ಅನೇಕ ಜನರು ಸಾಮಾನ್ಯವಾಗಿ ಬ್ಯಾಂಕ್ ಹಾಗೂ ಇತರೆ ಸ್ಥಳಗಳಲ್ಲಿ ಫಾರ್ಮ್(ಆನ್ಲೈನ್ ಅಥವಾ ಆಫ್ಲೈನ್) ತುಂಬುವ ವೇಳೆ ತಮ್ಮ ಪ್ಯಾನ್ ಸಂಖ್ಯೆ ಯನ್ನು ಕೊಟ್ಟಿರುತ್ತಾರೆ. ಈ ವೇಳೆ ಈ ಮಾಹಿತಿಯು ತಪ್ಪು ಕೈಗಳಿಗೆ ಬಿದ್ದರೆ, ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಯಾರಾದರೂ ನಿಮ್ಮ ಹೆಸರಿನಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು, ಕ್ರೆಡಿಟ್ ಕಾರ್ಡ್ ನೀಡಬಹುದು ಅಥವಾ ನಿಮ್ಮ ಹೆಸರು ವಂಚನೆಯ ವಹಿವಾಟಿನಲ್ಲಿ ಕಾಣಿಸಿಕೊಳ್ಳಬಹುದು. ಹೀಗಾಗಿ, ನಿಮ್ಮ ಪ್ಯಾನ್ ಕಾರ್ಡ್ ಇತಿಹಾಸವನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಬಹಳ ಮುಖ್ಯವಾಗಿದೆ.