ಪ್ರವಾಹದಂತಾದ ರಸ್ತೆಯ ಮ್ಯಾನ್‌ಹೋಲ್‌ನಿಂದ ಎದ್ದುಬಂದ ವ್ಯಕ್ತಿ ಮಾಡಿದ್ದೇನು ಗೊತ್ತಾ? Flooded Street

Flooded Street
Published on

Flooded Street: ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲಿಯೂ ಮಳೆಯಿಂದ ಹಾನಿಗೊಳಗಾಗ ಅನೇಕ ವೈರಲ್​​ ವಿಡಿಯೋಗಳನ್ನು ನಾವು ಸೋಶಿಯಲ್​​ ಮೀಡಿಯಾದಲ್ಲಿ ನೋಡಿರುತ್ತೇವೆ. ಆದರೆ ಇದೀಗ ಇಂತಹದ್ದೇ ಒಂದು ವಿಡಿಯೋ ಸಖತ್​​ ವೈರಲ್​ ಆಗುತ್ತಿದೆ. ಅದೇನೆಂದರೆ, ಮಳೆಯಿಂದ ರಸ್ತೆಯಲ್ಲೆಲ್ಲಾ ನೀರು ತುಂಬಿ ಪ್ರವಾಹದಂತಾದ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಮ್ಯಾನ್​ಹೋಲ್​​ನಿಂದ ಎದ್ದು ಬಂದು ಗೊರಿಲ್ಲಾ ರೀತಿ ವರ್ತಿಸಿದ ಘಟನೆ ಸಖತ್​​ ವೈರಲ್​ ಆಗಿದೆ.

ಇಂಟರ್ನೆಟ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಸೆರೆಹಿಡಿದಿದ್ದು, ಮಳೆಯಿಂದ ಪ್ರವಾಹದಂತಾದ ರಸ್ತೆಯ ಮಧ್ಯದಲ್ಲಿರುವ ಮ್ಯಾನ್‌ಹೋಲ್‌ನಿಂದ ವ್ಯಕ್ತಿಯೊಬ್ಬ ಹೊರ ಬಂದು, ಇದ್ದಕ್ಕಿದ್ದಂತೆ ಗೊರಿಲ್ಲಾದ ರೀತಿಯಲ್ಲಿ ತನ್ನ ಮುಷ್ಟಿಯಿಂದ ಎದೆಯನ್ನು ಬಡಿಯುತ್ತಾ ಪ್ರಾಣಿಯ ರೀತಿಯಲ್ಲಿ ವರ್ತಿಸುತ್ತಾನೆ.

ಇಲ್ಲಿದೆ ವಿಡಿಯೋ

ಈ ವಿಡಿಯೋದಲ್ಲಿ ಪಾದಚಾರಿಗಳು ಹತ್ತಿರದ ಅಂಗಡಿಯ ಕೆಳಗೆ ಮಳೆಯಿಂದ ಒದ್ದೆಯಾಗಿ ಆಶ್ರಯ ಪಡೆಯಲು ನಿಂತಿರುತ್ತಾರೆ. ಇದ್ದಕ್ಕಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಮ್ಯಾನ್​ಹೋಲ್​ನಿಂದ ಬಂದು ಗೊರಿಲ್ಲಾ ತರಹದ ಪ್ರದರ್ಶನ ನೀಡುತ್ತಾನೆ.

ಈ ವಿಚಿತ್ರ ವರ್ತನೆಗೆ ನಿಖರವಾಗಿ ಕಾರಣವೇನು? ಅವರು ರೀಲ್ಸ್​​​ಗಾಗಿ ಹೀಗೆ ಮಾಡಿದರೂ, ತೊಂದರೆಗೊಳಗಾಗಿದ್ದರೋ ಅಥವಾ ಪ್ರವಾಹದ ನಡುವೆ ಮ್ಯಾನ್‌ಹೋಲ್‌ನಿಂದ ಸುರಕ್ಷಿತವಾಗಿ ಹೊರಬರಲು ಸಂತೋಷಪಟ್ಟಿದ್ದರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಗೊಂದಲದ ಹೊರತಾಗಿಯೂ, ಈ ವಿಡಿಯೋ ಸುಮಾರು 5.8 ಮಿಲಿಯನ್ ವೀಕ್ಷಣೆಗಳು, 77,000 ಲೈಕ್‌ಗಳು ಮತ್ತು 300+ ಕಾಮೆಂಟ್‌ಗಳನ್ನು ಗಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net