ಅಪರಿಚಿತರೊಂದಿಗೆ ಖಾಸಗಿ ವಿಚಾರ ಹಂಚಿಕೊಳ್ಳಬೇಡಿ: ಎಎಸ್‌ಪಿ

kamala nehar clg programme
ಶಿವಮೊಗ್ಗದ ಕಮಲಾ ನೆಹರು ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಕಾನೂನು ಕುರಿತು ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಮಾತನಾಡಿದರು. ಡಾ. ಎಂ.ಆರ್.ಜಗದೀಶ್, ಡಾ. ಓಂಕಾರಪ್ಪ, ಪ್ರೊ. ಎಂ.ಆಶಾಲತಾ, ಎಂ.ಎನ್.ಸುಂದರರಾಜ್ ಇದ್ದರು.
Published on

ಶಿವಮೊಗ್ಗ: ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಗಾಗಿ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೊಳಿಸಿದೆ. ಭ್ರೂಣ ರಕ್ಷಣೆಯಿಂದ ಹಿಡಿದು ಜೀವಿತಾವಧಿವರೆಗೂ ಮಹಿಳೆಯರ ರಕ್ಷಣೆಗೆ ಕಾನೂನುಗಳಿವೆ ಎಂದು ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಹೇಳಿದರು.

ಕಮಲಾ ನೆಹರು ಕಾಲೇಜಿನಲ್ಲಿ ಕರ್ನಾಟಕ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಉಪನ್ಯಾಸದಲ್ಲಿ ಮಹಿಳೆ ಮತ್ತು ಕಾನೂನು ಕುರಿತು ಮಾತನಾಡಿ, ಕಾನೂನುಗಳ ದುರ್ಬಳಕೆಯಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ತಡೆಗಟ್ಟಲು ಇರುವ ಒಂದೇ ಸಾಧನ ಕಾನೂನು ಅರಿವು ಎಂದು ಅಭಿಪ್ರಾಯಪಟ್ಟರು.
ಮಹಿಳೆಯರು ಉಚಿತವಾಗಿ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಬಹುದು. ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ಹೊಂದಿರಬೇಕು. ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಖಾಸಗಿ ವಿಚಾರ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಮಾತನಾಡಿ, ಹೆಣ್ಣುಮಕ್ಕಳ ಸುರಕ್ಷತೆಗೆ ಇಷ್ಟೆಲ್ಲ ಕಾನೂನುಗಳಿದ್ದರೂ ಪ್ರತಿ ವರ್ಷ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ. ರಾಷ್ಟ್ರೀಯ ಅಪರಾಧ ಸಂಶೋಧನಾ ಸಂಸ್ಥೆ ವರದಿಯಂತೆ 2021ರಲ್ಲಿ 4,28,650 ಮಹಿಳಾ ದೌರ್ಜನ್ಯ ವರದಿಯಾಗಿವೆ. ಹಿಂದಿನ ವರ್ಷಕ್ಕಿಂತ ಶೇ.87ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಕಮಲಾ ನೆಹರು ಕಾಲೇಜಿನ ಪ್ರಾಚಾರ್ಯ ಡಾ. ಎಂ.ಆರ್.ಜಗದೀಶ್, ಡಾ. ಓಂಕಾರಪ್ಪ, ಪ್ರೊ. ಎಂ.ಆಶಾಲತಾ, ಎಚ್.ಡಿ.ಮೋಹನ್ ಶಾಸ್ತ್ರಿ, ಪ್ರೊ. ಎಚ್.ಆರ್.ಶಂಕರನಾರಾಯಣಶಾಸ್ತ್ರಿ, ಡಾ. ನಾಗಮಣಿ, ಎಸ್.ಜಿ.ಆನಂದ್, ಅಶ್ವತ್ಥನಾರಾಯಣ ಶೆಟ್ಟಿ, ಬಸವರಾಜ್ ಕಂದಗಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net