ಗುರುತಿಸಲಾಗದಷ್ಟು ಬದಲಾದ ' ಬೃಂದಾವನ ' ಸಿನಿಮಾ ನಟಿ Karthika Nair! ದರ್ಶನ್​ ಜತೆ ನಟಿಸಿದ್ದ ಈಕೆ ಹೇಗಾಗಿದ್ದಾರೆ ನೋಡಿ…

Karthika Nair
Published on

ಹೈದ್ರಾಬಾದ್​: ಬಹುಭಾಷಾ ನಟಿ ಕಾರ್ತಿಕಾ ನಾಯರ್ ( Karthika Nair ) ನಟ ದರ್ಶನ್​​ ಅಭಿನಯದ ಬೃಂದಾವನ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಸಧ್ಯ ಸಿನಿಮಾದಿಂದ ಸ್ವಲ್ಪ ದೂರವಾಗಿದ್ದಾರೆ. ಈಗ ಬಹಳ ಸಮಯದ ನಂತರ ಈಕೆ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ.

ನಟಿ ಕಾರ್ತಿಕಾ ನಾಯರ್‌ ಮೂಲತಃ ಮಲಯಾಳಿ. ಹಿರಿಯ ನಟಿ ರಾಧಾ ಅವರ ಪುತ್ರಿ, ನಟಿ ಅಂಬಿಕಾ, ಕಾರ್ತಿಕಾಗೆ ದೊಡ್ಡಮ್ಮ ಆಗಬೇಕು. ಕಾರ್ತಿಕಾ ನಟಿಸಿದ್ದು ಒಂದೇ ಒಂದು ಕನ್ನಡ ಸಿನಿಮಾ. ಬೃಂದಾವನ ಸಿನಿಮಾ 2013 ರಲ್ಲಿ ತೆರೆ ಕಂಡಿತ್ತು. ಚಿತ್ರವನ್ನು ಶ್ರೀ ಸೀತಾ ಭೈರವೇಶ್ವರ ಬ್ಯಾನರ್‌ ಅಡಿಯಲ್ಲಿ ಕೆ ಮಾದೇಶ್‌ ಕಥೆ ಬರೆದು ಆಕ್ಷನ್‌ ಕಟ್‌ ಹೇಳಿದ್ದರು.

ಬೃಂದಾವನ ಸಿನಿಮಾದಲ್ಲಿ ದರ್ಶನ್‌ ಜತೆಗೆ ಕಾರ್ತಿಕಾ ನಾಯರ್‌, ಮಿಲನಾ ನಾಗರಾಜ್‌, ಸಾಯಿ ಕುಮಾರ್‌, ಸಂಪತ್‌ ರಾಜ್‌, ಜೈ ಜಗದೀಶ್‌, ದೊಡ್ಡಣ್ಣ ಹಾಗೂ ಇನ್ನಿತರರು ನಟಿಸಿದ್ದರು. ಚಿತ್ರದ ಹಾಡುಗಳಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು. ಆದರೆ ಸಿನಿಮಾ ಮಾತ್ರ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ.  ಕನ್ನಡ ಒಂದೇ ಸಿನಿಮಾದಲ್ಲಿ ಈ ನಟಿ ಕಾಣಿಸಿಕೊಂಡಿದ್ದರು ಸಾಕಷ್ಟ ಅಭಿಮಾನಿಗಳ ಮನದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Karthika Nair

ಕಾರ್ತಿಕಾ ಬಣ್ಣ ಹಚ್ಚಿದ್ದು ತೆಲುಗು ಚಿತ್ರರಂಗದ ಮೂಲಕ. 2009ರಲ್ಲಿ ತೆರೆ ಕಂಡ ಜೋಷ್‌ ಚಿತ್ರದ ಮೂಲಕ ಆಕೆ ಚಿತ್ರರಂಗಕ್ಕೆ ಬಂದರು. ನಂತರ ತಮಿಳು, ಮಲಯಾಲಂ, ತೆಲುಗು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. 2015ರಲ್ಲಿ ಪುರಮ್‌ಪೊಕ್ಕು ಎಂಗಿರ ಪೊಧುವುದಮೈ ಸಿನಿಮಾ ನಂತರ 2017 ರಲ್ಲಿ ಆರಂಭ್‌ ಎಂಬ ಹಿಂದಿ ಧಾರಾವಾಹಿಯೊಂದರಲ್ಲಿ ಅವರು ನಟಿಸಿದರು. ಅದಾದ ನಂತರ ಕಾರ್ತಿಕಾ ಮತ್ತೆ ಬಣ್ಣ ಹಚ್ಚಲಿಲ್ಲ.

ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಸದ್ಯ ಕುಟುಂಬ ಸಮೇತ ಕೇರಳದಲ್ಲಿ ನೆಲೆಸಿದ್ದಾರೆ. ಅಲ್ಲಿ ಅವರು UDS ಗ್ರೂಪ್ ಆಫ್ ಹೋಟೆಲ್ಸ್ (udshotels) ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಕಾರ್ತಿಕಾ ನಾಯರ್ ನವೆಂಬರ್ 2023 ರಲ್ಲಿ ರೋಹಿತ್ ಮೆನನ್ ಅವರನ್ನು ವಿವಾಹವಾದರು. ಕಾರ್ತಿಕಾ ಮದುವೆ ಆಗಿ ಪತಿ ಜತೆ ಸಮಯ ಕಳೆಯುತ್ತಿದ್ದಾರೆ. ನಟಿಯ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net