15ರಂದೇ ಜಂಟಿ ಸರ್ವೇ ಮಾಡಿ

High court logo
Published on

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜಿಂಗಾಲಕುಂಟೆ ಅರಣ್ಯ ಜಮೀನು ಜಂಟಿ ಸರ್ವೇ ವಿಚಾರವಾಗಿ, ಕಂದಾಯ ಇಲಾಖೆ ವಿಭಾಗೀಯ ಆಯುಕ್ತರು (ಆರ್​ಸಿ) ಮಧ್ಯ ಪ್ರವೇಶ ಮಾಡಿರುವುದಕ್ಕೆ ಹೈಕೋರ್ಟ್​ ಛೀಮಾರಿ ಹಾಕಿದೆ.

ಮಾಜಿ ಸ್ಪೀಕರ್​ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಹೊಸಹುಡ್ಯ ಸರ್ವೇ ನಂ& 1 ಮತ್ತು 2 ರ ಪೈಕಿ 62.39 ಎಕರೆ ಜಮೀನು ಜಂಟಿ ಸರ್ವೇಗೆ 2013ರಲ್ಲಿ ಹೈಕೋರ್ಟ್​ ಆದೇಶಿಸಿತ್ತು. ಅಂದಿನಿಂದ ವಿಳಂಬ ಮಾಡಿಕೊಂಡು ಬಂದಿದ್ದ ಹಿನ್ನೆಲೆಯಲ್ಲಿ ಅರಣ್ಯ ಉಪ ಸಂರಣಾಧಿಕಾರಿ ಏಡುಕೊಂಡಲು, ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸರ್ವೇಗೆ ಕ್ರಮವಹಿಸಿದ್ದರು. ಇದಕ್ಕೆ ಎರಡು ಬಾರಿ ದಿನಾಂಕ ನಿಗದಿಯಾಗಿತ್ತು.

ಆದರೆ, ಮೊದಲ ಬಾರಿ ತಾಂತ್ರಿಕ ಕಾರಣ ನೀಡಿ ಮುಂದೂಡಿದರೆ, ಎರಡನೇ ಬಾರಿ ಆರ್​ಸಿ ಮಧ್ಯಪ್ರವೇಶಿಸಿ ಕಂದಾಯ ಅಧಿಕಾರಿಗಳು ಗೈರಾಗಲು ಸೂಚಿಸಿದ್ದರು. ಆದ್ದರಿಂದ ಜ.2ಕ್ಕೆ ಮುಂದೂಡಲಾಯಿತಾದರೂ, ಡಿಸಿ ವರ್ಗಾವಣೆಯಿಂದ ಸಭೆ ನಡೆಸಿ 3ನೇ ಬಾರಿಯೂ ಮುಂದೂಡಲಾಯಿತು.

ಇದರ ನಡುವೆ, ಕಂದಾಯ ಇಲಾಖೆಯ ವಿಭಾಗೀಯ ಆಯುಕ್ತರು ಕೋರ್ಟ್​ ಆದೇಶ ಉಲ್ಲಂಸಿದ್ದಾರೆ ಎಂದು ವಕೀಲ ಶಿವಾರೆಡ್ಡಿ ಹೈಕೋರ್ಟ್​ನಲ್ಲಿ ರಿಟ್​ ಅರ್ಜಿ ದಾಖಲಿಸಿದ್ದರು. ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು ಅವರ ಪೀಠದ ನ್ಯಾಯಮೂರ್ತಿಗಳು, ಈಗಾಗಲೇ 14 ವರ್ಷ ವಿಳಂಬವಾಗಿದೆ. ಇದರ ನಡುವೆ ಪ್ರಾದೇಶಿಕ ಆಯುಕ್ತರ ಅನಧಿಕೃತ ಪ್ರವೇಶದಿಂದ ನ್ಯಾಯಾಲಯ ತೀರ್ಪಿನ ಉಲ್ಲಂನೆಯಾಗಿರುವುದರಿಂದ ಅವರ ಆದೇಶ ರದ್ದು ಮಾಡಿದರು.

ಈಗಾಗಲೇ ನಿಗದಿಯಾಗಿರುವ ಜ.15ರಂದು ಜಂಟಿ ಸರ್ವೇಯನ್ನು ನಡೆಸಬೇಕು. ಜಂಟಿ ಸರ್ವೇ ಅರಣ್ಯ ಇಲಾಖೆ ಜವಾಬ್ದಾರಿಯಾಗಿರುತ್ತದೆ. ಜಿಲ್ಲಾಧಿಕಾರಿ, ಡಿಡಿಎಲ್​ಆರ್​ ಮತ್ತು ಒತ್ತುವರಿದಾರ ರಮೇಶ್​ ಕುಮಾರ್​ ಕಡ್ಡಾಯವಾಗಿ ಸರ್ವೇ ಕಾರ್ಯದಲ್ಲಿ ಭಾಗವಹಿಸಬೇಕು. ಜಿಲ್ಲಾಧಿಕಾರಿಗಳು ಒತ್ತುವರಿದಾರರಾದ ರಮೇಶ್​ಕುಮಾರ್​ಗೆ ನೋಟಿಸ್​ ಕೊಟ್ಟು ಸರ್ವೇ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಬೇಕು ಎಂದು ಹೈಕೋರ್ಟ್​ ತಿಳಿಸಿದೆ.

ರಮೇಶ್​ಕುಮಾರ್​ ಸರ್ವೇ ಕಾರ್ಯದಲ್ಲಿ ಭಾಗವಹಿಸದಿದ್ದರೂ ಸರ್ವೇ ಪೂರ್ಣಗೊಳಿಸಬೇಕು ಎಂದೂ ತಾಕೀತು ಮಾಡಿದ್ದು, ಮುಂದೆ ಅವರು ಈ ವಿಷಯದಲ್ಲಿ ಯಾವುದೇ ಅಪೀಲು ಹೋಗುವ ಅಧಿಕಾರ ಇರುವುದಿಲ್ಲ. ಈಗಾಗಲೇ ಅವರೇ ಕೋರಿರುವಂತೆ ಜಂಟಿ ಸರ್ವೇ ನಡೆಸಲು ಹೈಕೋರ್ಟ್​ ನಿರ್ದೇಶನ ಕೊಟ್ಟಿದ್ದರೂ ಅವರು ಪದೇಪದೆ ಗೈರಾಗಿ, ನ್ಯಾಯಾಲಯದ ನಿರ್ದೇಶನದ ಜಾರಿಗೆ ಅಡ್ಡಿಪಡಿಸುತ್ತಿದ್ದಾರೆ. ಆದ್ದರಿಂದ ಈಗ ನಿರ್ದೇಶಿಸಿರುವ ಜಂಟಿ ಸರ್ವೇ ಕಾರ್ಯವನ್ನು ಜ.15ರಂದು ಮುಗಿಸಿ ಜ.30ರ ಒಳಗಡೆ ವರದಿ ಒಪ್ಪಿಸಿ ಮುಂದಿನ ಕ್ರಮ ಜರುಗಿಸಬೇಕೆಂದು ನ್ಯಾಯಾಲಯ ಹೇಳಿದೆ.

ಪ್ರಾದೇಶಿಕ ಆಯುಕ್ತರು ಹೈಕೋರ್ಟ್​ನ ನಿರ್ದೇಶನ ಉಲ್ಲಂನೆ ಮಾಡಿ ಸರ್ವೇ ಸಮಿತಿ ರಚಿಸಿರುವುದು, ಕಾರ್ಯದಲ್ಲಿ ಗೊಂದಲ ಸೃಷ್ಟಿಸಿರುವುದು ಹೈಕೋರ್ಟ್​ ಆದೇಶದ ಉಲ್ಲಂನೆಯಾಗಿದೆ ಎಂದೂ ಅಭಿಪ್ರಾಯಪಟ್ಟಿದೆ.

* ಡಿಸಿಎಫ್​ ಏಡಿಕೊಂಡಲು ವರ್ಗಾವಣೆ

ಮಾಜಿ ಸ್ಪೀಕರ್​ ಕೆ.ಆರ್​.ರಮೇಶ್​ ಕುಮಾರ್​ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಹೊಸಹುಡ್ಯ ಅರಣ್ಯ ಜಮೀನು ಜಂಟಿ ಸರ್ವೇ ಮುಗಿಯುವ ಮುನ್ನವೇ ಡಿಸಿಎಫ್ ಏಡುಕೊಂಡಲು ಅವರನ್ನು ಸರ್ಕಾರ ಮಂಗಳವಾರ ವರ್ಗಾವಣೆ ಮಾಡಿ ಆದೇಶಿದೆ.

ಜಿಲ್ಲೆಯಲ್ಲಿ ಅರಣ್ಯ ಜಮೀನು ಒತ್ತುವರಿ ತೆರವು ಮಾಡಿ 2,000 ಎಕರೆಗೂ ಹೆಚ್ಚು ಜಮೀನನ್ನು ಅರಣ್ಯ ವಶಕ್ಕೆ ಪಡೆದು, ರಾಜ್ಯ, ದೇಶದ ಗಮನ ಸೆಳೆದಿದ್ದರು. ಹೊಸಹುಡ್ಯ ಜಮೀನು ಜಂಟಿ ಸರ್ವೇಗೆ ಗಟ್ಟಿ ಪ್ರಯತ್ನ ಮಾಡಿದ್ದರು. ಇದಕ್ಕೆ ರಾಜ್ಯ ಸರ್ಕಾರವು ಕಂದಾಯ ಅಧಿಕಾರಿಗಳನ್ನು ಮಧ್ಯ ಪ್ರವೇಶ ಮಾಡಿಸಿ, ವಿನಾಕಾರಣ ಮುಂದೂಡಿಕೊಂಡು ಬರುತ್ತಿದ್ದರು. ಇದರ ನಡುವೆ ಮಂಗಳವಾರ ಏಡುಕೊಂಡಲು ಅವರ ವರ್ಗಾಣೆಯಿಂದ ಜಂಟಿ ಸರ್ವೇ ಕಾರ್ಯವು ನಡೆಯುತ್ತಾ, ಬಿಡುತ್ತಾ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಕೋಲಾರ ಜಿಲ್ಲಾ ಉಪ ಅರಣ್ಯ ಸಂರಣಾಧಿಕಾರಿಯಾಗಿದ್ದ ಏಡುಕೊಂಡಲು ಅವರಿಗೆ ಬಡ್ತಿ ನೀಡಿ, ಹಾಸನ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net