ಹೊಸ ಚಿಕನ್​ ರೆಸಿಪಿ ಟ್ರೈ ಮಾಡಲು ಬಯಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ಸಖತ್​ ಟೇಸ್ಟಿಯಾದ ಕಮರಕಟ್ಟು ಚಿಕನ್​! Kamarkattu Chicken

Kamarkattu Chicken
Published on

Kamarkattu Chicken : ಸಾಮಾನ್ಯವಾಗಿ ರಜೆಯ ದಿನಗಳಲ್ಲಿ ಎಲ್ಲರೂ ರುಚಿಕರವಾದ ಊಟ ಮಾಡಿದ ಬಳಿಕ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಅದರಲ್ಲೂ ಮಾಂಸಾಹಾರಿಗಳಿಗೆ ಚಿಕನ್ ತುಂಬಾ ಅಚ್ಚುಮೆಚ್ಚು. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೆಚ್ಚಿನ ಜನರು ಚಿಕನ್ ತಿನ್ನಲು ಇಷ್ಟಪಡುತ್ತಾರೆ.

ಭಾನುವಾರ ಅಥವಾ ಇನ್ಯಾವುದೇ ವಿಶೇಷ ದಿನ ಬರಲಿ ರುಚಿಕರವಾದ ಚಿಕನ್​ ಖಾದ್ಯ ಮಾಡಲು ಬಯಸುತ್ತಾರೆ. ಅದರಲ್ಲೂ ಒಂದೇ ರೀತಿಯ ಚಿಕನ್​ ಖಾದ್ಯ ತಿಂದು ತಿಂದು ಬೋರ್​ ಆದ ಮಂದಿ ಹೊಸ ರೀತಿಯ ಚಿಕನ್​ ರೆಸಿಪಿ ಟ್ರೈ ಮಾಡುತ್ತಾರೆ. ಹೈದರಾಬಾದಿ ಚಿಕನ್​ ರೆಸಿಪಿ, ಆಂಬೂರ್​ ಬಿರಿಯಾನಿ, ಕೊಲ್ಲಾಪುರಿ ಚಿಕನ್​ ಕರಿ ಹೀಗೆ ನಾನಾ ರೀತಿಯ ಚಿಕನ್​ ರೆಸಿಪಿಗಳಿವೆ. ಯೂಟ್ಯೂಬ್​ ಸೇರಿದಂತೆ ಅನೇಕ ಜಾಲತಾಣಗಳಲ್ಲಿ ಅಡುಗೆ ಕುರಿತು ಲಭ್ಯವಿರುವ ಅನೇಕ ವಿಡಿಯೋ ಹಾಗೂ ಪೋಸ್ಟ್​ಗಳನ್ನು ನೋಡಿ ಚಿಕನ್​ ರೆಸಿಪಿ ಟ್ರೈ ಮಾಡಿದ ಅನೇಕ ಮಂದಿಯನ್ನು ನಾವು ನೋಡಿದ್ದೇವೆ. ನೀವು ಕೂಡ ಟ್ರೈ ಮಾಡುತ್ತೀರಿ.

ಇದೀಗ ಹೊಸದಾಗಿ ಏನಾದರೂ ಟ್ರೈ ಮಾಡಬೇಕು ಅಂತಾ ನೀವು ಬಯಸಿದ್ದರೆ ಸಖತ್​ ರುಚಿಕರವಾದ ಕಮರಕಟ್ಟು ಚಿಕನ್​ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ. ಇದು ಅನ್ನ, ಚಪಾತಿ, ಪೂರಿ, ಇಡ್ಲಿ, ದೋಸೆ, ಮುದ್ದೆ ಮತ್ತು ಎಲ್ಲದರ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಮತ್ತು ಸಖತ್​ ಟೇಸ್ಟಿಯಾಗಿರುತ್ತದೆ. ಹಾಗಾದರೆ, ಕಮರಕಟ್ಟು ಚಿಕನ್​ ಮಾಡುವುದು ಹೇಗೆಂದು ನಾವೀಗ ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು

* ಕೋಳಿ ಮಾಂಸ - 500 ಗ್ರಾಂ

* ಈರುಳ್ಳಿ - 2 (ದೊಡ್ಡದು)

* ಟೊಮ್ಯಾಟೋ - 2

* ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಟೀ ಚಮಚ

* ಅರಿಶಿನ ಪುಡಿ - 1/2 ಟೀಚಮಚ

* ಮೆಣಸಿನ ಪುಡಿ - 1 ಟೀಚಮಚ

* ಜೀರಿಗೆ ಪುಡಿ - 1/2 ಟೀಚಮಚ

* ಧನ್ಯ ಪುಡಿ - 1/2 ಟೀಚಮಚ

* ಗರಂ ಮಸಾಲ ಪುಡಿ - 1/2 ಟೀಚಮಚ

* ಕರಿಬೇವು - ಒಂದು ಕಟ್ಟು

* ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು

* ಉಪ್ಪು - ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ನೀವು ತಂದಿರುವ ಚಿಕನ್ ಅನ್ನು ಚೆನ್ನಾಗಿ ತೊಳೆದುಕೊಳ್ಳಿ. ಬಳಿಕ ಅದಕ್ಕೆ ಅಗತ್ಯವಿರುವಷ್ಟು ಮೊಸರು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಸುಮಾರು 1 ಗಂಟೆ ಮ್ಯಾರಿನೇಟ್ ಮಾಡಲು ಬಿಡಿ. ನಂತರ ಒಂದು ಪ್ಯಾನ್​ನಲ್ಲಿ ಅಗತ್ಯವಿರುವಷ್ಟು ಅಡುಗೆ ಎಣ್ಣೆಯನ್ನು ಸುರಿಯಿರಿ ಮತ್ತು ಈರುಳ್ಳಿಯನ್ನು ಹಾಕಿ, ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ, ಅದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಹುರಿಯಿರಿ.

ಇದರ ಮಧ್ಯೆ ಟೊಮ್ಯಾಟೋವನ್ನು ಒಲೆಯಲ್ಲಿ ಚೆನ್ನಾಗಿ ಹುರಿದು, ಬಳಿಕ ಅವುಗಳ ಸಿಪ್ಪೆಯನ್ನು ಸುಲಿದು, ಅದಕ್ಕೆ ಬೆಳ್ಳುಳ್ಳಿ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಒಂದು ಕಡೆ ಇಟ್ಟುಕೊಳ್ಳಿ. ಈ ಪೇಸ್ಟ್​ ಅನ್ನು ಹುರಿದ ಈರುಳ್ಳಿ ಜೊತೆ ಮಿಕ್ಸ್​ ಮಾಡಿ ಚೆನ್ನಾಗಿ ಹುರಿಯಿರಿ. ಬಳಿಕ ಅದಕ್ಕೆ ಅರಿಶಿನ ಪುಡಿ, ಜೀರಿಗೆ ಪುಡಿ, ಕಾಶ್ಮೀರಿ ಮೆಣಸಿನ ಪುಡಿ, ಧನ್ಯ ಪುಡಿ ಮತ್ತು ಗರಂ ಮಸಾಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿ, ಸ್ವಲ್ಪ ಸಮಯ ಹುರಿಯಿರಿ. ಬಳಿಕ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿ ಬೇಯಿಸಿರಿ. ಕೊನೆಯಲ್ಲಿ ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ ಕೊಂಚ ಬೇಯಿಸಿದರೆ ಕಮರಕಟ್ಟು ಚಿಕನ್​ ಸವಿಯಲು ರೆಡಿ.

ಅಂದಹಾಗೆ, ಈ ಕಮರಕಟ್ಟು ಚಿಕನ್​ ಪರೋಟ, ರೋಟಿ ಹಾಗೂ ಚಪಾತಿಗೆ ಸಖತ್​ ಕಾಂಬಿನೇಷನ್​. ಹೊಸದಾಗಿ ಏನನ್ನಾದರೂ ಪ್ರಯತ್ನಿಸುತ್ತಿದ್ದಾರೆ ಈಗಲೇ ಕಮರಕಟ್ಟು ಚಿಕನ್​ ಟ್ರೈ ಮಾಡಿ ನೋಡಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net