ನೆನೆಸಿದ ಅಂಜೂರ ದಿನವೂ ತಿಂದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಅಚ್ಚರಿಯ ಆರೋಗ್ಯ ರಹಸ್ಯ! | Anjeer Benefits

Figs contain nutrients
ಅಂಜೂರದಲ್ಲಿದೆ ಪೌಷ್ಟಿಕಾಂಶಗಳ ಮಹಾಪೂರ
Published on: 
Summary

ಅಂಜೂರದಲ್ಲಿ ಇದೆ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಐರನ್ ಹಾಗೂ ವಿಟಮಿನ್‌ಗಳ ಸಮೃದ್ಧ ರಾಶಿ

ಅತ್ಯಧಿಕ ನಾರಿನಂಶ ಹೊಂದಿರುವ ಅಂಜೂರ ಮಲಬದ್ಧತೆ ಸಮಸ್ಯೆಗೆ ವರದಾನ

ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಿದರೆ, ಪೊಟ್ಯಾಸಿಯಮ್​ನಿಂದ ರಕ್ತದೊತ್ತಡ ನಿಯಂತ್ರಣ

Dry Fig Benefits: ಅಂಜೂರ (Ficus carica) ಅತ್ಯಂತ ಪುರಾತನ ಹಾಗೂ ಪೌಷ್ಟಿಕಾಂಶಗಳಿಂದ ಕೂಡಿದ ಅದ್ಭುತ ಹಣ್ಣು. ವೈಜ್ಞಾನಿಕವಾಗಿ ಇದು ನೂರಾರು ಸಣ್ಣ ಹೂವುಗಳನ್ನು ತನ್ನೊಳಗೆ ಮುಚ್ಚಿಟ್ಟುಕೊಂಡಿರುವ ವಿಶಿಷ್ಟ ರಚನೆಯಾಗಿದ್ದು, ಅಂಜೂರದ ಕಣಜ ಎಂಬ ಕೀಟದ ಮೂಲಕ ಇದರಲ್ಲಿ ಪರಾಗಸ್ಪರ್ಶ ನಡೆಯುತ್ತದೆ.

ಅಂಜೂರದಲ್ಲಿ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಐರನ್, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳು ಹೇರಳವಾಗಿವೆ. ಜೊತೆಗೆ ವಿಟಮಿನ್ ಎ, ಬಿ1, ಬಿ2, ಸಿ, ಕೆ ಹಾಗೂ ಅತ್ಯಧಿಕ ಪ್ರಮಾಣದ ನಾರಿನಂಶ (Fiber) ಅಡಗಿದೆ.

ಅಂಜೂರ ಪ್ರಮುಖ 3 ಪ್ರಯೋಜನಗಳು

1.ಜೀರ್ಣಕ್ರಿಯೆ ಚುರುಕು: ಇದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ದೀರ್ಘಕಾಲದ ಮಲಬದ್ಧತೆಯನ್ನು ನಿವಾರಿಸುತ್ತದೆ.

2.ಮೂಳೆಗಳ ಬಲವರ್ಧನೆ: ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಹೆಚ್ಚಿರುವುದರಿಂದ ಮೂಳೆಗಳು ದೃಢಗೊಳ್ಳುತ್ತವೆ ಹಾಗೂ ಆಸ್ಟಿಯೋಪೊರೋಸಿಸ್‌ಗೆ ಕಡಿವಾಣ ಬೀಳುತ್ತದೆ.

3.ಹೃದಯ ಮತ್ತು ಬಿಪಿ ನಿಯಂತ್ರಣ: ಇದರಲ್ಲಿರುವ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟು ಹೃದಯದ ಆರೋಗ್ಯವನ್ನು ಕಾಯುತ್ತದೆ.

Digestion, strength to bone
ಜೀರ್ಣಕ್ರಿಯೆಯಿಂದ ಮೂಳೆ ಬಲದವರೆಗೆ ಹಲವು ಲಾಭ

ಸೇವಿಸುವುದು ಹೇಗೆ?

ನೆನೆಸಿದ ಅಂಜೂರ: ರಾತ್ರಿ 2-3 ಒಣ ಅಂಜೂರವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರು ಮತ್ತು ಹಣ್ಣನ್ನು ತಿನ್ನುವುದು ಅತ್ಯುತ್ತಮ.

ತಾಜಾ ಹಣ್ಣು: ಸಿಗುವಾಗ ತಾಜಾ ಅಂಜೂರವನ್ನು ತೊಳೆದು ನೇರವಾಗಿ ತಿನ್ನಬಹುದು.

ಮಿಲ್ಕ್‌ಶೇಕ್: ನೆನೆಸಿದ ಅಂಜೂರವನ್ನು ಹಾಲಿನೊಂದಿಗೆ ಬೆರೆಸಿ ಸ್ಮೂಥಿ ಅಥವಾ ಮಿಲ್ಕ್‌ಶೇಕ್ ಮಾಡಿ ಕುಡಿಯಬಹುದು.

Fig Fruit
ದಿನಕ್ಕೊಂದು ಅಂಜೂರ ತಿಂದರೆ ಹತ್ತಿರ ಸುಳಿಯಲ್ಲ ರೋಗ

ಇದನ್ನೂ ಓದಿ: ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯ: ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯನ್ನು ಮಂಚದಲ್ಲಿ ಕರೆದೊಯ್ದ ಕುಟುಂಬ | Ambulance Negligence

ಅಂಜೂರದಲ್ಲಿ ನೈಸರ್ಗಿಕ ಸಕ್ಕರೆಯಂಶ ಹೆಚ್ಚಿರುವುದರಿಂದ ಮಧುಮೇಹಿಗಳು ವೈದ್ಯರ ಸಲಹೆ ಪಡೆದು ಮಿತವಾಗಿ ಸೇವಿಸಬೇಕು. ಒಣ ಅಂಜೂರವನ್ನು ಅತಿಯಾಗಿ ತಿಂದರೆ ಹೊಟ್ಟೆ ಉಬ್ಬರ ಅಥವಾ ಭೇದಿ ಉಂಟಾಗುವ ಸಾಧ್ಯತೆ ಇರುತ್ತದೆ.