ಹಣ ಸಂಪಾದನೆಯೊಂದಿಗೆ ಪುಣ್ಯದ ಕೆಲಸವನ್ನೂ ಮಾಡಿ

1001180760
ಪಾಂಡವಪುರ ತಾಲೂಕಿನ ಅಲ್ಪಹಳ್ಳಿ ಗ್ರಾಮದಲ್ಲಿ ಶ್ರೀ ವರಸಿದ್ಧಿ ಕಾಲಭೈರವೇಶ್ವರ ಸೇವಾ ಟ್ರಸ್ಟ್ ವತಿಯಿಂದ ನಡೆದ ಶ್ರೀ ಕಾಲಭೈರವೇಶ್ವರ ನೂತನ ದೇವಸ್ಥಾನ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಸಾಯಿ ಕೀರ್ತಿನಂದನಾಥ ಸ್ವಾಮೀಜಿ, ಶ್ರೀ ಸತ್ಯಕೀರ್ತಿನಂದನಾಥ ಸ್ವಾಮೀಜಿ, ಶ್ರೀ ತ್ರಿಶೋಬೊನಂದ ಸ್ವಾಮೀಜಿ, ಈರಣ್ಣ, ಪವನ್, ರವಿ, ಅಂಬರೀಷ್ ಇತರರಿದ್ದರು.
Published on

ಪಾಂಡವಪುರ: ಪ್ರೀತಿ, ನಿಷ್ಕಲ್ಮಶ ಭಕ್ತಿಯಿಂದ ಮಾತ್ರ ಭಗವಂತನನ್ನು ಕಾಣಲು ಸಾಧ್ಯ ಎಂದು ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ತಾಲೂಕಿನ ಅಲ್ಪಹಳ್ಳಿ ಗ್ರಾಮದಲ್ಲಿ ಶ್ರೀ ವರಸಿದ್ಧಿ ಕಾಲಭೈರವೇಶ್ವರ ಸೇವಾ ಟ್ರಸ್ಟ್ ಗುರುವಾರ ಆಯೋಜಿಸಿದ್ದ ಶ್ರೀ ಕಾಲಭೈರವೇಶ್ವರ ನೂತನ ದೇವಸ್ಥಾನ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ದೇವರ ಮೇಲೆ ಪ್ರೀತಿ, ಭಕ್ತಿ, ನಂಬಿಕೆ ಬೆಳೆಸಿಕೊಂಡು ಪೂಜ್ಯನೀಯ ಮನೋಭಾವದಿಂದ ನೋಡಿದರೆ ಮಾತ್ರ ಭಗವಂತನ ಸಾಕ್ಷಾತ್ಕಾರ ಪಡೆದುಕೊಳ್ಳಬಹುದು. ಮನುಷ್ಯರಾದ ನಾವು ಹಣ, ಅಧಿಕಾರದ ಹಿಂದೆ ಓಡುತ್ತಿದ್ದೇವೆ. ಹಣ ಸಂಪಾದನೆಯ ಜತೆಗೆ ಸಾಧ್ಯವಾದಷ್ಟು ಪುಣ್ಯದ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಶ್ರೀ ಸಾಯಿ ಕೀರ್ತಿನಂದನಾಥ ಸ್ವಾಮೀಜಿ ಮಾತನಾಡಿ, ದೇವರ ಮೇಲೆ ನಂಬಿಕೆ ಇಟ್ಟುಕೊಂಡು ಭಕ್ತಿಯಿಂದ ಸಂಕಲ್ಪ ಮಾಡಿಕೊಂಡರೆ ಆ ಕೆಲಸ ಖಂಡಿತವಾಗಿಯೂ ಈಡೇರುತ್ತದೆ. ಅಲ್ಪಳ್ಳಿ ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಅಲ್ಲದೆ ಅಲ್ಪಳ್ಳಿ ಗ್ರಾಮದಲ್ಲಿ ಸುಗ್ರೀವನ ದೇವಸ್ಥಾನವನ್ನು ನಿರ್ಮಿಸಿ ಪೂಜಿಸುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.

ಶ್ರೀ ರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡು ದೇವರ ಮೇಲಿನ ಭಕ್ತಿ ಕಳೆದುಕೊಂಡು ಆಸ್ತಿಕರಿಂದ ನಾಸ್ತಿಕರಾಗುತ್ತಿದ್ದಾರೆ. ನಾವೆಲ್ಲರೂ ಮಾಡುವ ಕೆಲಸದಲ್ಲಿ, ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಆಗಮಿಸಿ ಶಿಲಾನ್ಯಾಸಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಚುಂಚನಗಿರಿ ಶಾಖಾ ಮಠದ ಶ್ರೀ ಸತ್ಯಕೀರ್ತಿನಂದನಾಥ ಸ್ವಾಮೀಜಿ, ಗವಿಮಠದ ಶ್ರೀ ಚನ್ನವೀರ ಸ್ವಾಮೀಜಿ, ಮಠದ ಸಂಸ್ಥಾಪಕರಾದ ಶ್ರೀ ತ್ರಿಶೋಬೊನಂದ ಸ್ವಾಮೀಜಿ, ಕೆ.ಆರ್.ಪೇಟೆ ಬಸವಣ್ಣ, ಭೂದಾನಿ ವೆಂಕಟೇಶಪ್ಪ, ಗ್ರಾಪಂ ಉಪಾಧ್ಯಕ್ಷ ಮಂಜು, ತಾಪಂ ಮಾಜಿ ಸದಸ್ಯ ಗೋವಿಂದಯ್ಯ, ಬನ್ನಂಗಾಡಿ ಶಿವೇಗೌಡ, ಟ್ರಸ್ಟಿಗಳಾದ ಈರಣ್ಣ, ಪವನ್, ರವಿ, ಅಂಬರೀಷ್, ಗಿರಿಧರ್, ನಂಜುಂಡಸ್ವಾಮಿ, ನಾರಾಯಣಸ್ವಾಮಿ, ಪ್ರಶಾಂತ್, ಭೈರಪ್ಪ, ಶಿವಪ್ಪ, ಕುಮಾರ್, ಸತೀಶ್, ಚಲುವರಾಜು, ಕೀರ್ತಿ, ರಂಗನಾಥ್, ಶ್ವೇತಾ, ಸಂತೋಷ್, ಅವಿನಾಶ್, ಯ.ಗುರುಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net