

Chicken Curry : ಸಾಮಾನ್ಯವಾಗಿ ರಜೆಯ ದಿನಗಳಲ್ಲಿ ಎಲ್ಲರೂ ರುಚಿಕರವಾದ ಊಟ ಮಾಡಿದ ಬಳಿಕ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಅದರಲ್ಲೂ ಮಾಂಸಾಹಾರಿಗಳಿಗೆ ಚಿಕನ್ ತುಂಬಾ ಅಚ್ಚುಮೆಚ್ಚು. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೆಚ್ಚಿನ ಜನರು ಚಿಕನ್ ತಿನ್ನಲು ಇಷ್ಟಪಡುತ್ತಾರೆ.
ಭಾನುವಾರ ಅಥವಾ ಇನ್ಯಾವುದೇ ವಿಶೇಷ ದಿನ ಬರಲಿ ರುಚಿಕರವಾದ ಚಿಕನ್ ಖಾದ್ಯ ಮಾಡಲು ಬಯಸುತ್ತಾರೆ. ಅದರಲ್ಲೂ ಒಂದೇ ರೀತಿಯ ಚಿಕನ್ ಖಾದ್ಯ ತಿಂದು ತಿಂದು ಬೋರ್ ಆದ ಮಂದಿ ಹೊಸ ರೀತಿಯ ಚಿಕನ್ ರೆಸಿಪಿ ಟ್ರೈ ಮಾಡುತ್ತಾರೆ. ಹೈದರಾಬಾದಿ ಚಿಕನ್ ರೆಸಿಪಿ, ಆಂಬೂರ್ ಬಿರಿಯಾನಿ, ಕೊಲ್ಲಾಪುರಿ ಚಿಕನ್ ಕರಿ ಹೀಗೆ ನಾನಾ ರೀತಿಯ ಚಿಕನ್ ರೆಸಿಪಿಗಳಿವೆ. ಯೂಟ್ಯೂಬ್ ಸೇರಿದಂತೆ ಅನೇಕ ಜಾಲತಾಣಗಳಲ್ಲಿ ಅಡುಗೆ ಕುರಿತು ಲಭ್ಯವಿರುವ ಅನೇಕ ವಿಡಿಯೋ ಹಾಗೂ ಪೋಸ್ಟ್ಗಳನ್ನು ನೋಡಿ ಚಿಕನ್ ರೆಸಿಪಿ ಟ್ರೈ ಮಾಡಿದ ಅನೇಕ ಮಂದಿಯನ್ನು ನಾವು ನೋಡಿದ್ದೇವೆ. ನೀವು ಕೂಡ ಟ್ರೈ ಮಾಡುತ್ತೀರಿ.
ಇದೀಗ ಹೊಸದಾಗಿ ಏನಾದರೂ ಟ್ರೈ ಮಾಡಬೇಕು ಅಂತಾ ನೀವು ಬಯಸಿದ್ದರೆ ಪ್ರಖ್ಯಾತ ಶೆಫ್ ದಾಮು ಅವರ ಕೊತ್ತಂಬರಿ ಸೊಪ್ಪಿನ ಚಿಕನ್ ಕರಿ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ. ಅಂದಹಾಗೆ, ಶೆಫ್ ದಾಮೋದರನ್ ಓರ್ವ ಪ್ರಸಿದ್ಧ ಪ್ರಸಿದ್ಧ ಬಾಣಸಿಗರಾಗಿದ್ದು, ತಮಿಳು ಭಾಷೆಯ ದೂರದರ್ಶನ ಅಡುಗೆ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳಲ್ಲಿ ತಮ್ಮ ಕೌಶಲ್ಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಕೊತ್ತಂಬರಿ ಸೊಪ್ಪಿನ ಚಿಕನ್ ಕರಿ ಪಾಕವಿಧಾನ ಹಸಿರು ಬಣ್ಣದದ್ದಾಗಿದೆ. ಇದು ಅನ್ನ ಮತ್ತು ಚಪಾತಿಗೆ ಅದ್ಭುತ ಕಾಂಬಿನೇಷನ್ ಆಗಿದೆ. ಇದನ್ನು ಹೇಗೆ ಮಾಡಬೇಕು ಅನ್ನೋದನ್ನು ನಾವೀಗ ನಿಮಗೆ ತಿಳಿಸಿಕೊಡುತ್ತೇವೆ. ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ಕೊತ್ತಂಬರಿ ಸೊಪ್ಪಿನ ಚಿಕನ್ ಕರಿ ರೆಸಿಪಿಯನ್ನು ಸುಲಭವಾಗಿ ಮಾಡಬಹುದಾಗಿದೆ. ಹಾಗಾದರೆ, ಇನ್ನೇನು ತಡ ಶುರು ಮಾಡೋಣ ಬನ್ನಿ.
* ಕೋಳಿ ಮಾಂಸ - 500 ಗ್ರಾಂ
* ಎಣ್ಣೆ (ಅಗತ್ಯಕ್ಕೆ ತಕ್ಕಷ್ಟು)
* ತೆಂಗಿನ ಎಣ್ಣೆ - 50 ಮಿಲಿ
* ಕೊತ್ತಂಬರಿ ಸೊಪ್ಪು - 1 ಕಟ್ಟು
* ಈರುಳ್ಳಿ - 100 ಗ್ರಾಂ
* ಟೊಮ್ಯಾಟೋ - 2 ರಿಂದ 3
* ಹಸಿ ಮೆಣಸಿನಕಾಯಿ - 3 ರಿಂದ 4
* ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
* ಗೋಡಂಬಿ - 3 ರಿಂದ 4
* ಕರಿಬೇವು - ಸ್ವಲ್ಪ
* ತೆಂಗಿನಕಾಯಿ - 1/2
* ರುಚಿಗೆ ತಕ್ಕಷ್ಟು ಉಪ್ಪು
* ದಾಲ್ಚಿನ್ನಿ - ಸಣ್ಣ ತುಂಡು
* ಲವಂಗ - 1 ರಿಂದ 2
* ಏಲಕ್ಕಿ - 1 ರಿಂದ 2
* ಕೊತ್ತಂಬರಿ ಪುಡಿ - 1 ಟೀಚಮಚ
* ಕೆಂಪು ಮೆಣಸಿನ ಪುಡಿ - 1/2 ಟೀಚಮಚ
* ಜೀರಿಗೆ ಪುಡಿ - 1/4 ಟೀಚಮಚ
* ಮೆಣಸಿನ ಪುಡಿ - 1/4 ಟೀಚಮಚ
ಬಾಣಲೆಯನ್ನು ಸ್ಟೌ ಮೇಲೆ ಇಟ್ಟು, ಮಧ್ಯಮ ಉರಿಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ನಂತರ ಕೊತ್ತಂಬರಿ ಪುಡಿ, ಕೊತ್ತಂಬರಿ ಸೊಪ್ಪು, ತುರಿದ ತೆಂಗಿನಕಾಯಿ, ಕೆಂಪು ಮೆಣಸಿನಕಾಯಿ ಪುಡಿ, ಹಸಿರು ಮೆಣಸಿನಕಾಯಿ ಮತ್ತು ಗೋಡಂಬಿ ಸೇರಿಸಿ. ಇವೆಲ್ಲವನ್ನೂ ಒಂದು ನಿಮಿಷ ಚೆನ್ನಾಗಿ ಹುರಿದು ನುಣ್ಣಗೆ ಪೇಸ್ಟ್ ಮಾಡಿ ಒಂದು ಕಟ್ಟೆ ಇಟ್ಟುಕೊಳ್ಳಿ.
ಇದಾದ ಬಳಿಕ ಇನ್ನೊಂದು ಪ್ಯಾನ್‌ಗೆ ಎಣ್ಣೆ ಸುರಿದು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಬಳಿಕ ದಾಲ್ಚಿನ್ನಿ, ಲವಂಗ, ಏಲಕ್ಕಿ, ಅರ್ಧ ಚಮಚ ಮೆಂತ್ಯ ಪುಡಿ, ಕರಿಬೇವು, ಈರುಳ್ಳಿ, ಟೊಮ್ಯಾಟೋ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 2 ರಿಂದ 3 ನಿಮಿಷ ಹುರಿಯಿರಿ. ನಂತರ ಸ್ವಚ್ಛಗೊಳಿಸಿದ ಮತ್ತು ಕತ್ತರಿಸಿದ ಚಿಕನ್ ತುಂಡುಗಳನ್ನು ಸೇರಿಸಿ ಮತ್ತು ಚಿಕನ್ ಮೇಲೆ ಮಸಾಲೆಗಳು ಹೊಂದಿಕೊಳ್ಳುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಉಪ್ಪು, ಮೆಣಸಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಕೊನೆಯಲ್ಲಿ, ಸಾಕಷ್ಟು ನೀರು ಸೇರಿಸಿ 5 ರಿಂದ 10 ನಿಮಿಷಗಳ ಕಾಲ ಅಥವಾ ಚಿಕನ್ ಬೇಯುವವರೆಗೆ ಕುದಿಸಿ. ಇದರ ನಂತರ, ನಾವು ಮೊದಲು ರುಬ್ಬಿದ ಪೇಸ್ಟ್ ಅನ್ನು ಸೇರಿಸಿ, ಬೆರೆಸಿ ಚೆನ್ನಾಗಿ ಕುದಿಸಿ. ನಂತರ, ಗ್ರೇವಿ ಗಟ್ಟಿಯಾಗಲು ಪ್ರಾರಂಭಿಸಿದಾಗ, ಅದನ್ನು ಒಲೆಯಿಂದ ತೆಗೆದು ಸ್ಟೌ ಆಫ್ ಮಾಡಿ. ಸಿದ್ಧವಾದ ಗ್ರೇವಿಯನ್ನು ಅನ್ನ, ದೋಸೆ, ಪುಲಾವ್ ಅಥವಾ ರೊಟ್ಟಿಯೊಂದಿಗೆ ತಿನ್ನಿರಿ, ಇದು ಅದ್ಭುತ ರುಚಿಯನ್ನು ನೀಡುತ್ತದೆ. (ಏಜೆನ್ಸೀಸ್)