ಸರ್ಕಾರದ ಆದೇಶ -ಕಾಯ್ದೆ ಉಲ್ಲಂಸದಿರಿ

9 GVT 01
ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಂಗಾವತಿ ಮತ್ತು ಕಾರಟಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಮತ್ತು ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸಲಾಯಿತು.ಲೋಕಾಯುಕ್ತ ಎಸ್ಪಿ ಸತೀಶ ಎಸ್.ಚಿಟಗುಪ್ಪಾ, ಕೊಪ್ಪಳ ಡಿವೈಎಸ್ಪಿ ಆರ್. ವಸಂತಕುಮಾರ, ತಾಪಂ ಇಒಗಳಾದ ಲಕ್ಷ್ಮೀದೇವಿ ಯಾದವ್, ರಾಮರೆಡ್ಡಿ ಪಾಟೀಲ್ ಇತರರಿದ್ದರು.
Published on

ಗಂಗಾವತಿ: ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಾಗ ಮಾತ್ರ ಇಲಾಖೆಯ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗಲಿದ್ದು, ಕಾಲಮಿತಿಯೊಳಗೆ ಪರಿಶೀಲನೆ ಪೂರ್ಣಗೊಳಿಸುವಂತೆ ಲೋಕಾಯುಕ್ತ ಎಸ್ಪಿ ಸತೀಶ ಎಸ್.ಚಿಟಗುಪ್ಪಾ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಂಗಾವತಿ ಮತ್ತು ಕಾರಟಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಮತ್ತು ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಶೀಲನೆಯಲ್ಲಿ ಲೋಪಗಳು ಕಂಡು ಬಂದಾಗ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಾರಸು ಮಾಡಬೇಕು. ವಿನಾಕಾರಣ ವಿಳಂಬ ಧೋರಣೆ ಅನುಸರಿಸುವುದು ಸರಿಯಲ್ಲ. ಕಾನೂನಿನ ಇತಿಮಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದು, ಯಾವುದೇ ಕಾರಣಕ್ಕೂ ಸರ್ಕಾರದ ಆದೇಶ ಮತ್ತು ಕಾಯ್ದೆ ಉಲ್ಲಂಘನೆಗೆ ಅವಕಾಶ ನೀಡಬಾರದು.

ಪ್ರತಿಯೊಂದು ಇಲಾಖೆಯಲ್ಲೂ ಸಕಾಲ ಸೇವೆಯ ಮಾಹಿತಿ ಲಕವನ್ನು ಕಡ್ಡಾಯವಾಗಿ, ಸೇವಾ ಶುಲ್ಕವನ್ನೂ ನಮೂದಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಲೋಕಾಯುಕ್ತ ಇಲಾಖೆ ಸಹಾಯವಾಣಿ ನಂಬರ್ ಬರೆಯಿಸಿರಿ. ಪ್ರತಿಯೊಂದು ದೂರನ್ನು ಸ್ವೀಕರಿಸಬೇಕಿದ್ದು, ಸಕಾಲಕ್ಕೆ ಪರಿಶೀಲನೆ ವರದಿಯೂ ಸಲ್ಲಿಸಬೇಕು ಎಂದರು.

ಕೊಪ್ಪಳ ಡಿವೈಎಸ್ಪಿ ಆರ್. ವಸಂತಕುಮಾರ ಮಾತನಾಡಿ, ಸಕಾಲ ಮತ್ತು ಆರ್‌ಟಿಐ ದೂರುಗಳು ಬಾಕಿ ಉಳಿದುಕೊಂಡಿದ್ದರೆ ಶೀಘ್ರವೇ ಲೋಕಾಯುಕ್ತಕ್ಕೆ ಮಾಹಿತಿ ನೀಡಬೇಕು. ಜನವರಿಯಿಂದ ಮಾರ್ಚ್ ಅಂತ್ಯದವರಿಗೂ ಬಾಕಿ ಉಳಿದುಕೊಂಡಿರುವ ಮತ್ತು ವಿಲೇವಾರಿಯಾಗಿರುವ ದೂರುಗಳ ಮಾಹಿತಿ ಸಭೆಯಲ್ಲಿ ಸಲ್ಲಿಸುವ ಸೂಚಿಸಿದರೂ ಯಾವ ಇಲಾಖೆ ಅಧಿಕಾರಿಗಳು ಪಾಲಿಸಿಲ್ಲ. ವಾರದೊಳಗೆ ಸಮಗ್ರ ಮಾಹಿತಿಯನ್ನು ತಹಸಿಲ್ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದರು.

ಕೋವಿಡ್ ನಂತರ ಸಾವಿರಾರು ದೂರುಗಳು ಬಾಕಿ ಉಳಿದುಕೊಂಡಿದ್ದು, ಆದ್ಯತಾನುಸಾರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಕುಡಿವ ನೀರು ಮತ್ತು ವಿದ್ಯುತ್ ಪೂರೈಕೆ ವಿಚಾರದಲ್ಲಿ ನಿರ್ಲಕ್ಷ್ಯವಹಿಸುವಂತಿಲ್ಲ ಎಂದು ಗ್ರಾಕುನೈ ಮತ್ತು ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಪಂಗೆ ಸಂಬಂಧಿಸಿದಂತೆ ದೂರಿನಲ್ಲಿ ಲೋಪ ಸಾಬೀತಾದರೂ ಯಾವುದೇ ಕ್ರಮ ಕೈಗೊಳ್ಳದ ಕಾರಟಗಿ ತಾಪಂ ಇಒ ಲಕ್ಷ್ಮೀದೇವಿ ಯಾದವ್‌ರನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಕಂದಾಯ, ಗ್ರಾಪಂ, ಅಬಕಾರಿ ಸೇರಿ ವಿವಿಧ ಇಲಾಖೆ 15ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿದ್ದು, ಕೆಲ ಪ್ರಕರಣವನ್ನು ಸ್ಥಳ ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು. ಕಾರಟಗಿ ತಹಸೀಲ್ದಾರ್ ಕುಮಾರಸ್ವಾಮಿ, ಗ್ರೇಡ್2 ತಹಸೀಲ್ದಾರ್ ಮಹಾಂತಗೌಡ ಗೌಡರ್, ತಾಪಂ ಇಒ ರಾಮರೆಡ್ಡಿ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net