ಜೂನಿಯರ್ ಎನ್​​​ಟಿಆರ್ ಬಳಿ ಇದೆಯೇ ಖಾಸಗಿ ವಿಮಾನ? ಇಲ್ಲಿದೆ Jr NTR ಆಸ್ತಿ ವಿವರ..

Jr NTR
Published on

Jr NTR: ಜೂನಿಯರ್ ಎನ್​ಟಿಆರ್ ಅವರು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲಿ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ ಎಂಬುದು ಎಲ್ಲರಿಗೂ ತಿಳಿದಿರೋ ವಿಚಾರ.  ಜೂನಿಯರ್ ಎನ್​​ಟಿಆರ್​​ ಬಾಲಿವುಡ್​​ ನಟ ಹೃತಿಕ್ ರೋಷನ್ ಜೊತೆಗೆ ಬಹುತಾರಾಗಣ ಚಿತ್ರ 'ವಾರ್ 2' ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ. ಈ ಬೃಹತ್ ಆಕ್ಷನ್ ಸಾಹಸ ಚಿತ್ರವು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ರೂಪುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ಮಾಧ್ಯಮಗಳು ಈಗ ಜೂನಿಯರ್ ಎನ್ ಟಿಆರ್ ಬಗ್ಗೆ ಸಾಕಷ್ಟು ಸುದ್ದಿಗಳನ್ನು ಬರೆಯುತ್ತಿವೆ. ಜೂನಿಯರ್ ಎನ್​​ಟಿಆರ್​​ ಆಸ್ತಿಗಳನ್ನು ಉಲ್ಲೇಖಿಸುತ್ತವೆ. ಜೂನಿಯರ್ ಎನ್‌ಟಿಆರ್ ಕೂಡ ಖಾಸಗಿ ಜೆಟ್ ಹೊಂದಿದ್ದಾರೆ ಎಂದು ಒಂದು ಲೇಖನದಲ್ಲಿ ಉಲ್ಲೇಖಿಸಲಾಗಿತ್ತು. ಆ ವಿವರಗಳನ್ನು ನೋಡೋಣ.

ಮಾಧ್ಯಮ ವರದಿಗಳ ಪ್ರಕಾರ ಜೂನಿಯರ್ ಎನ್‌ಟಿಆರ್ ಬಳಿ 80 ಕೋಟಿ. ರೂ. ಮೌಲ್ಯದ ಖಾಸಗಿ ಜೆಟ್ ಇದೆ. 80 ಅವರು ತಮ್ಮ ಕುಟುಂಬದೊಂದಿಗೆ ದೂರದ ಸ್ಥಳಗಳಿಗೆ ಪ್ರಯಾಣಿಸಲು ಖಾಸಗಿ ಜೆಟ್ ಅನ್ನು ಬಳಸುತ್ತಾರೆ.

ಜೂನಿಯರ್ ಎನ್‌ಟಿಆರ್ ಸುಮಾರು 500 ಕೋಟಿ. ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅತ್ಯಂತ ದುಬಾರಿ ಕಾರುಗಳು ಮತ್ತು ದುಬಾರಿ ಕೈಗಡಿಯಾರಗಳಿವೆ. ಹೈದರಾಬಾದ್‌ನಲ್ಲಿ. 25 ಕೋಟಿ ರೂ. ಮೌಲ್ಯದ ಐಷಾರಾಮಿ ಕಟ್ಟಡವಿದೆ. 4 ಕೋಟಿ ರೂ. ಬೆಲೆಬಾಳುವ ರಿಚರ್ಡ್ ಮಿಲ್ಲೆ ವಾಚ್ ಇದೆ. ಪಾಟೆಕ್ ಫಿಲಿಪ್ ಕಂಪನಿಯ ನಾಟಿಲಸ್ 40MM ಗಡಿಯಾರವನ್ನೂ ಹೊಂದಿದ್ದಾರೆ. ಇದರ ಬೆಲೆ ಸುಮಾರು 2.5 ಕೋಟಿ ರೂ. ಜೂನಿಯರ್ ಎನ್​ಟಿಆರ್​ 5 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಘಿನಿ ಉರುಸ್ ಕಾರನ್ನು ಹೊಂದಿದ್ದಾರೆ.

2 ಕೋಟಿ ರೂ. ಮೌಲ್ಯದ ರೇಂಜ್ ರೋವರ್ ಕಾರು ಇದೆ.2 ಕೋಟಿ ರೂ. ಮೌಲ್ಯದ BMW ಕಾರು ಇದೆ. 1 ಕೋಟಿ ರೂ. ಮೌಲ್ಯದ ಪೋರ್ಷೆ ಕಾರು ಇದೆ. 1 ಕೋಟಿ ರೂ. ಬೆಲೆಬಾಳುವ ಮರ್ಸಿಡಿಸ್ ಬೆಂಜ್ ಕಾರು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net