ಬಿಲ್​​ ಗೇಟ್ಸ್ ಒಂದೆ​ ಒಂದೇ ಭೇಟಿಗೆ 5 ಕೋಟಿ ರೂ. ಬೆಲೆ ಬಾಳುವ ಕಾರು ಖರೀದಿಸಿದ ಚಾಯ್​ವಾಲಾ!

chaiwala
Published on

ನವದೆಹಲಿ:  ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಇತ್ತೀಚೆಗೆ ನಾಗ್ಪುರದ ಸ್ಟಾರ್ ಚಹಾ ಮಾರಾಟಗಾರ ಡಾಲಿ ಚಾಯ್ ವಾಲಾ ಅವರ ಚಹಾಗಾಡಿಯ ಮುಂದೆ ಚಹಾ ಸವಿದಿದ್ದರು. ಬಿಲ್ ಗೇಟ್ಸ್ ಒಂದೇ ಭೇಟಿಗೆ ಚಾಯ್​ ವಾಲಾ ಲಕ್​ ಬದಲಾಗಿದೆ.  ಇಂಟರ್ನೆಟ್ ಸೆನ್ಸೇಷನ್ ಡಾಲಿ ಚಾಯ್‌ವಾಲಾ ಅವರ ವೀಡಿಯೊ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಅವರು ಬೌನ್ಸರ್‌ಗಳ ನಡುವೆ ಚಹಾ ಮಾರುತ್ತಿರುವುದನ್ನು ಕಾಣಬಹುದು. ಹಾಗೆ ದುಬಾರಿ ಬೆಲೆ ಬಾಳುವ ಕಾರ್​ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಡಾಲಿ ಚಾಯ್ ವಾಲಾ ಅವರ ನಿಜವಾದ ಹೆಸರು ಸುನೀಲ್ ಪಾಟೀಲ್. ಮಹಾರಾಷ್ಟ್ರದ ನಾಗ್ಪುರ ನಿವಾಸಿ. ನಾಗ್ಪುರದ ರಸ್ತೆಯೊಂದರಲ್ಲಿ ಟೀ ಮಾರುತ್ತಾನೆ, 10ನೇ ತರಗತಿ ಓದುವುದನ್ನು ಬಿಟ್ಟು ಮನೆಯನ್ನು ನೋಡಿಕೊಳ್ಳಲು ಟೀ ಮಾರತೊಡಗಿದನು. ಟೀ  ಸರ್ವ್​ ಮಾಡುವ ಶೈಲಿಯಿಂದಾಗಿ ಅವರು ಕೆಲವು ದಿನಗಳ ಹಿಂದೆ ಪ್ರಸಿದ್ಧರಾಗಿದ್ದರು. ವರದಿಗಳ ಪ್ರಕಾರ, ಡಾಲಿ ಚಾಯ್ ವಾಲಾ ನಿವ್ವಳ ಮೌಲ್ಯ 10 ಲಕ್ಷ ಎಂದು ಹೇಳಲಾಗಿದೆ. ನಾಗ್ಪುರದ ಬೀದಿಗಳಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದು, ಪ್ರತಿದಿನ 3ರಿಂದ 4 ಸಾವಿರ ರೂ. ಟೀ ಸ್ಟಾಲ್ ನಲ್ಲಿ ಪ್ರತಿದಿನ 350ರಿಂದ 500 ಕಪ್ ಚಹಾ ಮಾರುತ್ತಾರೆ.

ಬಿಲ್ ಗೇಟ್ಸ್‌ ಟೀ ಅಂಗಡಿಗೆ ಭೇಟಿ ನೀಡಿದಾಗಿನಿಂದಲೂ ಡಾಲಿ ಚಾಯ್‌ವಾಲಾ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಈಗ ಅವರ ಪ್ರತಿ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸುತ್ತಿದ್ದಾರೆ. ಸದ್ಯ ಮತ್ತೊಂದು ವಿಡಿಯೋವನ್ನು ಡಾಲಿ ಚಾಯ್‌ವಾಲಾ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದರಲ್ಲಿ ಕೆಲವು ಬೌನ್ಸರ್‌ಗಳು ಡಾಲಿಯ ಸುತ್ತಲೂ ನಿಯೋಜನೆಗೊಂಡಿರುವುದು ಕಂಡುಬರುತ್ತದೆ. ಭಾರೀ ಭದ್ರತೆಯ ನಡುವೆ ಟೀ ತಯಾರಿಸಿ ಜನರಿಗೆ ಬಡಿಸುತ್ತಿರುವುದು ಕೂಡ ವಿಡಿಯೋದಲ್ಲಿ ಕಂಡು ಬಂದಿದೆ.

ಡಾಲಿ ಚಾಯ್ ವಾಲಾ  ಕೆಂಪು ಬಣ್ಣದ ಲಂಬೋರ್ಗಿನಿ ಕಾರಿನೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಚಾಯ್ ವಾಲಾ ಐಶಾರಾಮಿ ಕಾರು ಖರೀದಿಸಿದ್ದಾರೆ ಎನ್ನುವ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಇದರ ನಂತರ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕೆಂಪು ಬಣ್ಣದ ಲಂಬೋರ್ಗಿನಿಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.  ಲಂಬೋರ್ಗಿನ್ನಿ ಕಾರು ಖರೀದಿಸಿದ್ದಾರಾ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಡಾಲಿ ಚಾಯ್​ವಾಲ ಅವರಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ, ಅವರು ಲಂಬೋರ್ಗಿನಿ ಖರೀದಿಸಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಏನನ್ನೂ ಖಚಿತಪಡಿಸಿಲ್ಲ.

ಈ ವೀಡಿಯೋ ನೋಡಿದ ಜನರು ಹಲವು ಕಾಮೆಂಟ್ ಮಾಡಿದ್ದಾರೆ, ಒಬ್ಬ ವ್ಯಕ್ತಿ ಬಿಲ್ ಗೇಟ್ಸ್ ಅವರಿಂದ ಉಡುಗೊರೆ, ಪ್ರಪಂಚದಲ್ಲಿ ಕೇವಲ ಚಹಾ ಮಾರಾಟಗಾರರು ಮಾತ್ರ ಪ್ರಗತಿಯಲ್ಲಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net