ಕೊರೊನಾ ವೈರಸ್ ರೋಗಿಗಳಿಗಾಗಿ ವೈದ್ಯರ ಡಾನ್ಸ್!

DANCE
Published on

ಜಗತ್ತಿನ ಎಲ್ಲೆಡೆ ಈಗ ಭಾರೀ ಚರ್ಚೆಯಲ್ಲಿರುವುದು ಕೊರೊನಾ ವೈರಸ್. ಇದು ಇರಾನ್​ನಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, 3,500 ಜನ ಇದರ ಬಾಧೆಗೆ ಒಳಗಾಗಿದ್ದಾರೆ, ನೂರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ.

25 ಕೊರೊನಾ ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿದ್ದು, ಸುಮಾರು ಹತ್ತು ಸಾವಿರ ವೈದ್ಯರು ಹಾಗೂ ಶುಶ್ರೂಷಕರು ಕರೊನಾ ಪೀಡಿತರ ಚಿಕಿತ್ಸೆಗಾಗಿ ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಈ ಮಧ್ಯೆ ರೋಗಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಚಿಕಿತ್ಸೆಯ ಸಮಯದಲ್ಲಿ ಕೆಲವು ವೈದ್ಯರು ಹಾಗೂ ಶುಶ್ರೂಷಕರು ಸಿನಿಮಾ ಹಾಗೂ ಪಾಪ್ ಹಾಡುಗಳಿಗೆ ಡಾನ್ಸ್ ಮಾಡುತ್ತಿದ್ದಾರೆ. ಅದರ ಜತೆಗೆ ಕುಣಿತದ ಮೂಲಕವೇ ಸ್ವಚ್ಛತೆಯ ಮಹತ್ವವನ್ನು ಕೂಡ ಸಾರುತ್ತಿದ್ದಾರೆ.

ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ಇದನ್ನು ಇರಾನ್​ನ ಮೂಲಭೂತವಾದಿಗಳು ಖಂಡಿಸಿದ್ದರೆ, ಟ್ವಿಟ್ಟರ್ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net