ನವದೆಹಲಿ: ಸಾಮಾನ್ಯವಾಗಿ ನಾವೆಲ್ಲರೂ ಈ ಬ್ಯಾಂಕ್ ಚೆಕ್ ಅಥವಾ ಸರ್ಕಾರಿ ಚಲನ್ ಭರ್ತಿ ಮಾಡುವಾಗ ಎಷ್ಟು ಮೊತ್ತ ಎಂಬುದನ್ನು ಬರೆದ ಬಳಿಕ, ಅದರ ಪಕ್ಕದಲ್ಲಿ 'ONLY' ಎಂಬ ಆಂಗ್ಲ ಪದವನ್ನು ಬರೆಯುತ್ತೇವೆ. ಆದರೆ. ಅದನ್ನು ಯಾವ ಕಾರಣಕ್ಕೆ ಬರೆದಿದ್ದೇವೆ? ಇದು ಎಲ್ಲರೂ ಬರೆಯುತ್ತಾರೆ ಅನ್ನೋ ಕಾರಣನಾ ಅಥವಾ ಇದರ ಹಿಂದೆ ಇನ್ಯಾವುದಾದರೂ ಮಹತ್ವದ ಉದ್ದೇಶ ಇದೆಯಾ? ಎಂಬ ಪ್ರಶ್ನೆಗಳು ಎಂದಿಗೂ ನಮ್ಮನ್ನು ಕಾಡಿರುವುದಿಲ್ಲ. ಅಸಲಿಗೆ, ಹೀಗೆ ಬರೆಯುವುದರ ಹಿಂದಿದೆ ನಿಮಗೆ ಗೊತ್ತಿರದ ಒಂದು ರೋಚಕ ಸಂಗತಿ.
ಈ ರೀತಿ ಬರೆಯುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಬದಲಿಗೆ ಹಣಕಾಸಿನ ವ್ಯವಹಾರಗಳಲ್ಲಿ ವಂಚನೆ ತಡೆಯುವ ಮಹತ್ವದ ಉದ್ದೇಶವೂ ಹೌದು. ಉದಾಹರಣೆಗೆ, ನೀವು 50 ಸಾವಿರ ರೂ. ಚೆಕ್ ಕೊಡುತ್ತಿದ್ದರೆ, ಅಕ್ಷರಗಳಲ್ಲಿ 'Fifty Thousand Rupees Only' ಎಂದು ಬರೆಯತ್ತೀರಾ. ಇಲ್ಲಿ 'ONLY' ಎಂಬ ಪದವು ಹಾಕಿರುವ ಮೊತ್ತದ ಜತೆಗೆ ಸುಮ್ಮನೆ ಹಾಕಿರುವುದಲ್ಲ. ಬದಲಿಗೆ ಈ ಹಣ ಅಂತಿಮ ಎಂಬುದರ ಸೂಚನೆ.
ಒಂದು ವೇಳೆ ಮೊತ್ತದ ಕೊನೆಯಲ್ಲಿ 'ONLY' ಎಂದು ಬರೆಯದಿದ್ದರೆ, ಆ ಖಾಲಿ ಜಾಗವನ್ನು ಬಳಸಿಕೊಂಡು ಹೆಚ್ಚುವರಿ ಪದಗಳನ್ನು ಸೇರಿಸಿ ಹಣದ ಒಟ್ಟು ಮೊತ್ತವನ್ನು ಬದಲಾಯಿಸಲು ದುರುದ್ದೇಶಪೂರಿತ ವ್ಯಕ್ತಿಗಳು ಪ್ರಯತ್ನಿಸುವ ಸಾಧ್ಯತೆ ಇರುತ್ತದೆ. ಇಂತಹ ಮೋಸದ ಕೆಲಸಗಳು ಆಗದಂತೆ ತಡೆಯಲು ಈ 'ONLY' ಪದವನ್ನು ಬಳಸಲಾಗುತ್ತದೆ ಎಂಬುದು ಗಮನಾರ್ಹ.
ಅಲ್ಲದೆ, ಚೆಕ್‌ನಲ್ಲಿ ಅಂಕಿಗಳಲ್ಲಿ ಹಾಕಿರುವ ಮೊತ್ತ ಮತ್ತು ಅಕ್ಷರಗಳಲ್ಲಿ ಬರೆದಿರುವ ಮೊತ್ತದ ನಡುವೆ ಸ್ಪಷ್ಟತೆ ಇರಲು ಇದು ಸಹಾಯ ಮಾಡುತ್ತದೆ. ಬ್ಯಾಂಕ್ ಚೆಕ್‌ಗಳು, ಡಿಮ್ಯಾಂಡ್ ಡ್ರಾಫ್ಟ್‌ಗಳು ಹಾಗೂ ಕೆಲವು ಸರ್ಕಾರಿ ಚಲನ್‌ಗಳಲ್ಲಿ ಈ ಪದವನ್ನು ಬಳಸುವ ಪದ್ಧತಿ ಹೆಚ್ಚು. ಹೀಗಾಗಿ, ಮುಂದಿನ ಸಲ ಬ್ಯಾಂಕ್ ಚೆಕ್ ಅಥವಾ ಚಲನ್ ಭರ್ತಿ ಮಾಡುವಾಗ ಮೊತ್ತದ ಕೊನೆಯಲ್ಲಿ 'ONLY' ಎಂಬ ಪದವನ್ನು ಬರೆಯುವುದನ್ನು ಮರೆಯದಿರಿ,(ಏಜೆನ್ಸೀಸ್).