ಕಾನ್​ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ ಡಾಕ್ಟರೇಟ್​, ಎಲ್​ಎಲ್​ಬಿ, ಎಂಎಸ್ಸಿ, ಎಂ.ಟೆಕ್​ ಪದವೀಧರರು!

Constable
Published on

ಅಮರಾವತಿ: ಆಂಧ್ರಪ್ರದೇಶದಲ್ಲಿ 6,400 ಕಾನ್​ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದಕ್ಕೆ ಪಿಎಚ್.ಡಿ ಪಡೆದ 10, ಎಂಟೆಕ್​ನ 930, 5,284 ಎಂಬಿಎ, ಎಂಎಸ್ಸಿ ಪಡೆದ 4,365, ಎಲ್​ಎಲ್​ಬಿ ಪದವಿ ಪಡೆದ 94 ಮಂದಿ ಸೇರಿದಂತೆ ಒಟ್ಟು 5,03,486 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿಯ ಅಧಿಕೃತ ಟಿಪ್ಪಣಿ ಪ್ರಕಾರ, ಕಾನ್​ಸ್ಟೆಬಲ್ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಇಂಟರ್​ಮೀಡಿಯೆಟ್. ಆದರೆ, ಅರ್ಜಿ ಸಲ್ಲಿಸಿದವರಲ್ಲಿ 13,961 ಮಂದಿ ಸ್ನಾತಕೋತ್ತರ ಪದವಿ ಪಡೆದವರು, 1,55,537 ಮಂದಿ ಪದವಿ ಪಡೆದವರು ಸೇರಿದ್ದಾರೆ.

ಈ ಹುದ್ದೆಗಳಿಗೆ ಭಾನುವಾರ ಲಿಖಿತ ಪರೀಕ್ಷೆ ನಡೆಯಲಿದೆ. 5,03,486 ಅರ್ಜಿಗಳಲ್ಲಿ 3,95,415 ಮಂದಿ ಪುರುಷರು ಮತ್ತು 1,08,071 ಮಂದಿ ಮಹಿಳೆಯರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net