

ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿ, ಉದ್ಯಾನನಗರಿಯಾಗಿದ್ದ ಬೆಂಗಳೂರಿನ ಕೆರೆಗಳನ್ನು ಒಂದಾದ ಮೇಲೆ ಒಂದರಂತೆ ನುಂಗಿದ ಪರಿಣಾಮ ಬೆಂಗಳೂರಿಗೆ ಬೆಂಗಳೂರೇ ಕೆರೆಯಾಗಿ ಬಿಟ್ಟಿದೆ ಎಂದು ಜೆಡಿಎಸ್ ಟೀಕಿಸಿದೆ.
ಕೆರೆಗಳ್ಳರ ಕೈಗೆ ಅಧಿಕಾರ ಸಿಕ್ಕಿದರೆ ಇನ್ನೆನಾದೀತು? ಮಳೆ ನೀರನ್ನು ಆಕಾಶಕ್ಕೆ ವಾಪಸ್ ಕಳಿಸುತ್ತಿರಾ? ಅಥವಾ ಬೆಂಗಳೂರು ರಸ್ತೆಗಳ ಮೇಲೆ ದೋಣಿ ಸಾರಿಗೆ ಮಾಡುತ್ತಿರಾ? ಉತ್ತರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದೆ.
ಬೆಂಗಳೂರು ನಗರವನ್ನು ಬ್ರ್ಯಾಂಡ್ ಬೆಂಗಳೂರು ಮಾಡುವೆ ಎಂದಿದ್ದ ಗಿರಾಕಿ ಡಿ.ಕೆ.ಶಿವಕುಮಾರ್ ನಮ್ಮ ಹೆಮ್ಮೆಯ ನಗರವನ್ನು ಇಟಲಿಯ ವೆನಿಸ್ ಮಾಡಿ ಕೃತಾರ್ಥರಾಗಿದ್ದಾರೆ ಎಂದು ಆರೋಪಿಸಿದೆ.
ಬೆಂಗಳೂರಿನಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ಕಲ್ಪಿಸುವುದಾಗಿ ಸರ್ಕಾರ ಹೇಳಿತ್ತು. ನಿರಂತರ ಮಳೆಗೆ ಬೆಂಗಳೂರು ತೀವ್ರ ಸಂಕಷ್ಟಕ್ಕೆ ಸಿಲುಕಿ ನಲುಗುವಂತಾಗಿದೆ ಎಂದು ಜೆಡಿಎಸ್ ಟೀಕಿಸಿದೆ.