ದಿಲೀಪ್ ಕುಮಾರ್‌ ಇಸ್ಲಾಂಗೆ ಮತಾಂತರಗೊಂಡು AR Rahman ಆಗಿ ಬದಲಾಗಿದ್ದು ಯಾಕೆ  ಗೊತ್ತಾ?

AR Rahman At The 'Marvel Anthem' Launch
AR Rahman At The 'Marvel Anthem' Launch
Published on

ಎಆರ್ ರೆಹಮಾನ್ ಇಸ್ಲಾಂಗೆ ಮತಾಂತರಗೊಂಡರು

ಮುಂಬೈ:  ಎಆರ್ ರೆಹಮಾನ್ ಸಂಗೀತ ಲೋಕದಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ಮೂಡಿಸಿಕೊಂಡಿದ್ದಾರೆ. ತಮ್ಮದೇ ಸಂಗೀತದಿಂದ ಹಲವು ಹಾಡುಗಳಿಗೆ ಜೀವ ತುಂಬಿದರು.ರೆಹಮಾನ್  29 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಕಿದ್ದಾರೆ. ಇವ್ರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯ ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಅದು ರೆಹಮಾನ್ ಮತ್ತು ಸೈರಾಬಾ ವಿಚ್ಛೇದನದ ಘೋಷಣೆ.

ರೆಹಮಾನ್  ಅವರ ಕುಟುಂಬ ಮಾಧ್ಯಮದ ಮುಂದೆ ಬರುವುದು ಅಪರೂಪ. ರೆಹಮಾನ್ ಪತ್ನಿ ವಿಚ್ಛೇದನ ನೀಡುವುದಾಗಿ ಘೋಷಿಸಿದಾಗ ಎಲ್ಲರೂ ಬೆಚ್ಚಿಬಿದ್ದರು.  ಇದೀಗ ನೆಟಿಜನ್‌ಗಳು ರೆಹಮಾನ್‌ ಜೀವನದ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ಈ ಕ್ರಮದಲ್ಲಿ, ರೆಹಮಾನ್  ಇಸ್ಲಾಂಗೆ ಏಕೆ ಮತಾಂತರಗೊಂಡರು ಎಂಬುದನ್ನು ಕಂಡುಹಿಡಿಯೋಣ.

ಒಂಬತ್ತನೇ ವಯಸ್ಸಿನಲ್ಲಿ ಅವರ ತಂದೆ ನಿಧನರಾದಾಗ, ರೆಹಮಾನ್ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಿದರು. ಹಣಕಾಸಿನ ಸಮಸ್ಯೆಯಿಂದ ಶಾಲೆಯನ್ನು ಮಧ್ಯದಲ್ಲಿಯೇ ಬಿಟ್ಟ ರೆಹಮಾನ್ 11 ನೇ ವಯಸ್ಸಿನಲ್ಲಿ ಇಳಯರಾಜ, ರಮೇಶ್ ನಾಯ್ಡು ಮತ್ತು ರಾಜ್ ಕೋಟಿಲ ಅವರ ಬಳಿ ಪಿಯಾನೋ ಮತ್ತು ಕೀಬೋರ್ಡ್ ಪ್ಲೇಯರ್ ಆಗಿ ಕೆಲಸ ಮಾಡಿದರು.

ಎ.ಆರ್‌. ರೆಹಮಾನ್‌ ಅವರ ಮೂಲ ಹೆಸರು ದಿಲೀಪ್‌ ಕುಮಾರ್‌. ಅವರ ತಂದೆ ಹೆಸರು ಆರ್‌.ಕೆ. ಶೇಖರ್‌. ಅವರ ಕುಟುಂಬ ಹಿಂದೂ ಧರ್ಮ ಪಾಲಿಸುತ್ತಿತ್ತು. ಆದರೆ ತಂದೆ ನಿಧನರಾದ ನಂತರ ದಿಲೀಪ್‌ ಕುಮಾರ್‌ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು, ಎ.ಆರ್‌. ರೆಹಮಾನ್‌ ಎಂದು ಹೆಸರು ಬದಲಾಯಿಸಿಕೊಂಡರು. ಈ ಬದಲಾವಣೆಗೆ ರೆಹಮಾನ್‌ ತಾಯಿಯೇ ಕಾರಣ. ರೆಹಮಾನ್‌ ತಂದೆಗೆ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ವೈದ್ಯಕೀಯ ಚಿಕಿತ್ಸೆಯ ಜೊತೆಗೆ ದೇವರ ಮೊರೆ ಕೂಡ ಹೋಗಬೇಕಾಯಿತು. ಆ ಸಂದರ್ಭದಲ್ಲಿ ರೆಹಮಾನ್‌ ತಾಯಿ ಅನೇಕ ದೇವಸ್ಥಾನ, ಚರ್ಚ್‌ ಮತ್ತು ಮಸೀದಿಗಳಿಗೂ ಭೇಟಿ ನೀಡುತ್ತಿದ್ದರು. ಆ ವೇಳೆ ಅವರ ಮೇಲೆ ಓರ್ವ ಸೂಫಿ ಪ್ರತಿಪಾದಕರು ಹೆಚ್ಚು ಪರಿಣಾಮ ಬೀರಿದರು. ಹಾಗಾಗಿ, ಆರ್‌.ಕೆ. ಶೇಖರ್‌ ನಿಧನರಾದ ಕೆಲವೇ ವರ್ಷಗಳ ಬಳಿಕ ಇಡೀ ಕುಟುಂಬ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿತು.

ರೆಹಮಾನ್ ಅವರ ಕುಟುಂಬ 1989 ರಲ್ಲಿ ಇಸ್ಲಾಂಗೆ ಮತಾಂತರಗೊಂಡಿತು. ಅಂದಿನಿಂದ ದಿಲೀಪ್ ಕುಮಾರ್ ಹೆಸರು ರೆಹಮಾನ್ ಎಂದು ಬದಲಾಯಿತು. ರೆಹಮಾನ್ ಕುಟುಂಬ ಇಸ್ಲಾಂಗೆ ಮತಾಂತರಗೊಂಡಿತ್ತು.   ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಿದ ಬಾಲಕ ಇಂದು ವಿಶ್ವವೇ ಮೆಚ್ಚುವ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net