

ರಾಣೆಬೆನ್ನೂರ: ಲೋಕಸಭೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ನಗರದ ದೊಡ್ಡಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳು ಪ್ರತಿ ವರ್ಷದಂತೆ ಶ್ರದ್ಧಾಭಕ್ತಿಯಿಂದ ಜರುಗಿದವು. ನಂತರ ಇಲ್ಲಿಂದ ಹೊರಟ ಶ್ರೀ ಬಸವೇಶ್ವರ ಹಾಗೂ ರೇಣುಕಾಚಾರ್ಯರ ಮೂರ್ತಿಗಳ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಭಕ್ತರ ಉಲ್ಲಾಸ ಹರ್ಷೋದ್ಗಾರಗಳೊಂದಿಗೆ ನಡೆಯಿತು.
ಮೆರವಣಿಗೆ ಸಾಗಿಬರುವ ದಾರಿಯುದ್ದಕ್ಕೂ ಜನರು ರಸ್ತೆಗೆ ನೀರು ಹಾಕಿ ಸ್ವಾಗತ ಕೋರಿದರು. ಬಸವ ಜಯಂತಿ ಅಂಗವಾಗಿ ಎತ್ತುಗಳಿಗೆ ಬಲೂನುಗಳು ಸೇರಿ ವಿವಿಧ ವಸ್ತುಗಳಿಂದ ಸಿಂಗರಿಸಲಾಗಿತ್ತು.
ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅಜಯ ಜಂಬಗಿ, ಮಲ್ಲಿಕಾರ್ಜುನ ಪೂಜಾರ, ಬಸವರಾಜ ರೊಡ್ಡನವರ, ಉಮೇಶ ಹೊನ್ನಾಳಿ, ಕುಮಾರ ಎಳೆಹೊಳಿ ಮತ್ತಿತರರು ಪಾಲ್ಗೊಂಡಿದ್ದರು.