

soap: ಕೆಲವು ಮನೆಗಳಲ್ಲಿ ಇಂದಿಗೂ ಕೂಡಾ ಮನೆಮಂದಿ ಎಲ್ಲರೂ ಒಟ್ಟಿಗೆ ಒಂದೇ ಟವೆಲ್ ಹಾಗೂ ಸೋಪ್ ಬಳಕೆ ಮಾಡುತ್ತಾರೆ. ಆದರೆ ಈಗ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಪ್ರತಿಯೊಬ್ಬರು ತಮ್ಮ ಚರ್ಮಕ್ಕೆ ಸೂಕ್ತವಾಗುವ ಸೋಪಿನ ಬಳೆಕ ಮಾಡುತ್ತಾರೆ. ಆದರೆ ಯಾರ ಮನೆಯಲ್ಲಿ ಇಂದಿಗೂ ಒಂದೇ ಸೋಪವನ್ನು ಬಳೆಕ ಮಾಡುತ್ತಿದ್ದಾರೆ. ಅಂತಹವರಿಗಾಗಿ ನಾವು ಕೆಲವು ಆರೋಗ್ಯ ಸಲಹೆಯನ್ನು ನೀಡಲಿದ್ದೇವೆ.
ಸೂಕ್ಷ್ಮ ಚರ್ಮ ಮತ್ತು ಇತರ ಚರ್ಮದ ಕಾಯಿಲೆಗಳನ್ನು ಹೊಂದಿರುವ ಜನರು ಒಂದೇ ಸೋಪನ್ನು ಬಳಸುವುದರಿಂದ ಸೋಂಕುಗಳಿಗೆ ಒಳಗಾಗುವುದು ತುಂಬಾ ಸಾಮಾನ್ಯವಾಗಿದೆ. ಇದು ವಿಶೇಷವಾಗಿ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಮಕ್ಕಳು ಅಥವಾ ವೃದ್ಧರಿಗೆ ಹಾನಿಕಾರಕವಾಗಿದೆ.
ಸೋಪಿಗಿಂತ ಬಾಡಿ ವಾಶ್ ಬಳಸುವುದು ಉತ್ತಮವಾಗಿದೆ. ನೈರ್ಮಲ್ಯದ ದೃಷ್ಟಿಯಿಂದ ಉತ್ತಮವೆಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಪ್ರತ್ಯೇಕ ಬಾಟಲಿಗಳಲ್ಲಿ ಬಾಡಿ ವಾಶ್ ಬಳಸಿದರೆ, ಸೋಪಿನ ಮೂಲಕ ಸೋಂಕುಗಳು ಹರಡುವ ಸಾಧ್ಯತೆಯಿಲ್ಲ. ಅದಕ್ಕಾಗಿಯೇ ಆರೋಗ್ಯ ತಜ್ಞರು ಈ ರೀತಿಯ ದ್ರವ ಸೋಪಿನ ಬಳಕೆಯನ್ನು ಶಿಫಾರಸು ಮಾಡುತ್ತಾರೆ.
ಒಬ್ಬ ವ್ಯಕ್ತಿಯ ಸೋಪಿನಲ್ಲಿರುವ ಸೂಕ್ಷ್ಮಜೀವಿಗಳು ಅಥವಾ ಚರ್ಮದ ಸೋಂಕುಗಳು ಆ ಸೋಪಿನ ಮೂಲಕ ಇತರರಿಗೆ ಹರಡಬಹುದು. ಸೋಪಿನಲ್ಲಿರುವ ಒದ್ದೆಯಾದ ನೊರೆ ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ಬೆಳೆಯಲು ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲ, ಅನೇಕ ಜನರು ಸೋಪನ್ನು ಬಳಸಿದ ನಂತರ ಅದನ್ನು ಚೆನ್ನಾಗಿ ತೊಳೆಯದೆ ಹಾಗೆಯೇ ಬಿಡುತ್ತಾರೆ. ಇದು ಇತರರಿಗೆ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ಸೋಪು ದೇಹವನ್ನು ಸ್ವಚ್ಛವಾಗಿಡಲು ಮಾತ್ರ. ಆದರೆ ಆರೋಗ್ಯಕ್ಕೆ ಹಾನಿಕಾರಕ ರೀತಿಯಲ್ಲಿ ಬಳಸಿದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಎಲ್ಲರೂ ಒಂದೇ ರೀತಿಯ ಸೋಪು ಬಳಸಬೇಕಾದ ಪರಿಸ್ಥಿತಿಯಲ್ಲಿ, ಪ್ರತಿ ಬಾರಿ ಬಳಸಿದ ನಂತರ ಸೋಪನ್ನು ತೊಳೆದು ಸಂಪೂರ್ಣವಾಗಿ ಒಣಗಿಸಬೇಕು. ಸೋಪನ್ನು ನೇರವಾಗಿ ದೇಹಕ್ಕೆ ಹಚ್ಚಬೇಡಿ, ಆದರೆ ಅದನ್ನು ನಿಮ್ಮ ಕೈಯಲ್ಲಿ ನೊರೆ ಹಚ್ಚಿಕೊಂಡು ಬಳಸಿ. ನೀವು ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದರೆ, ವೈದ್ಯರ ಸಲಹೆಯನ್ನು ತೆಗೆದುಕೊಂಡು ನಿಮ್ಮ ಚರ್ಮಕ್ಕೆ ಸೂಕ್ತವಾದ ಸೋಪನ್ನು ಆಯ್ಕೆ ಮಾಡಲು ಮರೆಯದಿರಿ.