ಆತ್ಮ ಮೆಚ್ಚುವಂಥ ಕೆಲಸ ಮಾಡಿ

swamiji
ಆನಂದಪುರ ಸಮೀಪದ ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಮಳಲಿ ಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಂತಕುಮಾರ ಗೌಡ, ಸೋಮಶೇಖರ ಗೌಡ, ಪ್ರಕಾಶ ಗೌಡ ಇತರರಿದ್ದರು.
Published on

ಆನಂದಪುರ: ನಾವು ಮಾಡುವ ಎಲ್ಲ ಸತ್ಕಾರ್ಯಗಳಿಗೂ ಗುರು ಕೃಪೆ ಇರಬೇಕು. ಗುರು ಸಕಲ ಸಿದ್ಧಿಗಳಿಗೂ ಮೂಲ ಕಾರಣ ಎಂದು ಮಳಲಿಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಮೀಪದ ಕೆಂಜಗಾಪುರದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಶ್ರಾವಣ ವಿಶೇಷ ಪೂಜೆ ಮತ್ತು ಧರ್ಮ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಾವು ಮಾಡುವ ಕೆಲಸಗಳು ಕನಿಷ್ಠ ಇಬ್ಬರಿಗೆ ಸರಿ ಎನಿಸಿದರೆ ಸಾಕು. ಒಂದು ಪರಮಾತ್ಮ, ಇನ್ನೊಂದು ಆತ್ಮ. ಈ ಇಬ್ಬರೂ ಮೆಚ್ಚುವಂತಹ ಕೆಲಸವನ್ನು ಗುರು ಸಹ ಮೆಚ್ಚಿ ಹರಸುತ್ತಾನೆ. ಈ ಲೋಕದಲ್ಲಿ ಭೋಗ, ಮೋಕ್ಷ ರೂಪದ ಸಕಲ ಕಾರ್ಯಕ್ಕೂ ಗುರು ಕೃಪೆ ಇರಲೇಬೇಕು. ಶಿವನೇ ಸ್ವತಃ ಗುರುವಿನ ರೂಪದಲ್ಲಿ ನಮ್ಮನ್ನು ಸಲಹುತ್ತಾನೆ. ಎಲ್ಲರೂ ಪಂಚಾಕ್ಷರಿ ಮಂತ್ರ ಪಠಿಸಿ ಸಕಲ ಪಾಪಗಳಿಂದ ಮುಕ್ತರಾಗಬಹುದು ಎಂದರು.

ಹೆತ್ತ ಒಡಲು, ಹೊತ್ತ ಹೆಗಲು ಅಂದರೆ ಮಾತಾ-ಪಿತೃಗಳ ಋಣ ಹಾಗೂ ಜ್ಞಾನಾಮೃತ ಉಣಿಸಿದ ಗುರುವಿನ ಕರುಣೆಯನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು. ಶಾಂತಕುಮಾರ ಗೌಡ ಆಚಾಪುರ, ಕೆಂಜಗಾಪುರ ಸೋಮಶೇಖರ ಗೌಡ, ಮಾಣಿಕೆರೆ ಪ್ರಕಾಶ ಗೌಡ, ನಿರಂಜನ ಸ್ವಾಮಿ, ಆಲುವಳ್ಳಿ ಪ್ರಕಾಶ ಗೌಡ, ಜಿ.ಕೆ.ರುದ್ರಪ್ಪ, ಶಿವಲಿಂಗಯ್ಯ, ಅರ್ಚಕ ಗಂಗಾಧರಪ್ಪ, ವೇದಮೂರ್ತಿ, ಪ್ರವೀಣ ಕೆಂಜಗಾಪುರ, ಕೆರೆಹಿತ್ತಲು ಗಿರೀಶ, ವೀರೇಶ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net