ತಪ್ಪಿದ ಟ್ರಂಪ್ ವಿಮಾನ ಅಪಘಾತ

Donald Trump
Published on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ಏರ್​ಫೋರ್ಸ್ ಒನ್ ವಿಮಾನದ ಸಂಭವನೀಯ ಅಪಘಾತವೊಂದು ತಪ್ಪಿದೆ.

ಮೇರಿ ಲ್ಯಾಂಡ್ ವಾಯುನೆಲೆಯಲ್ಲಿ ಭಾನುವಾರ ಸಂಜೆ 5.54ಕ್ಕೆ ವಿಮಾನ ಇಳಿದಿದ್ದು, ಈ ವೇಳೆ ಅಲ್ಲಿ ಡ್ರೋನ್ ಹಾರಾಟ ನಡೆದಿತ್ತು. ವಿಮಾನಕ್ಕೆ ಡ್ರೋನ್ ಅಪ್ಪಳಿಸುವುದು ಸ್ವಲ್ಪದರಲ್ಲೇ ತಪ್ಪಿದೆ ಎಂದು ವಾಯುನೆಲೆಯಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ. ಹಳದಿ ಹಾಗೂ ಕಪು್ಪ ಬಣ್ಣದಲ್ಲಿದ್ದ ಸಣ್ಣ ಸಾಧನ, ಕ್ರಾಸ್ ಆಕಾರದಲ್ಲಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಲಭ್ಯವಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಶ್ವೇತ ಭವನದ ಮಿಲಿಟರಿ ಕಚೇರಿ ಮತ್ತು ವಾಯುಪಡೆಯ ವಿಭಾಗ ಸ್ಪಷ್ಟಪಡಿಸಿದೆ. ಬಹುತೇಕ ಡ್ರೋನ್​ಗಳು ಕೆಲ ಕೆಜಿಗಳಷ್ಟು ಭಾರವಿರುತ್ತವೆ. ಜೆಟ್ ವಿಮಾನ ಉರುಳಿಸುವಷ್ಟು ಸಾಮರ್ಥ್ಯ ಅವುಗಳಿಗೆ ಇರುವುದಿಲ್ಲ. ಆದರೆ ಇದೇ ಗಾತ್ರಕ್ಕಿಂತ ಸ್ವಲ್ಪ ದೊಡ್ಡ ಹಕ್ಕಿಯಿಂದ ಹಾನಿ ಸಂಭವಿಸಬಹುದು. ಡ್ರೋನ್ ವಿಮಾನಕ್ಕಿಂತ ತುಸು ದೂರದಲ್ಲಿ ಹೋಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net