

Ants : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ. ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಲ್ಲೂ ಒಂದೊಂದು ವಿಶೇಷತೆ ಮತ್ತು ವಿಚಿತ್ರ ಗುಣಗಳಿರುತ್ತವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಹುಬ್ಬೇರುತ್ತದೆ. ಕೆಲವೊಂದು ಜೀವಿಗಳ ವರ್ತನೆಗಳು ಎಷ್ಟೊಂದು ವಿಚಿತ್ರವಾಗಿವೆ ಅಂದರೆ ನಿಜಕ್ಕೂ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಇದೀಗ ಅಂಥದ್ದೇ ಜೀವಿಯೊಂದರ ಬಗ್ಗೆ ನಾವಿಂದು ತಿಳಿಸಿಕೊಡುತ್ತೇವೆ.
ನಾವು ವಾಸಿಸುವ ಜಗತ್ತಿನಂತೆ, ಇರುವೆಗಳಿಗೂ ಒಂದು ಪ್ರತ್ಯೇಕ ಪ್ರಪಂಚ ಇದೆಯೆಂಬುದು ನಿಮಗೆ ಗೊತ್ತೇ? ನಮ್ಮಂತೆಯೇ ಅವುಗಳಿಗೂ ನಗರಗಳಿವೆ. ಅವು ನಮ್ಮಂತೆಯೇ ಗುಂಪಾಗಿ ವಾಸಿಸುತ್ತವೆ. ಅವುಗಳ ಸಾಮ್ರಾಜ್ಯದಲ್ಲೂ ರಾಜ ರಾಣಿಯರಿದ್ದಾರೆ. ವಿವಿಧ ಕೆಲಸಗಳಿಗೆ ಸೇವಕರಿದ್ದಾರೆ. ಅತ್ಯಂತ ದೊಡ್ಡ ಪ್ರಾಣಿಯನ್ನೂ ಎದುರಿಸುವ ಸಾಮರ್ಥ್ಯವುಳ್ಳ ಸೈನ್ಯಗಳೂ ಇವೆ. ಇದು ಕೇಳಲು ಅಚ್ಚರಿ ಎನಿಸಿದರೂ ಇದುವೇ ಸತ್ಯ.
ಅಂದಹಾಗೆ ನಮ್ಮ ಜಗತ್ತಿನಲ್ಲಿ 2000ಕ್ಕೂ ಹೆಚ್ಚು ಬಗೆಯ ಇರುವೆಗಳಿವೆ. ಇವುಗಳಲ್ಲಿ ಅತಿ ದೊಡ್ಡ ಇರುವೆ ಆಫ್ರಿಕಾದಲ್ಲಿ ಕಾಣಸಿಗುತ್ತದೆ. ಅದರ ಉದ್ದ ಮೂರು ಅಂಗುಲ. ಇರುವೆಗಳು ಗುಂಪು ಗುಂಪಾಗಿ ವಾಸಿಸುತ್ತವೆ. ಈ ಗುಂಪುಗಳಲ್ಲಿ ದೊಡ್ಡದೂ ಇವೆ. ಸಣ್ಣವೂ ಇವೆ.
ಪ್ರತಿಯೊಂದು ವರ್ಗದ ಇರುವೆಗಳಿಗೂ ಪ್ರತ್ಯೇಕ ಸೈನ್ಯವಿರುತ್ತದೆ. ಅದು ಇನ್ನೊಂದು ವರ್ಗದ ಇರುವೆಗಳ ಮೇಲೆ ಎರಗುತ್ತವೆ. ಬಲಿಷ್ಟ ಇರುವೆಗಳು ದುರ್ಬಲ ಇರುವೆಗಳನ್ನು ಓಡಿಸುತ್ತವೆ. ಅಷ್ಟೇ ಅಲ್ಲ ಅವುಗಳ ಮೊಟ್ಟೆಗಳನ್ನೂ ಸಹ ವಶಪಡಿಸಿಕಳ್ಳುತ್ತವೆ. ಈ ಮೊಟ್ಟೆಗಳಿಂದ ಹೊರಬರುವ ಇರುವೆಗಳನ್ನು ಅವು ತಮ್ಮ ಗುಲಾಮರಂತೆ ಬಳಸಿಕೊಳ್ಳುತ್ತವೆ.
ಒಂದು ವರ್ಗಕ್ಕೆ ಸೇರಿದ ಲಕ್ಷೋಪಲಕ್ಷ ಇರುವೆಗಳು ಒಂದು ದೇಶದ ಪ್ರಜೆಗಳಂತೆ ವಾಸಿಸುತ್ತವೆ. ಇವುಗಳಲ್ಲಿ ರಾಜ, ರಾಣಿ ಮತ್ತು ಇತರ ಸೇವಕರಿರುತ್ತಾರೆ. ರಾಜ ಆಡಳಿತ ನೋಡಿಕೊಂಡರೆ, ರಾಣಿ ಕೆಲಸಗಾರ ಇರುವೆಗಳಿಂದ ನಾನಾ ಬಗೆಯ ಕೆಲಸಗಳನ್ನು ಮಾಡಿಸುತ್ತದೆ. ಗುಲಾಮ ಇರುವೆಗಳು ತಮ್ಮ ಜೀವನವಿಡೀ ದುಡಿಯುತ್ತವೆ. ಗಂಡು ಮತ್ತು ಹೆಣ್ಣು ಇರುವೆಗಳು ಒಂದನ್ನೊಂದು ವರಿಸುತ್ತವೆ. ರೈತ ಇರುವೆ ಇತರ ಇರುವೆಗಳಿಗೆ ಆಹಾರ ಶೇಖರಿಸುತ್ತದೆ.
ಕೆಲವು ಇರುವೆಗಳು ಮಾಂಸಹಾರಿಗಳು. ಈ ಇರುವೆಗಳು ಆಹಾರ ಹುಡುಕಿಕೊಂಡು ಸಾಗಿ, ತಮ್ಮ ಬಲೆಗೆ ಬಿದ್ದ ಪ್ರಾಣಿಯ ಮಾಂಸವನ್ನು ತಿಂದುಹಾಕುತ್ತವೆ.