

Prime Ministers:ನಮ್ಮ ದೇಶಕ್ಕೆ ಸ್ವಾತಂತ್ರ್ಯ(1947) ಬಂದಾಗಿನಿಂದ ನೆಹರು ಅವರಿಂದ ನರೇಂದ್ರ ಮೋದಿ ಅಂದರೆ ಇದುವರೆಗೆ ಒಟ್ಟು 15 ಜನ ಪ್ರಧಾನಿಗಳನ್ನು ಕಂಡಿದೆ. ಇದರಲ್ಲಿ ಯಾವ ರಾಜ್ಯ ನಮ್ಮ ದೇಶಕ್ಕೆ ಎಷ್ಟು ಪ್ರಧಾನಿ ನೀಡಿದೆ ಮತ್ತು ಯಾವ ರಾಜ್ಯದಿಂದ ಇದಿವರೆಗೂ ಪ್ರಧಾನಿನೇ ಆಯ್ಕೆ ಆಗಿಲ್ಲ ಎಂಬುದರ ಬಗ್ಗೆ ತಿಳಿಯೋಣ..
ಉತ್ತರ ಪ್ರದೇಶ ದೇಶದ ವಿಸ್ತೀರ್ಣ ಮತ್ತು ಅತಿ ಜನಸಂಖ್ಯೆ ಹಾಗೂ ಅಧಿಕ MLA ಮತ್ತು MP ಕ್ಷೇತ್ರಗಳನ್ನು ಹೊಂದಿರುವ ರಾಜ್ಯವಾಗಿದೆ. ಉತ್ತರಪ್ರದೇಶವನ್ನು ಭಾರತದ ರಾಜಕೀಯ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಕೇಂದ್ರದಲ್ಲಿ ಅಧಿಕಾರಿ ಹಿಡಿಯಬೇಕು ಎಂದರೆ ಯುಪಿಯ ಮತಗಳೇ ಎಂದು ಹೇಳಲಾಗುತ್ತದೆ. ದೇಶದ ಅಧಿಕ ಲೋಕಾಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ಇದುವರೆಗೂ ಅಧಿಕ ಪ್ರಧಾನಿಗಳನ್ನು ನೀಡಿದ ಹೆಗ್ಗಳಿಕೆ ಈ ರಾಜ್ಯಕ್ಕಿದೆ.
ಹೌದು, ಅಂಕಿ ಅಂಶಗಳನ್ನು ಗಮನಿಸಿದರೆ 9 ಪ್ರಧಾನಿಗಳನ್ನು ಉತ್ತರ ಪ್ರದೇಶ ನೀಡಿದೆ. ನರೇಂದ್ರ ಮೋದಿ ಗುಜರಾತ್ ಮೂಲ ನಿವಾಸಿಯಾಗಿದ್ದರೂ ಯುಪಿಯ ವಾರಣಾಸಿಯಿಂದ ಮೂರು ಬಾರಿ ಗೆದ್ದು ಪ್ರಧಾನಿಯಾಗಿದ್ದಾರೆ. 2014ರ ಮುಂಚೆ ಪ್ರಧಾನಿ ಹುದ್ದೆಯಲ್ಲಿದ್ದ ಮನಮೋಹನ್ ಸಿಂಗ್ ಮೂಲತ ಪಂಜಾಬಿನವಾರಿದ್ದು, ಅಸ್ಸಾಂನ ರಾಜ್ಯಸಭಾದಿಂದ ಆಯ್ಕೆಯಾಗಿ ಪ್ರಧಾನಿ ಹುದ್ದೆಗೇರಿದ್ದರು. ಮನಮೋಹನ್ ಸಿಂಗ್ಗಿಂತ ಮೊದಲು ಹಲವು ಪ್ರಧಾನಿಗಳು ವಿವಿಧ ರಾಜ್ಯಗಳಿಂದ ಪ್ರಧಾನಿಯಾಗಿದ್ದಾರೆ. ಅಲ್ಲದೆ, ಇಲ್ಲಿಯವರೆಗೂ ಒಬ್ಬ ಪ್ರಧಾನಿಯನ್ನು ಆಯ್ಕೆ ಮಾಡದ ರಾಜ್ಯಗಳು ಕೂಡ ಇವೆ.
ಉತ್ತರ ಪ್ರದೇಶ ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಪ್ರಧಾನಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಚೌಧರಿ ಚರಣ್ ಸಿಂಗ್, ರಾಜೀವ್ ಗಾಂಧಿ, ಚಂದ್ರಶೇಖರ್, ವಿಶ್ವನಾಥ್ ಪ್ರತಾಪ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರೂ ಸೇರಿದೆ. ಗುಜರಾತ್ನಿಂದ ಬಂದಿರುವ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದ ಸಂಸದರೂ ಆಗಿದ್ದಾರೆ.
ಆಂಧ್ರಪ್ರದೇಶ; ಪಿ.ವಿ.ನರಸಿಂಹರಾವ್
ಕರ್ನಾಟಕ; ಎಚ್.ಡಿ.ದೇವೇಗೌಡ
ಅಸ್ಸಾಂ; ಮನಮೋಹನ್ ಸಿಂಗ್
ಪಂಜಾಬ್; ಇಂದರ್ ಕುಮಾರ್ ಗುಜ್ರಾಲ್, ಗುಜ್ಜಾರಿಲಾಲ್ನಂದ
ಗುಜರಾತ್; ಮೊರಾರ್ಜಿ ದೇಸಾಯಿ
1.ರಾಜಸ್ಥಾನ, 2.ಉತ್ತರಾಖಂಡ, 3.ಸಿಕ್ಕಿಂ, 4.ಮೇಘಾಲಯ, 5.ಅರುಣಾಚಲಪ್ರದೇಶ, 6.ತ್ರಿಪುರಾ, 7.ಮಿಜೋರಾಂ, 8.ಹಿಮಾಚಲಪ್ರದೇಶ, 9.ಬಿಹಾರ, 10.ಜಾರ್ಖಂಡ್, 11.ಗೋವಾ, 12.ತಮಿಳುನಾಡು, 13.ಲಕ್ಷದ್ವೀಪ, 14.ಅಂಡಮಾನ್ ಮತ್ತು ನಿಕೋಬಾರ್, 15.ಕೇರಳದಂತಹ ರಾಜ್ಯಗಳು ಇನ್ನೂ ಒಬ್ಬನೇ ಪ್ರಧಾನಿಯಾಗಿಲ್ಲ(ಏಜೆನ್ಸೀಸ್)