ನವರಾತ್ರಿಯ ಸಮಯದಲ್ಲಿ ನಿಮ್ಮಲ್ಲಿರುವ ಸಂಪತ್ತು ಹೆಚ್ಚಾಗಲು ಹೀಗೆ ಮಾಡಿ ಸಾಕು|Navratri

navaratri
Published on

Navratri: ನವರಾತ್ರಿಯ ಒಂಬತ್ತು ದಿನಗಳನ್ನು ದುರ್ಗಾ ದೇವಿಗಾಗಿ ಮೀಸಲಿಡಲಾಗಿದೆ. ಈ ದಿನಗಳಲ್ಲಿ ಜನರು ದೇವಿಯ ಒಂಬತ್ತು ರೂಪಗಳನ್ನು ಪೂಜಿಸುವ ಮೂಲಕ ಅವಳನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಇದರ ಜೊತೆಗೆ, ನವರಾತ್ರಿಯ ಸಮಯದಲ್ಲಿ ಭಕ್ತರು ಒಂಬತ್ತು ದಿನಗಳ ಉಪವಾಸವನ್ನು ಆಚರಿಸುತ್ತಾರೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯನ್ನು ಪೂಜಿಸುವುದರಿಂದ ವಿಶೇಷ ಫಲಿತಾಂಶಗಳು ದೊರೆಯುತ್ತವೆ. ಜ್ಯೋತಿಷ್ಯ ಶಾಸ್ತ್ರಗಳಲ್ಲಿ ನವರಾತ್ರಿಯ ಸಮಯದಲ್ಲಿ ಸಂಪತ್ತು ಹೆಚ್ಚಾಗಲು ಕೆಲವು ಆಚರಣೆಗಳು ಮತ್ತು ಧಾರ್ಮಿಕ ಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ದುರ್ಗಾ ದೇವಿಯನ್ನು ಮೆಚ್ಚಿಸಲು ಮತ್ತು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು ಜ್ಯೋತಿಷ್ಯ ಗ್ರಂಥಗಳಲ್ಲಿ ವಿವರಿಸಿದ ಕೆಲವು ಸರಳ ಹಂತಗಳನ್ನು ನೀವು ಪ್ರಯತ್ನಿಸಬಹುದು. ಹಾಗಿದ್ರೆ ಶರಧಿ ನವರಾತ್ರಿಯ ಸಮಯದಲ್ಲಿ ಸಂಪತ್ತನ್ನು ಪಡೆಯಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯೋಣ.

ಲಕ್ಷ್ಮೀ ಪೂಜೆ: ನವರಾತ್ರಿಯಲ್ಲಿ ದೇವಿ ಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸಿ. ವಿಶೇಷವಾಗಿ ದೀಪಾವಳಿಯ ಒಂದು ದಿನ ಮೊದಲು ಅಥವಾ ನವರಾತ್ರಿಯ ಕೊನೆಯ ದಿನಗಳಲ್ಲಿ ಲಕ್ಷ್ಮೀ ಪೂಜೆ ಮಾಡಿ. ಶುದ್ಧವಾದ ಸ್ಥಳದಲ್ಲಿ ಲಕ್ಷ್ಮೀ ದೇವಿಯ ಚಿತ್ರ ಅಥವಾ ವಿಗ್ರಹವನ್ನಿಟ್ಟು, ಹೂವು, ದೀಪ, ಧೂಪ, ಕುಂಕುಮ, ಹಣ್ಣುಗಳು ಮತ್ತು ಸಿಹಿತಿಂಡಿಗಳಿಂದ ಪೂಜಿಸಿ.

ಶುಚಿತ್ವ ಮತ್ತು ವಾಸ್ತು: ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ವಿಶೇಷವಾಗಿ ಉತ್ತರ ದಿಕ್ಕಿನಲ್ಲಿ ಕಸ, ಕೊಳೆಯಿರದಂತೆ ಗಮನವಿರಲಿ, ಏಕೆಂದರೆ ಇದು ಕುಬೇರನ ದಿಕ್ಕು ಎಂದು ನಂಬಲಾಗಿದೆ.

ಗಂಗಾಜಲ ಮತ್ತು ಕೆಂಪು ಬಟ್ಟೆ: ಲಕ್ಷ್ಮೀ ದೇವಿಯ ಪೂಜೆಯ ಸಮಯದಲ್ಲಿ ಕೆಂಪು ಬಟ್ಟೆಯ ಮೇಲೆ ಗಂಗಾಜಲದಿಂದ ಶುದ್ಧೀಕರಿಸಿದ ಒಂದು ಚಿನ್ನ ಅಥವಾ ಬೆಳ್ಳಿಯ ನಾಣ್ಯವನ್ನಿಟ್ಟು ಪೂಜಿಸಿ. ಇದನ್ನು ನಿಮ್ಮ ಹಣ ಇಡುವ ಜಾಗದಲ್ಲಿ ಇರಿಸಿ.

ಕುಬೇರ ಮಂತ್ರ ಪಠಣ: ನವರಾತ್ರಿಯ ಸಮಯದಲ್ಲಿ "ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ" ಎಂಬ ಕುಬೇರ ಮಂತ್ರವನ್ನು 108 ಬಾರಿ ಜಪಿಸಿ. ಇದನ್ನು ಶುದ್ಧ ಮನಸ್ಸಿನಿಂದ ಮಾಡಿದರೆ ಅಂದುಕೊಂಡದ್ದು ಈಡೇರುತ್ತದೆಯಂತೆ.

ದಾನ-ಧರ್ಮ: ಸಂಪತ್ತು ಹೆಚ್ಚಲು, ದಾನ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಬಡವರಿಗೆ ಅನ್ನ, ವಸ್ತ್ರ, ಅಥವಾ ಹಣವನ್ನು ದಾನ ಮಾಡಿ. ಇದು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರವಾಗಲು ಸಹಾಯ ಮಾಡುತ್ತದೆ.

ದೀಪದ ಆರಾಧನೆ: ಪ್ರತಿದಿನ ಸಂಜೆ ತುಪ್ಪದ ದೀಪವನ್ನು ಹಚ್ಚಿ, ದೇವಿಯ ದೇವಸ್ಥಾನದಲ್ಲಿ ಅಥವಾ ಮನೆಯ ಮುಖ್ಯ ದ್ವಾರದ ಬಳಿ ಇಡಿ. ಇದು ಧನಾಕರ್ಷಣೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಇಲ್ಲಿರುವ ಮಾಹಿತಿಯನ್ನು ಧಾರ್ಮಿಕ ನಂಬಿಕೆಗಳು ಆಧ್ಯಾತ್ಯಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ವಿಷ್ಣು ಸಹಸ್ರನಾಮ : ವಿಷ್ಣು ಸಹಸ್ರನಾಮವನ್ನು ಪಠಿಸುವುದು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರವಾಗಲು ಒಳ್ಳೆಯ ಮಾರ್ಗವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net