

Gautam Adani Sons Wedding : ಕೈಗಾರಿಕೋದ್ಯಮಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಅದಾನಿ ಮತ್ತು ದಿವಾ ಜೈಮಿನ್ ಶಾ ಅವರ ವಿವಾಹವಾಗಿದ್ದಾರೆ. ವಿವಾಹ ಸಮಾರಂಭವು ಆಪ್ತ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ನಡುವೆ ಸಾಂಪ್ರದಾಯಿಕ ರೀತಿಯಲ್ಲಿ ನಡೆಯುತ್ತಿದೆ.
ಫೆಬ್ರವರಿ 5 ರಂದು ವಿವಾಹ ಆಚರಣೆಗಳು ಪ್ರಾರಂಭವಾದವು. ಶಾಂತಿಗ್ರಾಮ, ಅದಾನಿ ಟೌನ್‌ಶಿಪ್, ಅಹಮದಾಬಾದ್‌ನಲ್ಲಿ, ಜೈನ ಮತ್ತು ಗುಜರಾತಿ ಸಂಪ್ರದಾಯಗಳನ್ನು ವಿವಾಹ ಸಮಾರಂಭ ನಡೆಸಲಾಯ್ತು. ಮಗನ ಮದುವೆ ಸರಳವಾಗಿ ನೆರವೇರಿಸಿರುವ ಅದಾನಿ, ವಿವಿಧ ಸಾಮಾಜಿಕ ಕಾರ್ಯಗಳಿಗೆ ಎಂದು ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಗೌತಮ್ ಅದಾನಿ, ದೇವರ ದಯೆಯಿಂದ ಜೀತ್ ದಿವಾ ಮದುವೆ ಸಂಪನ್ನವಾಗಿದೆ. ಚಿಕ್ಕದಾಗಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡಿದ್ದರಿಂದ ಅನೇಕ ಹಿತೈಷಿಗಳಿಗೆ ಆಮಂತ್ರಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಮದುವೆಯನ್ನು ಸಿಂಪಲ್ಲಾಗಿ ಮಾಡಿ 10 ಸಾವಿರ ಕೋಟಿ ಹಣವನ್ನು ವಿವಿಧ ಸಾಮಾಜಿಕ ಕೆಲಸಕ್ಕೆ ದಾನ ಮಾಡೋದಾಗಿ ತಿಳಿಸಿದ್ದಾರೆ. ಈ ಮೊತ್ತವು ಮುಕೇಶ್ ಅಂಬಾನಿ ಪುತ್ರ ಅನಂತ್ಅಂಬಾನಿ ಮದುವೆಯ ಎರಡರಷ್ಟಿದೆ. ಅನಂತ್ ಅಂಬಾನಿ ತಮ್ಮ ಮದುವೆ ಸಂದರ್ಭದಲ್ಲಿ 5 ಸಾವಿರ ಕೋಟಿ ಹಣ ಖರ್ಚು ಮಾಡಿದ್ದಾರೆ. ಇನ್ನು, ಗೌತಮ್ ಅದಾನಿ 10 ಸಾವಿರ ಕೋಟಿ ಹಣದಲ್ಲಿ ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ವಿಶ್ವದರ್ಜೆಯ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಶಾಲೆಗಳು, ಉದ್ಯೋಗವಕಾಶಗಳು ಹಾಗೂ ಜಾಗತಿಕ ಕೌಶಲ್ಯ ನೀಡಿರುವ ಸಂಸ್ಥೆಗಳ ಸ್ಥಾಪನೆಗೆ ಹಣ ಮೀಸಲಿಡಲಿದ್ದಾರೆ.
ಪ್ರತಿ ವರ್ಷ 500 ದಿವ್ಯಾಂಗ ವಧುಗಳಿಗೆ ತಲಾ 10 ಲಕ್ಷ ರೂಪಾಯಿ ನೀಡುವುದಾಗಿ ಜೀತ್ ಅದಾನಿ ಹಾಗೂ ದಿವಾ ಶಾ ಜೋಡಿ ಘೋಷಣೆ ಮಾಡಿದೆ. ಆ ಮೂಲಕ ನವ ಜೋಡಿ ಕೂಡ ಗೌತಮ್ ಅದಾನಿಯಂತೆ ಜನರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದೆ. ( Gautam Adani Sons Wedding )
ನವವಿವಾಹಿತರಾದ ಅದಾನಿ ಮತ್ತು ದಿವಾ ಕೂಡ ಮಂಗಳ ಸೇವೆಯ ಪ್ರತಿಜ್ಞೆ ಮಾಡಿದರು. ಇದರ ಭಾಗವಾಗಿ ಪ್ರತಿ ವರ್ಷ 500 ಅಂಗವಿಕಲ ಯುವತಿಯರ ಮದುವೆಗೆ 10 ಲಕ್ಷ ರೂ.ಗಳ ಸಹಾಯ ನೀಡಲಾಗುವುದು. ಈ ನಿರ್ಧಾರ ತಮಗೆ ಅಪಾರ ತೃಪ್ತಿ ತಂದಿದೆ ಎಂದು ಅವರು ಹೇಳಿದರು. ಈ ನೆರವು ಅಂಗವಿಕಲರ ಕುಟುಂಬಗಳಿಗೆ ಬೆಳಕು ತರುತ್ತದೆ ಎಂದು ಆಶಿಸಲಾಗಿತ್ತು. ಇದರ ಭಾಗವಾಗಿ, ಜೀತ್ ಅದಾನಿ ಇತ್ತೀಚೆಗೆ ವಿವಾಹವಾದ 21 ಅಂಗವಿಕಲ ಮಹಿಳೆಯರು ಮತ್ತು ಅವರ ಗಂಡಂದಿರನ್ನು ಭೇಟಿಯಾದರು.
ಜೀತ್ ಅದಾನಿ ಮತ್ತು ದಿವಾ ಜೈಮಿನ್ ಶಾ ಅವರ ವಿವಾಹವು ಕೇವಲ ಎರಡು ಕುಟುಂಬಗಳ ಒಕ್ಕೂಟವಲ್ಲ. ಇದು ಒಂದು ಅರ್ಥಪೂರ್ಣ ಕಾರಣಕ್ಕಾಗಿ ಆಚರಿಸಲಾಗುವ ಆಚರಣೆಯಾಗಿದೆ. ಅವರ ವಿವಾಹ ಸಮಾರಂಭವು ಮೌಲ್ಯಗಳು ಮತ್ತು ಔದಾರ್ಯವನ್ನು ಪ್ರತಿಬಿಂಬಿಸುತ್ತದೆ