ಕರೊನಾ ಲಾಕ್​ಡೌನ್​ ಸಮಯದಲ್ಲಿ ಇಡೀ ಜಗತ್ತಿನ ಜನರು ಹೆಚ್ಚು ತಿಂದದ್ದು ಏನು ಗೊತ್ತೆ?

Lockdown
Published on

ನವದೆಹಲಿ: 2020ರಲ್ಲಿ ಲಾಕ್​ಡೌನ್​ ಮತ್ತು ವರ್ಕ್ ಫ್ರಂ ಹೋಂ ಅನ್ನುತ್ತಾ ಕಾಲ ಕಳೆದ ಸಂದರ್ಭದಲ್ಲಿ ಜನರು ಅತಿಹೆಚ್ಚಾಗಿ ಇಷ್ಟ ಪಟ್ಟ ಆಹಾರ ಯಾವುದು ಗೊತ್ತೆ ? ಪಿಜ್ಜಾ!

'ಮನಿ ಬೀಚ್ ಯುಕೆ' ಸಂಸ್ಥೆಯು 100ಕ್ಕೂ ಹೆಚ್ಚು ದೇಶಗಳಲ್ಲಿ ಜನರು ಟೇಕ್​ಅವೇ ಅಥವಾ ಡೆಲಿವರಿಗಾಗಿ ಆಯ್ಕೆ ಮಾಡಿದ ಆಹಾರದ ಬಗ್ಗೆ ಸಮೀಕ್ಷೆ ಮಾಡಿ ವರದಿ ನೀಡಿದ್ದಾರೆ. ಅದರ ಪ್ರಕಾರ ಒಟ್ಟು 44 ದೇಶಗಳ ಜನರು ಗೂಗಲ್​ನಲ್ಲಿ ಹೆಚ್ಚಾಗಿ ಸರ್ಚ್ ಮಾಡಿದ ಫ್ರೇಸ್ ಎಂದರೆ 'ಪಿಜ್ಜಾ ಟೇಕ್​ಅವೇ' ಅಥವಾ 'ಪಿಜ್ಜಾ ಡೆಲಿವರಿ'! ಭಾರತವೂ ಸೇರಿ ಏಷ್ಯಾ, ಯುರೋಪ್, ಆಫ್ರಿಕಾ, ದಕ್ಷಿಣ ಅಮೆರಿಕದ ಹಲವು ದೇಶಗಳಲ್ಲಿ ಜನರು ಪಿಜ್ಜಾ ಪ್ರೇಮ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯಿಂದ ತಿಳಿದುಬಂದ ಮತ್ತೊಂದು ವಿಚಾರವೆಂದರೆ ಪಾಕಿಸ್ತಾನದ ಜನರು ಅತಿಹೆಚ್ಚು ಹುಡುಕಾಡಿದ್ದು ಭಾರತದ ಆಹಾರವನ್ನು! ಹೌದು, ಪಾಕಿಸ್ತಾನದ ಜೊತೆ ನೆದರ್​ಲ್ಯಾಂಡ್ಸ್, ಇಸ್ರೇಲ್ ಮತ್ತು ಅರೂಬಾ ದೇಶಗಳ ಜನರು ಅತಿಹೆಚ್ಚಾಗಿ ಸರ್ಚ್ ಮಾಡಿದ್ದು 'ಇಂಡಿಯನ್ ಫುಡ್​'. ಹೀಗಾಗಿ ಹೆಚ್ಚು ಬೇಡಿಕೆಯಲ್ಲಿದ್ದ ಟಾಪ್ ಟೆನ್ ಆಹಾರಗಳಲ್ಲಿ ಭಾರತೀಯ ಆಹಾರ ಆರನೇ ಸ್ಥಾನ ಗಳಿಸಿದೆ.

ಇತರ ಜನಪ್ರಿಯ ಆಹಾರಗಳಲ್ಲಿ ಚೈನೀಸ್ ಫುಡ್, ಜಪಾನಿನ ಸೂಶಿ, ಫಿಶ್ ಆ್ಯಂಡ್​ ಚಿಪ್ಸ್ ಮತ್ತು ಫ್ರೈಡ್ ಚಿಕನ್ ಇದೆ. ಪಿಜ್ಜಾ ನಂತರ ಅತಿ ಹೆಚ್ಚು ಅರಸಲಾದ ಚೈನೀಸ್ ಆಹಾರವು ಅಮೆರಿಕ, ಮೆಕ್ಸಿಕೋ, ಇಂಗ್ಲೆಂಡ್, ಐರ್ಲೆಂಡ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಜನರ ಅಚ್ಚುಮೆಚ್ಚಿನ ಆಯ್ಕೆಯಾಗಿತ್ತು. ಬ್ರೆಜಿಲ್, ಪೋರ್ಚುಗಲ್, ಸ್ವೀಡನ್, ಯುಕ್ರೇನ್ ಮತ್ತು ರೊಮಾನಿಯಾಗಳಲ್ಲಿ ಜಪಾನೀಯ ಆಹಾರವಾದ ಸೂಶಿ ಹಿಟ್ ಆದರೆ, ಬ್ರಿಟನ್ನಿನ ವಿಶೇಷತೆಯಾದ ಫಿಶ್ ಆ್ಯಂಡ್​ ಚಿಪ್ಸ್ಅನ್ನು ಕೆನಡಾ ಮತ್ತು ದಕ್ಷಿಣ ಆಫ್ರಿಕಾದ ಜನರು ಹೆಚ್ಚಾಗಿ ಅರಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net