ಭಾರತದಾದ್ಯಂತ 6,000 ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದೇನೆ! ನನ್ನ ತಂಡವನ್ನು ಸೇರಲು ಇಂದೇ ಅರ್ಜಿ ಸಲ್ಲಿಸಿ..Dolly Chaiwala

dollychaiwala
Published on

Dolly Chaiwala  : ನಾಗ್ಪುರದ ಬೀದಿಗಳಲ್ಲಿ ವಿಶಿಷ್ಟ ರೀತಿಯಲ್ಲಿ ಚಹಾ ಮಾರಾಟ ಮಾಡುವ ಮೂಲಕ ಡಾಲಿ ಚಾಯ್‌ವಾಲಾಸೋಶಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಠಿಸಿದ್ದಾರೆ. ಡಾಲಿ ಈಗ ತನ್ನ ವ್ಯವಹಾರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದು, 6000 ಜನರಿಗೆ ಉದ್ಯೋಗ ನೀಡುವ ಜಾಹೀರಾತು ನೀಡಿದ್ದಾರೆ. ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ವೈರಲ್​​ ಆಗಿದೆ .

ಡಾಲಿ ಚಾಯ್‌ವಾಲಾ ಅವರ ನಿಜವಾದ ಹೆಸರು ಸುನಿಲ್ ಪಟೇಲ್. ಡಾಲಿ ತಮ್ಮ ವಿಶಿಷ್ಟ ಉಡುಗೆ ತೊಡುಗೆ ಮತ್ತು ವಿಶಿಷ್ಟ ಶೈಲಿಯಿಂದಾಗಿ ಸಾಮಾಜಿಕ ಜಾಲತಾಣದ ಮೂಲಕ ಪ್ರಸಿದ್ಧರಾದರು. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಸ್ಟಾಲ್‌ಗೆ ಭೇಟಿ ನೀಡಿದಾಗ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಇಂದು ಅಂತರರಾಷ್ಟ್ರೀಯ ಬ್ರ್ಯಾಂಡ್ ಆಗಿದ್ದಾರೆ. ದೊಡ್ಡ ತಾರೆಯರೊಂದಿಗೆ ಕುಳಿತು ಅವರಿಗೆ ತಮ್ಮದೇ ಆದ ಶೈಲಿಯಲ್ಲಿ ಚಹಾ ತಯಾರಿಸುವುದು ಅವರ ದಿನಚರಿಯಾಗಿದೆ. ನಾಗಪುರದ ಫುಟ್‌ಪಾತ್‌ಗಳಲ್ಲಿ ಕೇಶವಿನ್ಯಾಸ ಮತ್ತು ಸನ್ಗ್ಲಾಸ್‌ಗಳಿಗೆ ಹೆಸರುವಾಸಿಯಾಗಿದ್ದ ಈ ತೆಳ್ಳಗಿನ ಹುಡುಗ ಈಗ ಇಡೀ ಜಗತ್ತು ಅವರನ್ನು ಭೇಟಿಯಾಗಲು ಬಯಸುವ ಬ್ರ್ಯಾಂಡ್ ಆಗಿ ಮಾರ್ಪಟ್ಟಿದ್ದಾನೆ.

ಇತ್ತೀಚೆಗೆ, ಡಾಲಿ ಚಾಯ್‌ವಾಲಾ ಈಗ ಫ್ರಾಂಚೈಸ್ ಮಾದರಿಯ ಮೂಲಕ 'ಡಾಲಿ ಕಿ ಟ್ಯಾಪ್ರಿ' ಬ್ರ್ಯಾಂಡ್ ಅನ್ನು ಭಾರತದಾದ್ಯಂತ ಹರಡಲು ಯೋಜಿಸುತ್ತಿದ್ದಾರೆ ಎಂಬ ಸುದ್ದಿ ಬಂದಿತು. ಈಗ 6000 ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಅವರು ಜನರನ್ನು ನೇಮಿಸಿಕೊಳ್ಳುವುದಲ್ಲದೆ, ಅವರಿಗೆ ಉದ್ಯೋಗಗಳನ್ನು ನೀಡುತ್ತಾರೆ.

ನಾನು ಡಾಲಿ ಚಾಯ್ ವಾಲಾ! ಭಾರತದಾದ್ಯಂತ 6,000 ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದೇನೆ.ನೀವು ಎಲ್ಲಿಂದ ಬಂದಿದ್ದರೂ ಪರವಾಗಿಲ್ಲ..ನೀವು ಉತ್ಸಾಹ, ಶೈಲಿ ಮತ್ತು ಬೆಳೆಯುವ ಹಸಿವನ್ನು ಹೊಂದಿದ್ದರೆ...ಡಾಲಿಯೆಟ್ ಆಗಿ ನನ್ನ ತಂಡವನ್ನು ಸೇರಲು ಬನ್ನಿ! ಪೂರ್ಣ ತರಬೇತಿ, ಅಧಿಕೃತ ಪ್ರಮಾಣಪತ್ರ, ಹೊಸ ವೃತ್ತಿಜೀವನ ಇಲ್ಲಿಂದ ಪ್ರಾರಂಭವಾಗುತ್ತದೆ. ಈಗಲೇ ಅರ್ಜಿ ಸಲ್ಲಿಸಿ ಎಂದು ಇನ್​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡು ಲಿಂಕ್ ಕೂಡಾ ನೀಡಲಾಗಿದೆ.

ಈ ಪೋಸ್ಟ್ ನೋಡಿದ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದರು. ಇದು ಡಾಲಿ ಆತ್ಮವಿಶ್ವಾಸ ಮತ್ತು ಮೋಡಿ,ಈಗ ಜನರು ಕೆಲಸ ಕೇಳಲು ಅವರ ಬಳಿಗೆ ಹೋಗುತ್ತಾರೆ ಮತ್ತು ನಾನು ಕೂಡ ಅದೇ ರೀತಿ ಮಾಡಬೇಕು, ಇನ್ನು ಮುಂದೆ ಚಹಾ ಮಾರಾಟಗಾರನಲ್ಲ, ಆದರೆ ಉದ್ಯಮಿಯಾಗಿದ್ದಾನೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net