆಟ್ರೋಲಿಯಂ ಜೆಲ್: ಮುಖದ ಮೇಲೆ ಮಿನರಲ್ ಆಯಿಲ್ ಮತ್ತು ಪೆಟ್ರೋಲಿಯಂ ಜೆಲ್ ಅನ್ನು ಬಳಸ ಬಾರದು. ಅವುಗಳ ಬಳಕೆಯು ಚರ್ಮವನ್ನು ಇನ್ನಷ್ಟು ಒಣಗಿಸುತ್ತದೆ ಮತ್ತು ರಂಧ್ರಗಳು ಮುಚ್ಚಿಹೋಗುತ್ತವೆ.
  • ಆಲೂಗೆಡ್ಡೆ ಜ್ಯೂಸ್: ಆಲೂಗೆಡ್ಡೆ ರಸವು ಕಪ್ಪು ವರ್ತುಲಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿದ್ದರೂ, ಚಳಿಗಾಲದಲ್ಲಿ ಇದನ್ನು ಮುಖಕ್ಕೆ ಬಳಸಬಾರದು. ಏಕೆಂದರೆ ಇದು ತ್ವಚೆಯಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಮುಖವನ್ನು ಇನ್ನಷ್ಟು ಒರಟಾಗಿ ಮತ್ತು ಒಣಗುವಂತೆ ಮಾಡುತ್ತದೆ.
  • ಆಲ್ಕೋಹಾಲ್ ಆಧಾರಿತ ಟೋನರ್: ಆಲ್ಕೋಹಾಲ್ ಆಧಾರಿತ ಟೋನರ್ ಸಹ ಚರ್ಮದಿಂದ ನೈಸರ್ಗಿಕ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಸೂಕ್ಷ್ಮ ಮತ್ತು ಶುಷ್ಕ ಚರ್ಮವನ್ನು ಹೊಂದಿರುವವರು ಅದನ್ನು ತಪ್ಪಾಗಿ ಬಳಸಬಾರದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net