

Pet Dogs : ತನ್ನ ಸಾಕುಪ್ರಾಣಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಯುವತಿಯನ್ನು ಬಂಧಿಸಲಾಗಿದೆ.
ಈ ಘಟನೆ ಅಮೆರಿಕದ ಫ್ಲೋರಿಡಾದದಲ್ಲಿ ನಡೆದಿದೆ. ಬಂಧಿತಳನ್ನು 27 ವರ್ಷದ ಗುಮಿನ್ಸ್ಕಿ ಎಂದು ಗುರುತಿಸಲಾಗಿದೆ. ಈಕೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕೂಡ ಹೌದು. ತನ್ನನ್ನು ತಾನು 'ನಾಯಿಯ ತಾಯಿ' ಎಂದು ಹೇಳಿಕೊಳ್ಳುವ ಆಕೆ, ಸಾಕು ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ಅದರ ವಿಡಿಯೋ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿಯಲ್ಲಿ ಗುಮಿನ್ಸ್ಕಿ, ತನ್ನ ನಾಯಿಮರಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಳು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೆ, ಇದೇ ವಿಡಿಯೋದಿಂದ ತನಗೆ 500 (ಸುಮಾರು ರೂ. 43,000) ಡಾಲರ್ ಕೂಡ ಸಿಕ್ಕಿತು ಎಂದು ಆಕೆ ಹೇಳಿಕೊಂಡಿದ್ದಾಳೆ. ಜನರು ಇಂತಹ ಹೆಚ್ಚಿನ ವಿಡಿಯೋಗಳನ್ನು ಕೇಳಿದರು ಅಂತಾನೂ ಹೇಳಿದ್ದಾಳೆ.
ಗುಮಿನ್ಸ್ಕಿ ಹೆಚ್ಚಿನ ವಿಡಿಯೋಗಳನ್ನು ಚಿತ್ರೀಕರಿಸಿ, ಹಣಕ್ಕಾಗಿ ಅವುಗಳನ್ನು ಮಾರಾಟ ಮಾಡುತ್ತಿದ್ದಾಳೆ ಎಂಬ ಸುಳಿವು ಪಡೆದ ನಂತರ ಪೊಲೀಸರು ಆಕೆಯ ಮನೆಯ ಮೇಲೆ ದಾಳಿ ನಡೆಸಿದರು. ಈ ವೇಳೆ ಮಹಿಳೆಯ ಲ್ಯಾಪ್‌ಟಾಪ್‌ನಲ್ಲಿ ನಾಯಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಹೆಚ್ಚಿನ ವಿಡಿಯೋಗಳು ಕಂಡುಬಂದಿವೆ. ಮಹಿಳೆಯ ಇನ್‌ಸ್ಟಾಗ್ರಾಮ್‌ನಲ್ಲಿ ನಾಯಿಮರಿಗಳ ಅನೇಕ ಚಿತ್ರಗಳು ಮತ್ತು ವಿಡಿಯೋಗಳಿವೆ.
ಗುಮಿನ್ಸ್ಕಿ ವಿರುದ್ಧ ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕಾಗಿ ಮತ್ತು ವಿಡಿಯೋವನ್ನು ಚಿತ್ರೀಕರಿಸಿದ ಮತ್ತು ವಿತರಿಸಿದ ಆರೋಪ ಹೊರಿಸಲಾಗಿದೆ. ಮೇರಿಯನ್ ಕೌಂಟಿ ಪೊಲೀಸರು ಯುವತಿಯ ಬಂಧನವನ್ನು ಫೇಸ್‌ಬುಕ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಯುವತಿಯನ್ನು ಕೈಕೋಳದಲ್ಲಿ ಕರೆದೊಯ್ಯುತ್ತಿರುವ ಚಿತ್ರಗಳನ್ನು ಸಹ ಪೊಲೀಸರು ಹಂಚಿಕೊಂಡಿದ್ದಾರೆ. ಅಲ್ಲದೆ, ಗುಮಿನ್ಸ್ಕಿಯನ್ನು 10,000 ಡಾಲರ್ ಜಾಮೀನಿನ ಮೇಲೆ ಬಿಡುಗಡೆ ಸಹ ಮಾಡಲಾಗಿದೆ. ಏಪ್ರಿಲ್ 22 ರಂದು ಆಕೆ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. (ಏಜೆನ್ಸೀಸ್)