ಸುದೀಪ್ 7ನೇ ತರಗತಿಯಲ್ಲಿದ್ದಾಗ ತಾಯಿಗೆ ಮೊದಲ ಬಾರಿ ಕೊಟ್ಟ ಊಡುಗೊರೆ ಯಾವುದು ಗೊತ್ತಾ? Sudeep First Gift Gave To His Mother

sudeep
Published on

ಬೆಂಗಳೂರು: ಸ್ಯಾಂಡಲ್​ವುಡ್​​ ನಟ ಕಿಚ್ಚ ಸುದೀಪ್ ( Sudeep First Gtift Gave To His Mother )​ ಅವರ ತಾಯಿ ವಿಧಿವಶರಾಗಿ ಇಂದಿಗೆ ಮೂರು ದಿನಗಳಾಗಿದೆ. ತಾಯಿಯನ್ನು ಕಳೆದುಕೊಂಡ ದುಖಃವನ್ನು ಸುದೀಪ್​ ಅವರು ಸೋಶಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಸೋಶಿಯಲ್​​ ಮೀಡಿಯಾದಲ್ಲಿ ಸುದೀಪ್ ಹಾಗೂ ಅವರ ತಾಯಿ ಕುರಿತಾದ ಕೆಲವು ಭಾವನಾತ್ಮಕ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

Sudeep Mother Saroja

ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನಟ ಸುದೀಪ್ ಬಗ್ಗೆ ತಾಯಿ ಸರೋಜಾ ಅವರು ಮಾತನಾಡಿದ್ದರು. ಸುದೀಪ್ ಬಾಲ್ಯದ ಬಗ್ಗೆ ನೆನೆಪಿಸಿಕೊಂಡಿದ್ದರು. 7ನೇ ತರಗತಿಯಲ್ಲಿದ್ದಾಗ ಸುದೀಪ್ ತಾಯಿಗೆ ಮೊದಲ ಬಾರಿ ಸೀರೆವೊಂದನ್ನು ಉಡುಗೊರೆ ನೀಡಿದ್ದರು. ಆ ಸೀರೆಯನ್ನು ಶೋಗೆ ತಂದು ಅದರ ಬಗ್ಗೆ ಮಾತನಾಡಲಾಗಿತ್ತು. ಈ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

Sudeep Mother

ಸುದೀಪ್​ ಅವರು ಮಾತನಾಡಿ, ಕೇಂಬ್ರಿಡ್ಜ್‌‌‌‌‌‌‌‌‌‌‌ ಶಾಲೆಯಲ್ಲಿ ಓದುತ್ತಿದ್ದೆ. ಆಗ ದೆಹಲಿ, ಆಗ್ರಾಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಪ್ರವಾಸದ ವೇಳೆ ಸೀರೆ ನೋಡಿ ಇಷ್ಟವಾಗಿ ಖರೀದಿಸಿ ತಂದಿದ್ದೆ. 7ನೇ ತರಗತಿಯಲ್ಲಿದ್ದಾಗ ಪಾಕೆಟ್ ಮನಿ ಉಳಿಸಿ ತಾಯಿಗಾಗಿ ಸುದೀಪ್ ಕೊಡಿಸಿದ್ದ ಸೀರೆ ಅದು. ಆ ಸೀರೆಯನ್ನು ಇಂದಿಗೂ ಭದ್ರವಾಗಿ ಸರೋಜಮ್ಮ ಇಟ್ಟುಕೊಂಡಿದ್ದಾರೆಂದು ಹೇಳಿದ್ದರು. ಸುದೀಪ್ ಸಾಧನೆಗೆ ತಾಯಿ ನಿಜವಾದ ಶಕ್ತಿ ಆಗಿದ್ದರು. ಈ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಕಿಚ್ಚ ಹೇಳಿಕೊಂಡಿದ್ದಾರೆ.

Sudeep Mother Saroja

ನ್ಯುಮೋನಿಯಾದಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ತಾಯಿ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಭಾನುವಾರ ಮುಂಜಾನೆ 07:04ಕ್ಕೆ ಸರೋಜಾ ಇಹಲೋಕ ತ್ಯಜಿಸಿದ್ದರು. ಸರೋಜಾ ಅವರ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿತ್ತು. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಹಿಂದೂ ಸಂಪ್ರದಾಯದಂತೆ ಸುದೀಪ್ ತಾಯಿಯ ಅಂತ್ಯಕ್ರಿಯೆ ನಡೆದಿದೆ.

&

ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣದ (Srirangapatna) ಗೋಸಾಯಿಘಾಟ್ ಬಳಿಯ ಕಾವೇರಿ ನದಿಯಲ್ಲಿ ಸರೋಜಮ್ಮನ ಅಸ್ತಿ ವಿಸರ್ಜಿಸಿ ಸದ್ಗತಿಗಾಗಿ ಸುದೀಪ್ ಪ್ರಾರ್ಥಿಸಿದ್ದಾರೆ. ವಿಧಿ ವಿಧಾನ ಕಾರ್ಯದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದಾರೆ.

sudeep bbks11
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net