ಕಟೀಲು: ಗುರುವಾರ ರಾತ್ರಿ ಸುರಿದ ಸಿಡಿಲು ಮಳೆಗೆ ಕಟೀಲು ಸಮೀಪದ ದೇವರಗುಡ್ಡೆ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಭಾರತಿ ಆಚಾರ್ಯ ಎಂಬುವವರ ಮನೆಗೆ ರಾತ್ರಿ ಸಿಡಿಲು ಬಡಿದಿದ್ದು, ಈ ಸಂದರ್ಭ ಮನೆಯ ನಾಯಿ ಮೃತಪಟ್ಟಿದೆ.
ಮನೆಯ ಮೀಟರ್ ಬೋರ್ಡ್ ಸುಟ್ಟು ಹೋಗಿತ್ತು, ಭಾರತಿ ಆಚಾರ್ಯ ಅವರ ಕಾಲಿಗೆ ಸಿಡಿಲಿನಿಂದ ವಿದ್ಯುತ್ ಹರಿದಂತಾಗಿದ್ದು ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ.