ರಶ್ಮಿಕಾ ಕೈಯಲ್ಲಿರುವ ಈ ಎರಡು ಟ್ಯಾಟೂಗಳ ಅರ್ಥವೇನು ಗೊತ್ತಾ?

rashmika
Published on

ಬೆಂಗಳೂರು: ಕೊಡಗಿನ ಕುವರಿ, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಲುಸಾಲು ಸಿನಿಮಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟೈಲ್​, ಸಿನಿಮಾ ಮೂಲಕವಾಗಿ ಸುದ್ದಿಯಲ್ಲಿರುವ ನಟಿ ರಶ್ಮಿಕಾ. ಸಾಮಾಜಿಕ ಮಾಧ್ಯಮದಲ್ಲಿ  ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅವರು ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಆದರೆ ಇತ್ತೀಚೆಗಷ್ಟೇ ಈ ಸುಂದರಿಗೆ ಸಂಬಂಧಿಸಿದ ಇಂಟರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ರಶ್ಮಿಕಾ ಕೈ ಮೇಲೆ ಎರಡು ಟ್ಯಾಟೂ ಇದೆರೆ. ಅನೇಕ ಸಂದರ್ಭಗಳಲ್ಲಿ ರಶ್ಮಿಕಾ ಅವರ ಮಣಿಕಟ್ಟಿನ ಬಳಿ ಹಚ್ಚೆ ಕ್ಯಾಮರಾದಲ್ಲಿ ಕಂಡುಬಂದಿದೆ. ಆ ಹಚ್ಚೆಯ ಅರ್ಥವನ್ನೂ ಹಿಂದೆಯೇ ಹೇಳಲಾಗಿತ್ತು.

rashmika

ರಶ್ಮಿಕಾ ತೋಳಿನ ಮೇಲೆ (irreplaceable) ಎಂದು ಇಂಗ್ಲಿಷ್​​ನಲ್ಲಿ ಬರೆದಿರುವುದು ಕಾಣಿಸಿಕೊಳ್ಳುತ್ತದೆ. ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಶ್ಮಿಕಾ ತಮ್ಮ ಟ್ಯಾಟೂದ ಅರ್ಥವನ್ನು ಬಹಿರಂಗಪಡಿಸಿದರು.. (irreplaceable) ಎಂದೆ ಕನ್ನಡದಲ್ಲಿ ಭರಿಸಲಾಗದ ಎಂದು ಅರ್ಥ..” ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮದೇ ಆದ ರೀತಿಯಲ್ಲಿ ಅನನ್ಯರು. ನಿಮ್ಮ ಜೀವನದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ” ಕಾಲೇಜು ದಿನಗಳಲ್ಲಿ ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಆದರೆ ಬಲಗೈಯ ಮಧ್ಯದ ಬೆರಳಿನ ಮೇಲೆ ಮತ್ತೊಂದು ಹಚ್ಚೆ ಇದೆ. ಆ ಹಚ್ಚೆ ಏನು ಎಂದು ನೀವು ಯೋಚಿಸುತ್ತೀರಿ?.. ಇದು "ಅನಂತ" ಎನ್ನುವ ಅರ್ಥ. ಈ ಟ್ಯಾಟೂ ಇತ್ತೀಚೆಗೆ ರಶ್ಮಿಕಾ ಶೇರ್ ಮಾಡಿರುವ ಸೆಲ್ಫಿಯಲ್ಲಿ ಬೆರಳಿನ ಮೇಲೆ ಟ್ಯಾಟೂ ಕಾಣಿಸುತ್ತಿದೆ. ನೆಟಿಜನ್‌ಗಳು ಆ ಟ್ಯಾಟೂದ ಅರ್ಥವನ್ನು ಹುಡುಕಲಾರಂಭಿಸಿದರು.

ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಕ್ರೇಜ್ ಗಳಿಸಿದ್ದಾರೆ ರಶ್ಮಿಕಾ ಮಂದಣ್ಣ.  ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ಈ ಚೆಲುವೆಗೆ ಸಾಲು ಸಾಲು ಆಫರ್‌ಗಳು ಸಾಲುಗಟ್ಟಿ ನಿಂತಿವೆ. ಒಂದೆಡೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಲೇ ಮತ್ತೊಂದೆಡೆ ಹಲವು ಜಾಹೀರಾತುಗಳನ್ನು ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net